| ಬೇಲೂರು ಹರೀಶಬೆಂಗಳೂರು:ರೈತರಿಗೆ ಹಣದ ಆಮಿಷವೊಡ್ಡಿ ಗುತ್ತಿಗೆಗೆ ಪಡೆದ ಅವರ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಬ್ಬಿನ ಗದ್ದೆ ಹಾಗೂ ಹೊಲಗಳಲ್ಲಿ ಗಾಂಜಾ ಬೆಳೆದಿರುವುದನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದೆ. ಗುತ್ತಿಗೆ ಪಡೆದವರು ತಪ್ಪಿಸಿಕೊಳ್ಳುತ್ತಿದ್ದು, ಜಮೀನಿನ ಮೂಲ ಮಾಲೀಕರಾದ ಅಮಾಯಕ ರೈತರ ವಿರುದ್ಧ ಕೇಸ್ ಬೀಳುತ್ತಿದೆ.
ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳನ್ನು ಹತ್ತಿಕ್ಕಲು ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಹಾಗೂ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲು ನಿರ್ಧರಿಸಲಾಗಿದೆ. ಪೊಲೀಸ್ ಇಲಾಖೆ ಜತೆ ಸಮನ್ವಯ ಸಾಧಿಸಿ ಮಾದಕ ವಸ್ತುಗಳನ್ನು ನಿಮೂಲನೆ ಮಾಡಲಾಗುವುದು.| ಎಚ್. ನಾಗೇಶ್,ಅಬಕಾರಿ ಸಚಿವ
2019ರ ಜು.1ರಿಂದ 2020ರ ಜೂ.30ರವರೆಗೆ ಅಬಕಾರಿ ಇಲಾಖೆ ರಾಜ್ಯಾದ್ಯಂತ ನಡೆಸಿದ ದಾಳಿಯಲ್ಲಿ 1060 ಗಾಂಜಾ ಗಿಡ ಹಾಗೂ 445 ಕೆಜಿ ಗಾಂಜಾ ವಶಪಡಿಸಿಕೊಂಡಿದೆ. ಬರಡು ಭೂಮಿ ಹಾಗೂ ಕಾಲುವೆ ಬದಿಗಳಲ್ಲೂ ಗಾಂಜಾ ಬೆಳೆಯುತ್ತಿರುವ ಶಂಕೆ ಇದೆ. ಒಂದು ವರ್ಷದಲ್ಲಿ 100ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ ಎನ್​ಡಿಪಿಎಸ್ ಕಾಯ್ದೆಯಡಿ 5-10 ವರ್ಷದವರೆಗೆ ಶಿಕ್ಷೆ, 10-20 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.
ಇದನ್ನೂ ಓದಿ:ಮುಂಜಾನೆ 4ಗಂಟೆಗೆ ಮನೆಯೊಳಗೆ ನುಗ್ಗಿದ…; ಮುಂದೆ ಆಗಿದ್ದೆಲ್ಲ ದುರಂತ
ರೈತರಿಗೆ ವಂಚನೆ: ಡ್ರಗ್ಸ್ ದಂಧೆಕೋರರು ರೈತರಿಗೆ ಕೇಳಿದಷ್ಟು ಹಣ ನೀಡಿ ಅವರ ಜಮೀನು ಹಾಗೂ ಗದ್ದೆಗಳನ್ನು 3 ವರ್ಷಗಳವರೆಗೆ ಗುತ್ತಿಗೆ ಪಡೆದು ಕಬ್ಬು ಮತ್ತಿತರರ ಬೆಳೆಗಳ ಮಧ್ಯೆ ಹೆಚ್ಚಾಗಿ ಗಾಂಜಾ ಬೆಳೆದು ಕೋಟ್ಯಂತರ ರೂ. ಹಣ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆ ಅವಧಿ ಮುಗಿದ ಬಳಿಕ ದಂಧೆಕೋರರು ಸದ್ದಿಲ್ಲದೆ ಪರಾರಿ ಆಗುತ್ತಿದ್ದಾರೆ. ಒಂದು ವೇಳೆ ಸಿಕ್ಕಿಬಿದ್ದರೆ ಅಮಾಯಕ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಗುತ್ತಿಗೆ ನೀಡುವ ಮುನ್ನ ರೈತರು ಎಚ್ಚರವಹಿಸಬೇಕಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ:ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ
ಬಳ್ಳಾರಿಯಲ್ಲೇ ಹೆಚ್ಚು ಗಾಂಜಾ ಗಿಡ: ಬಳ್ಳಾರಿಯಲ್ಲಿ ಅತಿ ಹೆಚ್ಚು ಎಂದರೆ 535 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದಲ್ಲಿ 121, ವಿಜಯಪುರದಲ್ಲಿ 114, ಯಾದಗಿರಿಯಲ್ಲಿ 101, ತುಮಕೂರಿನಲ್ಲಿ 75, ಹಾಸನದಲ್ಲಿ 50, ಗದಗದಲ್ಲಿ 45, ದಾವಣಗೆರೆಯಲ್ಲಿ 09, ಚಿಕ್ಕಮಗಳೂರಿನಲ್ಲಿ 08 ಹಾಗೂ ಬೆಂಗಳೂರಿನಲ್ಲಿ 2 ಗಾಂಜಾ ಗಿಡಗಳ ವಶಪಡಿಸಿಕೊಂಡಿದೆ. ಒಂದು ವರ್ಷದ ಬೆಳೆ: ಸಾಮಾನ್ಯವಾಗಿ ಗಾಂಜಾ ಗಿಡವನ್ನು ಕಬ್ಬು ಮತ್ತಿತರರ ಬೆಳೆಗಳ ಮಧ್ಯೆ ಒಂದು ವರ್ಷದವರೆಗೆ ಬೆಳೆಯಲಾಗುತ್ತದೆ. ಒಂದು ಗಾಂಜಾ ಗಿಡಕ್ಕೆ ಅಂದಾಜು 5-7 ಕೆಜಿವರೆಗೆ ಹಸಿ ಗಾಂಜಾ ಸಿಗುತ್ತದೆ. ಅದನ್ನು ಒಣಗಿಸಿ ಮುಕ್ತ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ.ಗೆ ಮಾರುತ್ತಿದ್ದಾರೆ.
50 ಕೋಟಿ ರೂಪಾಯಿ ಪಿಡಿಎಸ್ ಹಗರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
