ಬೆಂಗಳೂರು: ಕರೊನಾ ಪರಿಣಾಮವಾಗಿ ವಲಸೆ ಕಾರ್ವಿುಕರು ನಗರಗಳಿಂದ ಹಳ್ಳಿಗಳ ಕಡೆ ಮರುವಲಸೆ ಹೋಗಿರುವುದರಿಂದ ಮುಂಗಾರಿನಲ್ಲಿ ಬಿತ್ತನೆ ಹೆಚ್ಚಾಗುವ ನಿರೀಕ್ಷೆ ಇದ್ದು, ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಲಾಕ್​ಡೌನ್ ಬಳಿಕ ಹಳ್ಳಿಗಳಿಗೆ ತೆರಳಿದ ಅರ್ಧದಷ್ಟು ಮಂದಿ ವಾಪಸ್ ಬರುವ ಸಾಧ್ಯತೆ ಕಡಿಮೆ. ಅವರು ಹಳ್ಳಿಗಳಲ್ಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದಲೇ ಸರ್ಕಾರ ಆರ್ಥಿಕ ಸಂಕಷ್ಟದ ನಡುವೆಯೂ ಕೃಷಿಗೆ ಆದ್ಯತೆ ನೀಡಲಿದೆ. ಮೇನಲ್ಲಿಯೇ ಮಳೆ ಆರಂಭವಾಗಿರುವ ಕಾರಣ ಈಗಾಗಲೇ ಎಲ್ಲೆಡೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. 22.85 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆಯಾಗಿದ್ದು 7.27 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. 8.42 ಲಕ್ಷ ಕ್ವಿಂಟಾಲ್ ಉತ್ತಮ ಬಿತ್ತನೆ ಬೀಜ ದಾಸ್ತಾನು ಇದೆ.
ಸಾಲ ಹೆಚ್ಚಳ:ಮುಂಗಾರು ಹಂಗಾಮಿಗೆ ಕೃಷಿಕರಿಗೆ ಸಹಕಾರ ಸಂಘಗಳ ಮೂಲಕ ಸಾಲ ಕೊಡುವುದಕ್ಕೆ ಆದೇಶ ಹೊರಡಿಸುವ ಸಂದರ್ಭದಲ್ಲಿಯೇ ಸಹಕಾರ ಇಲಾಖೆ ಸಾಲದ ಪ್ರಮಾಣವನ್ನು ಕಳೆದ ವರ್ಷಕ್ಕಿಂತ ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ. ಹೊಸ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂದು ಅಂದಾಜು ಮಾಡಿದೆ. ಕಾರ್ವಿುಕರು ವಾಪಸ್ ಹೋಗಿರುವುದರಿಂದಲೇ ಸಾಲ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷಕ್ಕಿಂತ 422 ಕೋಟಿ ರೂ. ಹೆಚ್ಚಿನ ಸಾಲ ನೀಡಲು ಸಿದ್ಧತೆ ಮಾಡಿಕೊಂಡಿದೆ. ನಬಾರ್ಡ್​ನಿಂದ ನೆರವು ಪಡೆಯುವ ಸಂದರ್ಭದಲ್ಲಿಯೂ ಇದೇ ಮಾಹಿತಿ ನೀಡಿ ಒಪ್ಪಿಗೆ ಪಡೆದಿದೆ.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವಾಗ ಹೆಚ್ಚುವರಿಯಾಗಿ ಮಂಜೂರು ಮಾಡಿರುವ ಸಾಲದಲ್ಲಿ ಶೇ. 50 ಮೊತ್ತವನ್ನು ಹೊಸದಾಗಿ ಅರ್ಜಿ ಹಾಕಿರುವ ರೈತರಿಗೆ ನೀಡಬೇಕೆಂದು ಷರತ್ತು ವಿಧಿಸಿದೆ. ಆ ಮೊತ್ತದಲ್ಲಿ ಹಣ ಉಳಿದಾಗ ಮಾತ್ರ ಹಳಬರಿಗೆ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಶೇ. 24.10 ಸಾಲ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನೀಡಬೇಕೆಂದು ಸರ್ಕಾರ ಹೇಳಿದೆ. ಸುಮಾರು 1 ಲಕ್ಷದಿಂದ ಎರಡು ಲಕ್ಷ ತನಕ ರೈತರು ಹೊಸದಾಗಿ ಸಾಲ ಪಡೆಯಬಹುದೆಂದು ಸರ್ಕಾರ ಅಂದಾಜು ಮಾಡಿದೆ ಎಂದು ಸಹಕಾರ ಇಲಾಖೆಯ ಮೂಲಗಳು ತಿಳಿಸುತ್ತವೆ.
ಇದನ್ನೂ ಓದಿ:#TTDForSale ಟ್ವಿಟರ್​ನಲ್ಲಿ ಟ್ರೆಂಡಿಂಗ್​: ಅನುಪಯುಕ್ತ ಆಸ್ತಿ ಮಾರಾಟಕ್ಕೆ ಟಿಟಿಡಿ ತೀರ್ಮಾನ
ಪಾಳು ಭೂಮಿ ಬಳಕೆ ನಿರೀಕ್ಷೆ: ರಾಜ್ಯದಲ್ಲಿ ಸುಮಾರು 20 ಲಕ್ಷ ಹೆಕ್ಟೇರ್​ಗಿಂತ ಹೆಚ್ಚಿನ ಭೂಮಿ ಕೃಷಿ ಚಟುವಟಿಕೆ ಇಲ್ಲದೇ ಪಾಳು ಬಿದ್ದಿದೆ. ಇದೀಗ ಅದರಲ್ಲಿ ಹೆಚ್ಚಿನ ಪ್ರಮಾಣದ ಭೂಮಿಯಲ್ಲಿ ಚಟುವಟಿಕೆ ನಡೆಯಬಹುದೆಂದು ಕೃಷಿ ಇಲಾಖೆ ಹೇಳಿದೆ.
ಇದನ್ನೂ ಓದಿ:ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!
ಎಷ್ಟು ಹೆಚ್ಚಳ?:ಕಾರ್ವಿುಕರು ವಾಪಸು ಹಳ್ಳಿಗಳ ಕಡೆ ತೆರಳಿರುವುದು ಹಾಗೂ ಉತ್ತಮ ಮುಂಗಾರಿನ ನಿರೀಕ್ಷೆ ಇರುವುದರಿಂದ ಈ ವರ್ಷ ಸುಮಾರು ಹತ್ತು ಲಕ್ಷ ಹೆಕ್ಟೇರ್​ನಷ್ಟು ಬಿತ್ತನೆ ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಮುಂಗಾರಿನಲ್ಲಿ 63 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿತ್ತು. ಆದರೆ ಪ್ರವಾಹ ಬಂದಿದ್ದರಿಂದ ಹಾನಿಯೂ ಆಗಿತ್ತು. ಈ ವರ್ಷ 73 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಆಗಬಹುದೆಂದು ಕೃಷಿ ಇಲಾಖೆ ಅಂದಾಜು ಮಾಡಿದೆ.
ರೈತರಿಗೆ ಎಷ್ಟು ಸಾಲ?
2018-19ರಲ್ಲಿ 19.98 ಲಕ್ಷ ರೈತರಿಗೆ 11,167.50 ಕೋಟಿ ರೂ.
2019-20ರಲ್ಲಿ 22.57 ಲಕ್ಷ ರೈತರಿಗೆ 13,578 ಕೋಟಿ ರೂ.
2020-21ರಲ್ಲಿ 14000 ಕೋಟಿ ರೂ. ಸಾಲ ನೀಡುವ ಗುರಿ
1.16 ಲಕ್ಷ ರೈತರು 796 ಕೋಟಿ ರೂ. ಸಾಲ ಪಡೆದಿದ್ದಾರೆ
ಬೆಳೆ ಬಿತ್ತನೆ ಗುರಿ ಉತ್ಪಾದನೆ ನಿರೀಕ್ಷೆ
ಏಕದಳ ಧಾನ್ಯ 31.34 ಲಕ್ಷ ಹೆಕ್ಟೇರ್, 85.56 ಲಕ್ಷ ಟನ್
ದ್ವಿದಳ ಧಾನ್ಯ 18.81 ಲಕ್ಷ ಹೆಕ್ಟೇರ್ 12.48 ಲಕ್ಷ ಟನ್
ಎಣ್ಣೆಕಾಳು 10.79 ಲಕ್ಷ ಹೆಕ್ಟೇರ್ 8.41 ಲಕ್ಷ ಟನ್
PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
