

ಬೆಂಗಳೂರು:ಪ್ರತಿ ಜಿಲ್ಲೆಯಲ್ಲಿಯೂ ಕೃಷಿ ಬಗ್ಗೆ ರೈತರೊಂದಿಗೆ ನೃವಾಗಿ ಸಂವಾದ ನಡೆಸಲು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮುಂದಾಗಿದ್ದಾರೆ.ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡುವುದು ಮಾಹಿತಿ ಪಡೆಯುವುದು ಮತ್ತು ನಿರ್ದೇಶನ ನೀಡುವುದಕ್ಕೆ ಮಾತ್ರವೇ ಸೀಮಿತವಾಗವಾಗುವುದು ಬೇಡ. ಆದರ ಆಚೆಗೂ ಸಮಾನ್ಯ ರೈತರ ಜೊತೆಗೆ ಒಡನಾಡುವುದು ಬಹಳ ಮುಖ್ಯ ಎನ್ನುವ ಚಿಂತನೆಯ ಹಿನ್ನೆಲೆಯಲ್ಲಿ ಸಂವಾದ ಕಾರ್ಯಕ್ರಮ ರೂಪುಗೊಂಡಿದೆ.ಕೃಷಿಯ ವಿಷಯದಲ್ಲಿ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿ ಮತ್ತು ನಿಜವಾಗಿ ತಳಮಟ್ಟದಲ್ಲಿ ಇರುವ ಮಾಹಿತಿ ಎರಡನ್ನೂ ಪರಾಮರ್ಶೆ ಮಾಡಲು ಈ ಸಂವಾದ ಕಾರ್ಯಕ್ರಮ ವೇದಿಕೆಯಾಗಲಿದೆ ಎನ್ನುವ ಕಾರಣಕ್ಕಾಗಿ ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಸಚಿವರ ಸೂಚನೆ ಮೇರೆಗೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಸಂವಾದ?ಕೃಷಿ ಸಂವಾದಗಳನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ಮಾಡುವುದಕ್ಕಿಂತಲೂ ಹೆಚ್ಚಾಗಿ ರೈತರ ಹೊಲ ಗದ್ದೆಗಳಿಗೆ ಭೇಟಿ ಮಾಡಿ ಅಲ್ಲಿಯೇ ಸಂವಾದ ಮಾಡಬೇಕು. ರೈತರು ನಿಜವಾಗಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಗ ಬೆಳಕು ಚೆಲ್ಲಲ್ಲು ಮತ್ತು ರೈತರಿಗೆ ನೆರವಾಗಲು ಕೃಷಿ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎನ್ನುವುದು ಕೃಷಿ ಸಂವಾದದ ಉದ್ದೇಶವಾಗಿದೆ.
ಚಿತ್ರದುರ್ಗದಲ್ಲಿ ಸಂವಾದಮುಂದಿನ ವಾರ ಚಿತ್ರದುರ್ಗ ಜಿಲ್ಲೆಯಿಂದಲೇ ಸಂವಾದ ಕಾರ್ಯಕ್ರಮ ಪ್ರಾರಂಭಿಸಲು ಸಚಿವ ಚಲುವರಾಯಸ್ವಾಮಿ ಅವರು ಒಲವು ತೋರಿಸಿದ್ದು, ಈಗಾಗಲೇ ಈ ಬಗ್ಗೆ ಸಿದ್ಧತೆಗೂ ಸೂಚನೆಗಳನ್ನು ನೀಡಲಾಗಿದೆ ಎಂದು ಆಪ್ತ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಸಂವಾದದ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ಸಂವಾದದ ನೀಲ ನಕ್ಷೆ ರೂಪಿಸಲು ಸಾಧ್ಯವಾಗಲಿದೆ ಎಂದು ನಿರ್ಧರಿಸಲಾಗಿದೆ.
ರೈತರೊಂದಿಗೆ ನೇರ ಸಂಪರ್ಕಜಡ್ಡುಗಟ್ಟಿರುವ ಕೃಷಿ ಇಲಾಖೆಗೆ ಹೊಸ ಚಲನೆ ನೀಡಬೇಕು ಎನ್ನುವುದು ಕೃಷಿ ಸಚಿವರ ತುಡಿತವಾಗಿದೆ. ರೈತರ ಜೊತೆಗೆ ನೇರವಾಗಿ ಸಂಪರ್ಕವನ್ನು ಇಟ್ಟುಕೊಂಡು ಸಂವಾದ ನಡೆಸುವುದರಿಂದ ಅಧಿಕಾರಿಗಳು ತಪ್ಪು ಮಾಹಿತಿ ನೀಡುವುದು ತಪ್ಪುತ್ತದೆ. ಇನ್ನಷ್ಟು ಎಚ್ಚರಿಕೆ ಮತ್ತು ಜವಬ್ದಾರಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳು ರೈತರಿಗೆ ಪೂರಕವೊ? ಮಾರಕವೋ? ಎನ್ನುವ ಪರಾಮರ್ಶೆಯೂ ನಡೆಯುತ್ತದೆ. ಎಲ್ಲೆಲ್ಲಿ ಲೋಪಗಳಾಗುತ್ತಿವೆ ಎನ್ನುವುದನ್ನು ಸರಿಪಡಿಸಿಕೊಂಡು ಕೃಷಿ ಇಲಾಖೆಯನ್ನು ಸಧೃಢವಾಗಿ ರೈತರ ಇಲಾಖೆಯಾಗಿ ರೂಪಿಸಲು ಸಾಧ್ಯವಾಗುತ್ತದೆ ಎನ್ನುವುದು ಕೃಷಿ ಸಂವಾದದ ಆಶಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ರೈತರ ಪರ ಎನ್ನುವುದನ್ನು ಸಾಭೀತುಪಡಿಸಲು ಇಂಥಹ ಕಾರ್ಯಕ್ರಮಗಳು ಇನ್ನಷ್ಟು ಪರಿಣಾಮಕಾರಿ ಆಗಲಿವೆ ಎನ್ನುವುದು ಸಂವಾದದ ದೂರದೃಷ್ಟಿ ಮಾತ್ತು ಸರ್ಕಾರದ ಆಶಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*ಕೃಷಿ ಇಲಾಖೆ ಪೂರ್ಣವಾಗಿ ರೈತರಿಗೆ ಸಂಬಂದಿಸಿದ್ದು. ಆದ್ದರಿಂದ ಕೃಷಿ ಬಗ್ಗೆ ರೈತರೊಂದಿಗೆ ನೇರ ಸಂವಾದ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಿದ್ದೇನೆ.-ಎನ್.ಚಲುವರಾಯಸ್ವಾಮಿ,ಕೃಷಿ ಸಚಿವರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
