ಬೈಂದೂರು:ಇವರು ಹುಟ್ಟಿನಿಂದಲೇ ಅಂಗವಿಕಲ ವ್ಯಕ್ತಿ. 58ರ ಹರೆಯದಲ್ಲೂ ಬತ್ತದ ಉತ್ಸಾಹ. ಸ್ವಾವಲಂಬಿ ಜೀವನದ ಕನಸು ಕಂಡು ಇದಕ್ಕಾಗಿ ಆಯ್ದುಕೊಂಡಿದ್ದು ಕೃಷಿ ಕ್ಷೇತ್ರ. ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಜಡ್ಕಲ್ ಗ್ರಾಮದ ಮುದೂರು-ಉದಯನಗರದ ನಿವಾಸಿ ಬಾಲಕೃಷ್ಣನ್ ವಿ. ಅವರ ಸ್ವಾವಲಂಬಿ ಜೀವನ ಎಲ್ಲರಿಗೂ ಮಾದರಿ.
ಅಂಗವೈಕಲ್ಯ ಮೆಟ್ಟಿ ನಿಂತು, ತನ್ನ ಒಂದು ಎಕರೆ ಜಾಗದಲ್ಲಿ ಪ್ರತಿ ವರ್ಷ ಸುಮಾರು 5ರಿಂದ 6 ಸಾವಿರದಷ್ಟು ಗಿಡಗಳನ್ನು ಬೆಳೆಸುವ ನರ್ಸರಿ ಪ್ಲಾಂಟೇಷನ್ ನಿರ್ಮಿಸಿದ್ದಾರೆ. ಈ ನರ್ಸರಿಯಲ್ಲಿ ಗಿಡಗಳನ್ನು ನೆಡುವ, ಮಣ್ಣು, ಗೊಬ್ಬರ ಹಾಕುವ, ಔಷಧ ಸಿಂಪಡಿಸುವುದು ಸೇರಿದಂತೆ ಬಹುತೇಕ ಎಲ್ಲ ಕೆಲಸಗಳನ್ನು ತಾವೆೇ ಸ್ವತಃ ಮಾಡುತ್ತಾರೆ.
ಉತ್ತಮ ಗುಣಮಟ್ಟದ ಫಸಲು ನೀಡುವ ರಬ್ಬರ್, ಕಾಳುಮೆಣಸು, ಅಡಕೆ, ಗೇರು, ಮಾವು ಹಾಗೂ ನಾನಾ ಔಷಧೀಯ ಸಸ್ಯಗಳನ್ನು ಸೇರಿದಂತೆ ಕಡಿಮೆ ಖರ್ಚಿನಲ್ಲಿ ಗಿಡಗಳನ್ನು ಬೆಳೆಸಿ ಜನರ ಬೇಡಿಕೆ ಮೇರೆಗೆ ನಿಗದಿತ ಬೆಲೆಗೆ ಮಾರಾಟ ಮಾಡಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ವೃದ್ಧ ತಾಯಿ, ತಮ್ಮ ವೇಣುಗೋಪಾಲ್ ವಿ. ಹಾಗೂ ಅವರ ಪತ್ನಿ ಮಕ್ಕಳೊಂದಿಗೆೆ ಒಂದೇ ಸೂರಿನಡಿ ವಾಸಿಸುವ ಇವರು ಅವಿವಾಹಿತ.
ಬಾಲ್ಯದಲ್ಲಿ ಶಾಲೆ ಮೆಟ್ಟಿಲು ಹತ್ತಿಲ್ಲವಾದರೂ ವಯಸ್ಕರ ಶಿಕ್ಷಣದ ಮೂಲಕ ಸ್ವಲ್ಪ ಮಟ್ಟಿಗೆ ಓದು-ಬರಹ ಕಲಿತಿದ್ದಾರೆ. ಇವರ ಕೊಠಡಿಯಲ್ಲಿ ಇವರದ್ದೇ ಆದ ಪುಟ್ಟ ಗ್ರಂಥಾಲಯ ಕೂಡ ಇದ್ದು, ಬಿಡುವಿನ ಕಾಲದಲ್ಲಿ ಅದರ ಬಳಕೆ ಮಾಡಿಕೊಳ್ಳುತ್ತಾರೆ. ಅಂಗವಿಕಲತೆ ಹೊಂದಿದ ಬಡ, ಕೃಷಿ ಕೂಲಿ ಕಾರ್ಮಿಕ ವ್ಯಕ್ತಿಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಹ ಮನವಿ ಪತ್ರ ಸಲ್ಲಿಸಿದ್ದು, ಅವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಹೊಸತನ ಕೃಷಿಯಲ್ಲಿ ಪ್ರಗತಿ ಸಾಧಿಸಿದ ಈ ಕೃಷಿಕನಿಗೆ ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಬೆಸ್ಟ್ ಫಾರ್ಮರ್ಸ್‌ ಅವಾರ್ಡ್, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ 2012 ಮತ್ತು 2014ರಲ್ಲಿ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಗೌರವಿಸಿದೆ.
ಕೃಷಿಕ ಬಾಲಕೃಷ್ಣನ್ ಶೇ.80ರಷ್ಟು ಅಂಗವಿಕಲತೆ ಹೊಂದಿದ್ದು, ಅವರು ಪ್ರಗತಿಪರ ಕೃಷಿಕರಾಗಿ ಸ್ವಾವಲಂಬಿ ಜೀವನ ನಡೆಸುವುದನ್ನು ಕಂಡಾಗ ಹೆಮ್ಮೆ ಅನಿಸುತ್ತಿದೆ, ಇಂತಹ ಸಾಧಕರನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸವಾಗಬೇಕಾಗಿದೆ.-ಮಂಜುನಾಥ ಹೆಬ್ಬಾರ್, ಜಿಲ್ಲಾಧ್ಯಕ್ಷರು ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ
ತಾನು ಕುಟುಂಬಕ್ಕೆ ಹೊರೆಯಾಗದೆ ಏಳವೆಯಲ್ಲಿಯೇ ಸ್ವಾವಲಂಬಿ ಜೀವನದ ಕನಸ್ಸು ಕಂಡಿದೆ ಅದರಂತೆ ಆರಂಭದಲ್ಲಿ ರೇಡಿಯೊ ರಿಪೇರಿಯ ತರಬೇತಿ ಪಡೆದಿದ್ದರೂ, ಕೃಷಿ ಕ್ಷೇತ್ರ ತನ್ನನ್ನು ಆಕರ್ಷಿಸಿದ ಹಿನ್ನೆಲೆಯಲ್ಲಿ ಇದರತ್ತ ವಾಲಿದೆ. ತನ್ನ ಒಂದು ಎಕರೆ ಜಾಗದಲ್ಲಿ ನರ್ಸರಿ ಫ್ಲಾಂಟೇಷನ್ ನಿರ್ಮಿಸಿ ಪ್ರತಿವರ್ಷ ಸಾವಿರಾರು ಗಿಡಗಳನ್ನು ಬೆಳೆಸಿ ಅದನ್ನು ಮಾರಾಟ ಮಾಡುತ್ತಿದ್ದೇನೆ.-ಬಾಲಕೃಷ್ಣನ್, ಮಾದರಿ ಕೃಷಿಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
