|ಆರ್.ತುಳಸಿಕುಮಾರ್ಬೆಂಗಳೂರು
ದೇಶದ ಗಡಿ ಭಾಗಗಳಲ್ಲಿ ಬಂದೂಕು ಹಿಡಿದು ಕಾವಲು ಕಾಯುವ ಸೈನಿಕರನ್ನು ಅವರ ಸೇವಾ ನಿವೃತ್ತಿ ನಂತರ ಕೃಷಿಯತ್ತ ಸೆಳೆಯಲು ಕೇಂದ್ರ ಸರ್ಕಾರ ‘ಜವಾನ್ ಕಿಸಾನ್’ ಯೋಜನೆ ಜಾರಿಗೆ ನಿರ್ಧರಿಸಿದೆ. ಈಗ ಕೃಷಿಯಿಂದ ವಿಮುಖವಾಗುವವರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕೆ ಹಳ್ಳಿಯ ರೈತರು ಪಟ್ಟಣ ಸೇರಿ ಬೇರೆ ಉದ್ಯೋಗ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆಯೇ ನಿವೃತ್ತ ಸೈನಿಕರನ್ನು ಕೃಷಿ ಉದ್ಯಮದಾರರನ್ನಾಗಿಸಲು ವಿನೂತನ ಪ್ರಯತ್ನಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. ಈಗಾಗಲೇ ರಕ್ಷಣಾ ಸಚಿವಾಲಯ ಹಾಗೂ ‘ಮ್ಯಾನೇಜ್’ ಸಂಸ್ಥೆ ಹಲವು ಸುತ್ತಿನ ಸಭೆ ನಡೆಸಿ ಯೋಜನೆ ಜಾರಿಗೆ ನಿರ್ಧರಿಸಿವೆ. ರಕ್ಷಣಾ ಸಚಿವರಿಗೂ ಯೋಜನೆಯ ರೂಪುರೇಷೆ ವಿವರಿಸಿ ಒಪ್ಪಿಗೆ ಪಡೆಯಲಾಗಿದೆ.
ನಿವೃತ್ತ ಸೈನಿಕರಿಗೆ ಉದ್ಯೋಗದ ಬಾಗಿಲು ತೆರೆಯುವ ಕಾರಣದಿಂದಾಗಿ ರಕ್ಷಣಾ ಸಚಿವಾಲಯ ಯೋಜನಾ ವೆಚ್ಚವನ್ನು ಭರಿಸಲಿದೆ. ಜತೆಗೆ ಸೈನಿಕರು ನಿವೃತ್ತಿಯಾಗುತ್ತಿದ್ದಂತೆ ಕೃಷಿ ಉದ್ಯಮದಾರರಾಗುವ ಆಸಕ್ತರ ಪಟ್ಟಿಯನ್ನು ರಕ್ಷಣಾ ಸಚಿವಾಲಯವೇ ಸಿದ್ಧಪಡಿಸಲಿದೆ. ಈ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ಇಳಿಸುವ ಹೊಣೆಯನ್ನು ರಾಷ್ಟ್ರೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ನ ಅಂಗಸಂಸ್ಥೆಯಾದ ಹೈದರಾಬಾದ್​ನಲ್ಲಿರುವ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆ ಸಂಸ್ಥೆ (ಮ್ಯಾನೇಜ್) ವಹಿಸಿದೆ.
ನಿವೃತ್ತ ಸೈನಿಕರಿಗೆ ಕೃಷಿಯ ವಿವಿಧ ಹಂತಗಳನ್ನು 4 ತಿಂಗಳ ಅವಧಿಯಲ್ಲಿ ತರಬೇತಿ ನೀಡಲಾಗುತ್ತದೆ. ಬಿತ್ತನೆ, ಬೆಳೆ ವೈವಿಧ್ಯ, ಕೊಯ್ಲೋತ್ತರ ಚಟುವಟಿಕೆ, ಮಾರುಕಟ್ಟೆ ಜ್ಞಾನ, ಕೃಷಿ ಯಾಂತ್ರೀಕರಣ, ಸಂಸ್ಕರಣೆ, ಮೌಲ್ಯವರ್ಧನೆ ಇತ್ಯಾದಿ ಅಂಶಗಳ ಕುರಿತು ತಜ್ಞರು, ಪರಿಣಿತರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಆ ಬಳಿಕ ಕೃಷಿ ಉದ್ಯಮದಾರರಾಗಿ ಕಾರ್ಯನಿರ್ವಹಿಸಲು ಯೋಜನೆ ಸಿದ್ಧಪಡಿಸಿ ಅದನ್ನು ಎಲ್ಲಿ, ಹೇಗೆ ಅನುಷ್ಠಾನಕ್ಕೆ ತರಬೇಕೆಂಬುದನ್ನು ಆಖೈರು ಮಾಡಿದ್ದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಉದ್ಯಮ ಆರಂಭಿಸಿದ ಬಳಿಕವೂ ಸಲಹೆ-ಸೂಚನೆ ನೀಡುವ ವ್ಯವಸ್ಥೆ ಇರಲಿದೆ.
ಕೃಷಿಯಲ್ಲಿ ತೊಡಗುವವರಿಗೆ ಶಿಸ್ತು, ಶ್ರದ್ಧೆ, ಪ್ರಾಮಾಣಿಕವಾಗಿ ದುಡಿಯುವ ಗುಣಗಳು ಇರಬೇಕು. ಇವು ಸೈನಿಕರಲ್ಲಿ ಕಂಡುಬರುವ ಕಾರಣ ನಿವೃತ್ತಿ ನಂತರ ಅವರನ್ನು ಕೃಷಿ ಉದ್ಯಮದಾರರನ್ನಾಗಿಸುವುದು ಸುಲಭ. ಕೃಷಿ ಕಾಳಜಿ ಉಳ್ಳ ಆಯ್ದ ನಿವೃತ್ತ ಸೈನಿಕರಿಗೆ ಶೀಘ್ರ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
|ಡಾ. ಪಿ.ಚಂದ್ರಶೇಖರಡೈರೆಕ್ಟರ್ ಜನರಲ್, ‘ಮ್ಯಾನೇಜ್’ ಸಂಸ್ಥೆ
ನಿವೃತ್ತ ಸೈನಿಕರನ್ನು ಕೃಷಿ ಉದ್ಯಮದಾರರನ್ನಾಗಿಸಲು ಹೊಸ ಯೋಜನೆ ರೂಪಿಸುತ್ತಿರುವುದು ಉತ್ತಮ ಹೆಜ್ಜೆ. ತರಬೇತಿ ನೀಡುವ ಜತೆಗೆ ಉದ್ಯಮ ಆರಂಭಿಸಿದ ನಂತರವೂ ಅವರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ಆಗ ಮಾತ್ರ ಯೋಜನೆ ಸಫಲವಾಗಲು ಸಾಧ್ಯ.
|ಕೆ. ಮಥಾಯ್ಕರ್ನಾಟಕ ರಾಜ್ಯ ನಿವೃತ್ತ ಸೈನಿಕರ ಒಕ್ಕೂಟದ ಅಧ್ಯಕ್ಷ
ನಿವೃತ್ತ ಸೈನಿಕರಿಗೆ ಏಕೆ ಯೋಜನೆ?:ಕೃಷಿ ಕೈಗೊಳ್ಳಲು ಮಣ್ಣಿನ ಮೇಲೆ ಮಮತೆ, ಶಿಸ್ತು, ಪ್ರಮಾಣಿಕತೆ, ಸಹನೆ, ದುಡಿಮೆ ಅಗತ್ಯ. ಸೈನಿಕರಲ್ಲಿ ಈ ಎಲ್ಲಾ ಅಂಶಗಳೂ ಇರುತ್ತವೆ. ಜತೆಗೆ ಪ್ರತಿ ವರ್ಷವೂ ಸೇನೆಯಿಂದ ಅಂದಾಜು 60 ಸಾವಿರ ಯೋಧರು ನಿವೃತ್ತರಾಗುತ್ತಾರೆ. ಇವರ ಪೈಕಿ ಹೆಚ್ಚಿನವರು ಗ್ರಾಮೀಣ ಭಾಗದಿಂದ ಬಂದವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿದ್ದಾರೆ. ಇದು ಸಹಜವಾಗಿ ಕೃಷಿ ಕಾರ್ಯಕ್ಕೆ ಸಹಕಾರಿ ಆಗಲಿದೆ. ಆದರೆ, ನಿವೃತ್ತಿಯಾದ ಬಳಿಕ ಬಹುತೇಕ ಮಂದಿ ಹಳ್ಳಿಯಲ್ಲಿರದೆ ಪಟ್ಟಣದತ್ತ ವಲಸೆ ಹೋಗುತ್ತಾರೆ. ಇಂತಹವರಿಗೆ ಭೂಮಿ ಇಲ್ಲದಿದ್ದರೂ, ಕೃಷಿ ಉದ್ಯಮದಾರರಾಗಲು ಅವಕಾಶ ಇದೆ. ಈ ಕಾರಣದಿಂದಾಗಿ ಅಗತ್ಯ ತರಬೇತಿ ನೀಡಿ ಗ್ರಾಮೀಣ ಭಾಗದಲ್ಲೇ ಬದುಕು ಕಟ್ಟಿಕೊಳ್ಳಲು ಯೋಜನೆಯು ಸಹಕಾರಿಯಾಗಲಿದೆ ಎಂಬುದು ‘ಮ್ಯಾನೇಜ್’ ಸಂಸ್ಥೆಯ ಮುಖ್ಯಸ್ಥರು ವಿಜಯವಾಣಿಗೆ ತಿಳಿಸಿದ್ದಾರೆ.
ನವೆಂಬರ್ ಎರಡನೇ ವಾರ ಚಾಲನೆ:ಐಸಿಎಆರ್​ನ ಮಹತ್ವಾಕಾಂಕ್ಷಿ ‘ಜವಾನ್ ಕಿಸಾನ್’ ಯೋಜನೆಯನ್ನು ನವೆಂಬರ್ ಮಧ್ಯಭಾಗದಲ್ಲಿ ಆರಂಭಿಸಲಾಗುತ್ತದೆ. ಮೊದಲ ಹಂತದ ಪ್ರಾಯೋಗಿಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಐಸಿಎಆರ್ ಪ್ರಮುಖ ಪಾಲ್ಗೊಳ್ಳಲಿದ್ದಾರೆ.
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
