ನೀವು ಒಮ್ಮೆ ಆದೇಶ ಕೊಟ್ಟರೆ ಸಾಕು ಅದ್ಭುತ ಚಿತ್ರಗಳನ್ನ ಬಿಡಿಸುತ್ತೆ ಇದು. ಉದಾಹರಣೆಗೆ ಡಾ ವಿನ್ಸಿ ಶೈಲಿಯಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆಯನ್ನೂ ಚಿತ್ರಿಸುವ ಸಾಮರ್ಥ್ಯ ಇದಕ್ಕಿದೆ! ಸ್ವರ್ಗದಲ್ಲಿ ದೇವರು… ಎಂದರೂ ಕಲ್ಪನೆಗೂ ಮೀರಿ ಚಿತ್ರಿಸುತ್ತೆ… ಅದುವೇ ಕೃತಕ ಬುದ್ಧಿಮತ್ತೆಯುಳ್ಳ ಕಂಪ್ಯೂಟರ್!
ಕೃತಕ ಬುದ್ಧಿಮತ್ತೆಯುಳ್ಳ(ಆರ್ಟಿಫಿಷಿಯಲ್​ ಇಂಟಲಿಜನ್ಸ್​) ಕಂಪ್ಯೂಟರ್​ ಅಪ್ಲಿಕೇಶ್​ ಅನ್ನು ಇತ್ತೀಚೆಗೆ ಕಂಡು ಹಿಡಿದದ್ದಲ್ಲ. 1973ರಲ್ಲೇ ಹರಾಲ್ಡ್​ ಕೋಹೆನ್​ ಎಂಬಾತ ಇದನ್ನು ಸಾಧಿಸಿದ್ದ. ಅದಕ್ಕೆ ಆತ ಇಟ್ಟ ಹೆಸರು ಆರೊನ್​ (AARON​). ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಅಳತೆಗೂ ಮೀರಿದ್ದು. ಹಲವಾರು ಗಂಟೆಗಳ ಪರಿಶ್ರಮ ಬೇಡುವ ಡಿಜಿಟಲ್ ಪೇಂಟಿಂಗ್​ಗಳನ್ನು ಇದು ಕೆಲವೇ ಸೆಕೆಂಡುಗಳಲ್ಲಿ ತಯಾರಿಸಿ ಬಿಡುತ್ತೆ. ಇದು ಹಿಂದೆ ಹೆಚ್ಚು ಪ್ರಚಲಿತದಲ್ಲಿ ಇರಲಿಲ್ಲ. ಈಗ ಡಿಜಿಟಲೀಕರಣ ಆಗಿರುವುದರಿಂದ ಎಲ್ಲರ ಕೈಗೂ ಈ ತಂತ್ರಜ್ಞಾನ ತಲುಪಿದೆ.
‘ಈ ಹಿಂದೆ ದಿಗ್ಗಜರು ರಚಿಸಿದ್ದ ಚಿತ್ರಗಳು ಸೇರಿದಂತೆ ಲಕ್ಷಾಂತರ ಫೋಟೋಗಳನ್ನು ಅಧ್ಯಯನ ಮಾಡಿ ಹೊಸ ಚಿತ್ರಗಳನ್ನು ರಚಿಸುತ್ತೆ ಆರ್ಟಿಫಿಷಿಯಲ್​ ಇಂಟಲಿಜನ್ಸ್​. ಇದರಿಂದ ಕಲೆಯನ್ನೇ ಉದ್ಯೋಗ ಎಂದು ನಂಬಿರುವ ಬಹುತೇಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ. ಕೈಯಲ್ಲಿ ಚಿತ್ರಿಸಿದ ಚಿತ್ರಗಳ ಬೆಲೆ ಕುಸಿಯುವ ಆತಂಕವೂ ಆವರಿಸಿದೆ. ಆದರೆ, ವಿಶ್ಲೇಷಣೆಗಳ ಪ್ರಕಾರ ಇದು ಡಿಜಿಟಲ್ ಚಿತ್ರಕಾರರ ಕೆಲಸವನ್ನು ಕಸಿಯಬಹುದು. ಕೈಯಲ್ಲಿ ಮಾಡಿದ ಚಿತ್ರಗಳಿಗೆ ಎಂದಿಗೂ ಪೈಪೋಟಿ ನೀಡಲು ಸಾಧ್ಯವಿಲ್ಲ. ಕಲಾವಿದರ ಕೈಚಳಕದಲ್ಲಿ ಅರಳುವ ಕಲೆಗೆ ಅದರದ್ದೇ ಆದ ಮೌಲ್ಯ ಇದ್ದೇ ಇರುತ್ತೆ. ಎಂದಿಗೂ ಬೇಡಿಕೆ ಕುಸಿಯಲ್ಲ. ಕಲಾವಿದರು ಭಯ ಪಡುವ ಅಗತ್ಯವಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
