ಬೆಂಗಳೂರು:ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಅಭ್ಯರ್ಥಿ ಬೆಂಗಳೂರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕುಮಾರ್ ಕಣ್ಣನ್ ಎಂಬುವರು ನಕಲಿ ಎ ಫಾರ್ಮ್ ಹಾಗೂ ಬಿ ಫಾರ್ಮ್ ಸಲ್ಲಿಸಿದ ಆರೋಪಿದ ಮೇಲೆ ಎಫ್ಐಆರ್ ದಾಖಲಾಗಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯೆಂದು ಕುಮಾರ್ ಕಣ್ಣನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಸಲ್ಲಿಸಿದ್ದ ಎ ಫಾರ್ಮ್ ಹಾಗೂ ಬಿ ಫಾರ್ಮ್ ನಲ್ಲಿ ಓ ಪನ್ನೀರ್ ಸೆಲ್ವಂ ಸಹಿ ಇತ್ತು. ಆದರೆ ಸದ್ಯ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಇದ್ದಾರೆ. ಹೀಗಾಗಿ ಕುಮಾರ್ ಕಣ್ಣನ್ ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಿದ ಚುನಾವಣಾ ಆಯೋಗ, ವಂಚಿಸಲು ಯತ್ನಿಸಿದ ಆರೋಪದಲ್ಲಿ ಕುಮಾರ್ ಕಣ್ಣನ್ ವಿರುದ್ದ ದೂರು ದಾಖಲಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬ್ಯಾಚುಲರ್ಸ್​​ಗೆ ಯಾಕೆ ಬಾಡಿಗೆಗೆ ಮನೆ ಕೊಡಲ್ಲ?:ಈ ಸುದ್ದಿ ಓದಿ…ಕಾಟನ್ ಪೇಟೆ ಪೊಲೀಸ್ ಠಾಣೆಗೆ ರಿಟರ್ನಿಂಗ್ ಅಫೀಸರ್​ನಿಂದ ದೂರು ದಾಖಲಾಗಿದೆ. ಠಾಣೆಯಲ್ಲಿ ಕುಮಾರ್ ಕಣ್ಣನ್ ಮೇಲೆ ಎಫ್ ಐಆರ್ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಎ ಫಾರ್ಮ್ ಎಂದರೇನು?:ಸ್ವಘೋಷಿತವಾಗಿ ತಮ್ಮ ವಿವರಗಳನ್ನು ಅಭ್ಯರ್ಥಿಗಳು ಎ ಫಾರಂ ಮೂಲಕವಾಗಿ ತಿಳಿಸುತ್ತಾರೆ.
ಬಿ ಫಾರ್ಮ್ ಎಂದರೆನು?:ಒಂದು ನಿರ್ಧಿಷ್ಟ ಪಕ್ಷವು ಈ ಅಭ್ಯರ್ಥಿ ನಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈತ ನಮ್ಮ ಪಕ್ಷದ ಅಭ್ಯರ್ಥಿ ಎಂದು ಪಕ್ಷದ ಕಡೆಯಿಂದ ಅಧಿಕೃತವಾಗಿ ಚುನಾವಣಾ ಸಮಿತಿಗೆ ನೀಡುವುದೇ ಬಿ ಫಾರಂ ಆಗಿದೆ.
ಸಿ ಫಾರ್ಮ್ ಎಂದರೇನು :ಒಂದು ನಿರ್ಧಿಷ್ಟ ಪಕ್ಷದಿಂದ ಕೊನೆಯ ಹಂತದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವ ಸಂದರ್ಭ ಬಂದರೆ ಪಕ್ಷದ ಕಡೆಯಿಂದಲೇ ನೀಡುವಂತದ್ದು ಸಿ ಫಾರಂ ಆಗಿದೆ.
ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು:ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
