ಸುದೀಶ್ ಸುವರ್ಣಕಳಸ
ಹಸಿರು ಹೊದ್ದ ಬೆಟ್ಟಗಳ ನಡುವೆ ಪ್ರಕೃತಿ ಸೌಂದರ್ಯಕ್ಕೆ ಹೃದಯಾಕಾರದ ರೂಪು ಕೊಟ್ಟ ಮಾನವ ನಿರ್ವಿುತ ಭತ್ತದ ಗದ್ದೆಯೊಂದು ಸದ್ದಿಲ್ಲದೆ ಸುದ್ದಿಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಮಿಕೊಂಡ ಪ್ರದೇಶದಲ್ಲಿ ನೈಸರ್ಗಿಕವಾಗಿ ಬರುವ ನೀರನ್ನೇ ಬಳಸಿಕೊಂಡು ವರ್ಷದಲ್ಲಿ ಒಂದು ಬೆಳೆ ಬೆಳೆಯಲಾಗುತ್ತಿದೆ. ಇಳಿಜಾರಿನಲ್ಲಿ ಒಂದರ ಮೇಲೊಂದು ಗದ್ದೆಗಳು ಇವೆ. ತುತ್ತತುದಿಯಲ್ಲಿರುವ ಗದ್ದೆ ಮಾತ್ರ ಹೃದಯಾಕಾರ ಹೋಲುತ್ತದೆ. ಈ ಭೂಮಿ ಕೃಷ್ಣ ಎಂಬುವವರಿಗೆ ಸೇರಿದ್ದು, ಹಲವು ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ಈ ಪ್ರದೇಶ ಸ್ವಲ್ಪ ಎತ್ತರದಲ್ಲಿ ಇರುವುದರಿಂದ ಗದ್ದೆಯನ್ನು ಹದ ಮಾಡುವ ಸಂದರ್ಭ ಅದಕ್ಕೊಂದು ರೂಪ ಕೊಡುತ್ತ ಬಂದಿದ್ದಾರೆ. ಈಗ ಹೃದಯಾಕಾರ ತಾಳಿ ಪ್ರಕೃತಿ ಪ್ರಿಯರ ಸ್ವರ್ಗವಾಗುತ್ತಿದೆ. ಇಲ್ಲಿ ಹಲವು ಸಿನಿಮಾಗಳ ಚಿತ್ರೀಕರಣವೂ ನಡೆದಿದ್ದು, ಪ್ರೀವೆಡ್ಡಿಂಗ್ ಶೂಟಿಂಗ್​ಗಳ ಹಾಟ್​ಸ್ಪಾಟ್ ಕೂಡ ಹೌದು. ಛಾಯಗ್ರಾಹಕರ ನೆಚ್ಚಿನ ತಾಣವಾಗಿದ್ದು, ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸ್ಥಳೀಯರಿಗೆ ಮಾಮೂಲಿಯಂತೆ ಕಂಡರೂ ಇದರ ಛಾಯಾಚಿತ್ರಗಳು ವೈರಲ್ ಆಗುತ್ತಿದ್ದಂತೆ ಸ್ಥಳೀಯರೇ ಆಶ್ಚರ್ಯಚಕಿತರಾಗುತ್ತಿದ್ದಾರೆ.
ಹೋಗೋದು ಹೇಗೆ?: ಹೃದಯಾಕಾರದ ಗದ್ದೆಯನ್ನು ಕಣ್ತುಂಬಿಕೊಳ್ಳಲು ಸ್ವಲ್ಪ ಪ್ರಯಾಸ ಪಡಲೇಬೇಕು. ಕಳಸದಿಂದ 9 ಕಿಮೀ ದೂರಕ್ಕೆ ಬಾಳ್​ಗಲ್ ಎಂಬ ಊರು ಸಿಗುತ್ತದೆ. ಅಲ್ಲಿಂದ ಜೀಪ್ ಅಥವಾ ಪಿಕಪ್ ಮೂಲಕವೇ ಈ ಪ್ರದೇಶಕ್ಕೆ ತೆರಳಬೇಕಾಗುತ್ತದೆ. ಬಾಮಿಕೊಂಡ ತಲುಪಿ ಆ ಸುಂದರ ಪ್ರಕೃತಿಯನ್ನು ಕಣ್ತುಂಬಿಕೊಂಡಾಗ ಆಯಾಸ ಕರಗಿ ನೀರಾಗುವುದರಲ್ಲಿ ಸಂದೇಹವಿಲ್ಲ.
ಈ ಪ್ರದೇಶದ ಬಗ್ಗೆ ಕೇಳಿದ್ದೆ. ನೋಡಿರಲಿಲ್ಲ. ಜಾಲತಾಣಗಳ ಚಿತ್ರಗಳು ವೈರಲ್ ಆದ ಬಳಿಕ ನೋಡಬೇಕು ಅನ್ನಿಸಿತು. ನಿಜವಾಗಿಯೂ ಆ ಗುಡ್ಡದ ತುತ್ತ ತುದಿಯ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡಾಗ ಸ್ವರ್ಗ ಕಂಡಂತಾಯಿತು.
| ಕೆ.ಎನ್.ಸುಪ್ರೀತಾಕಳಸ
https://www.vijayavani.net/rich-countries-lock-up-covid-vaccines-supplies/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eighteen =
Remember me
