ಚಿಕ್ಕಬಳ್ಳಾಪುರ: ಕೃಷಿ ಇಲಾಖೆ ಹಾಗೂ ಜಾಗೃತಿ ದಳ ವಿಭಾಗದ ಅಧಿಕಾರಿಗಳ ತಂಡವು ಜಂಟಿ ಕಾರ್ಯಾಚರಣೆ ಕೈಗೊಂಡು ಅಕ್ರಮ ಸಾಗಾಣೆಯ 15 ಲಕ್ಷ ರೂ ಮೌಲ್ಯದ ಯೂರಿಯಾ ರಸಗೊಬ್ಬರವನ್ನು ವಶಕ್ಕೆ ಪಡೆದುಕೊಂಡಿದ್ದು ಲಾರಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಹಾಯಧನದಡಿ ಪೂರೈಕೆಯ ರಸಗೊಬ್ಬರವನ್ನು ರೈತರಿಗೆ ವಿತರಿಸದೇ ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರಲ್ಲಿ ಯಾರ ಕೈವಾಡ ಇದೆ ಎನ್ನುವುದರ ತನಿಖೆ ನಡೆಸಲಾಗುತ್ತಿದೆ.ಜಂಟಿ ಕೃಷಿ ನಿರ್ದೇಶಕಿ ಜಾವೀದ್ ನಸೀಮ್ ಖಾನ್ ನೇತೃತ್ವದ ಅಧಿಕಾರಿಗಳ ತಂಡವು ರಾಯಚೂರು ಜಿಲ್ಲೆಯಿಂದ ಬಾಗೇಪಲ್ಲಿ ಮಾರ್ಗವಾಗಿ ಹೊರ ರಾಜ್ಯಗಳಿಗೆ ಯೂರಿಯಾ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್ ಬಳಿ ಹಿಡಿದುಕೊಂಡಿದ್ದಾರೆ. ತಪಾಸಣೆ ನಡೆಸಿದಾಗ ಸಹಾಯಧನದಲ್ಲಿ ರೈತರಿಗೆ ವಿತರಿಸುವ ಉದ್ದೇಶಕ್ಕಾಗಿ ಮೀಸಲಿಟ್ಟಿರುವ 15 ಲಕ್ಷ ರೂ ಮೌಲ್ಯದ ೭೦೦ ಯೂರಿಯ ಚೀಲಗಳು ಪತ್ತೆಯಾಗಿವೆ. ಯೂರಿಯಾ ತಯಾರಿಕ ಘಟಕದಲ್ಲಿ 45 ಕೆ.ಜಿ ತೂಕವುಳ್ಳ 1 ಯೂರಿಯ ಚೀಲದ ಬೆಲೆ 2115 ರೂಗಳಿದ್ದು, ಸರ್ಕಾರವು 1850 ರೂಗಳ ಸಹಾಯಧನ ನೀಡಲಾಗುತ್ತಿದ್ದು ರೈತರಿಗೆ 750 ರೂಗಳಿಗೆ ಒಂದು ಚೀಲವನ್ನು ಮಾರಲಾಗುತ್ತಿದೆ. ರೈತರಿಗೆ ವಿತರಿಸುವ ರಿಯಾಯತಿ ದರದ ಯೂರಿಯಾವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇದರ ನಡುವೆ ಸರ್ಕಾರಿ ನಿಯಮ ಉಲ್ಲಂಘಿಸಿ ಕೃಷಿ ಬಳೆಕೆಯ ಯೂರಿಯಾನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ.ರೈತರಿಗೆ ತಲುಪಬೇಕಾಗಿರುವ ಯೂರಿಯಾವನ್ನು ರಾಯಚೂರಿನಿಂದ ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ರೈತರಿಗೆ ವಿತರಿಸಬೇಕಾಗಿರುವ ಸಬ್ಸಿಡಿ ದರದ ಯೂರಿಯಾವನ್ನು ಫ್ಲೆವುಡ್ ತಯಾರಿಕೆಯ ವಾಣಿಜ್ಯ ಬಳಕೆಗೆ ಬಳಕೆ ಮಾಡುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾಗಾಣಿಕೆ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯ ರಸೀಧಿಯೂ ಇರಲಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಲಾರಿಯಲ್ಲಿದ್ದ ಯೂರಿಯಾವನ್ನು ವಶಕ್ಕೆ ಪಡೆದುಕೊಂಡು ಜಿಲ್ಲಾಧಿಕಾರಿಗಳ ಅದೇಶದಂತೆ ಸೊಸೈಟಿಗಳ ಮೂಲಕ ರೈತರಿಗೆ ಮಾರಲು ತೀರ್ಮಾನಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
