ಬೆಂಗಳೂರು:ಎ.ಎಚ್​.ವಿಶ್ವನಾಥ ಅವರು ಸಚಿವ ಸ್ಥಾನಕ್ಕೆ ಅನರ್ಹ ಎಂದು ರಾಜ್ಯ ಹೈ ಕೋರ್ಟ್​ ಮಧ್ಯಂತರ ತೀರ್ಪು ನೀಡಿದ ಬೆನ್ನಲ್ಲೇ ವಿಶ್ವನಾಥ ಅವರು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಯಾರ ಮರ್ಜಿಯಲ್ಲಿ ಆ ಸ್ಥಾನದಲ್ಲಿ ಕುಳಿತಿದ್ದಾರೆ ಎನ್ನುವುದನ್ನು ಮರೆತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ಕಾಂಗ್ರೆಸ್​ ಮಹಿಳಾ ಘಟಕ
‘ನಾವು ಕೆಲವರ ಕಣ್ಣಲ್ಲಿ ಕೆಲವು ರೀತಿ ಕಾಣುತ್ತೇವೆ. ಯಾರ‌ ಮರ್ಜಿಯಲ್ಲಿ ಯಾರು ಖುರ್ಚಿ ಮೇಲೆ ಕುಳಿತಿದ್ದಾರೆ? ಕೆಲವರು ಇದನ್ನೆಲ್ಲಾ ಮರೆತಿದ್ದಾರೆ. ಸಿಎಂ ಸೇರಿದಂತೆ ಇಂದು ಇವರೆಲ್ಲಾ ಯಾರ ಸಹಕಾರದಿಂದ ಕುಳಿತಿದ್ದಾರೆ? ಯಾರ ಮರ್ಜಿಯಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ. ಹೊಳೆ ದಾಟುವ ತನಕ ಅಂಬಿಗ ಗಂಡ, ಹೊಳೆ ದಾಟಿದ ಮೇಲೆ ಅಂಬಿಗ… ಎನ್ನುವ ಸ್ಥಿತಿ ಇಂದು ಬಂದಿದೆ’ ಎಂದು ವಿಶ್ವನಾಥ ಅವರು ಹೇಳಿದ್ದಾರೆ.
ಇದನ್ನೂ ಓದಿ:ಗೋಹತ್ಯೆ ನಿಷೇಧದ ಬಗ್ಗೆ ಇದೇ ನಮ್ಮ ನಿಲುವು; ಬದಲಾಗೋ ಮಾತೇ ಇಲ್ಲ ಅಂದ ಸಿದ್ದರಾಮಯ್ಯ
ಸಿ.ಪಿ ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಮಾತನಾಡಿರುವ ಅವರು, ‘ಸಿ.ಪಿ ಯೋಗೇಶ್ವರ್ ಹುಣಸೂರು ಅಭ್ಯರ್ಥಿ ವಿರುದ್ಧ ಹೇಗೆ ನಡೆದುಕೊಂಡರು ಎಂಬುದನ್ನ ನೋಡಬೇಕಲ್ಲವೇ? ಅವರು ನನಗೆ ಟಿಕೆಟ್ ಕೊಡುವ ಮೊದಲೇ ಅಲ್ಲಿಗೆ ಬಂದು ತಾನೇ ಅಭ್ಯರ್ಥಿ ಅಂತಾ ಹೇಳಿ ಗೊಂದಲ ಮಾಡಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಸೋಲಿಸಲು ಹೊರಟಿದ್ದವರು ಅವರು. ಯಾವ ನಂಬಿಕೆ ಮೇಲೆ ಇಂತವರಿಗೆ ಸಚಿವ ಸ್ಥಾನ ಕೊಡುತ್ತಾರೆ? ವಿಮರ್ಶೆ ಮಾಡಿ ಸಚಿವ ಸ್ಥಾನ ನೀಡಬೇಕು’ ಎಂದು ಹೇಳಿದ್ದಾರೆ.
ಮಗಳ ಮದುವೆಗೆ ಅಮೆರಿಕಗೆ ಹೋದ ದಂಪತಿ ಪುತ್ರಿಯ ಕಣ್ಣೆದುರಲ್ಲೇ ದುರಂತ ಸಾವು, ಪುತ್ರನೂ ಮೃತ..!

ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 5 =
Remember me
