ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದೆ ಇನ್ಸ್ಟಿಟ್ಯೂಟ್ ಆ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ – ಐಐಎಚ್‌ಎಂಆರ್ ನಲ್ಲಿ ಪಿಜಿಡಿಎಂ – ಕೃತಕ ಬುದ್ಧಿಮತ್ತೆ ಎಐ ಮತ್ತು ಆರೋಗ್ಯ ರಕ್ಷಣೆಯಲ್ಲಿ ದತ್ತಾಂಶ ವಿಜ್ಞಾನ ಡೇಟಾ ಸೈನ್ಸ್ ಕೋರ್ಸ್‌ಗಳನ್ನು ಆರಂಭಿಸಲು ಎಐಸಿಟಿಇ ಅನುಮೋದನೆ ನೀಡಿದೆ ಎಂದು ಐಐಎಚ್‌ಎಂಆರ್ ನಿರ್ದೇಶಕರಾದ ಡಾ. ಉಷಾ ಮಂಜುನಾಥ್ ತಿಳಿಸಿದ್ದಾರೆ.
ಇನ್ಸ್ಟಿಟ್ಯೂಟ್ ಆ್ ಹೆಲ್ತ್ ಮ್ಯಾನೇಜ್ಮೆಂಟ್ ರಿಸರ್ಚ್ – ಐಐಎಚ್‌ಎಂಆರ್ ನಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಪದವಿ ಮತ್ತು ಚಿನ್ನದ ಪದಕಗಳನ್ನು ವಿತರಿಸಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಶೇಕಡ 100 ರಷ್ಟು ಉದ್ಯೋಗ ದೊರಕಿಸಿ ಕೊಡುವಲ್ಲಿ ಯಶ್ವಸ್ವಿಯಾಗಿದ್ದು, ಮತ್ತೊಂದು ದಾಖಲೆ ನಿರ್ಮಿಸಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ನುರಿತ ಮತ್ತು ನಿಪುಣ ಆಡಳಿತಗಾರರಾಗಿ ಹೊರ ಹೊಮ್ಮಲು ಆಡಳಿತ ನಿರ್ವಹಣೆಯ ಕೋರ್ಸ್‌ಗಳು ಮಹತ್ವ ಪಡೆದುಕೊಂಡಿವೆ ಎಂದರು.
ಡಾ. ಉಷಾ ಮಂಜುನಾಥ್ ಮಾತನಾಡಿ ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಜೀವನಕ್ಕೆ ಪರಿವರ್ತನೆಗೊಳ್ಳುವುದು ಮಹತ್ವದ ಪರಿವರ್ತೆನೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಸಂಸ್ಥೆಗಳಿಗೆ ರಾಯಭಾರಿಗಳಾಗಿ ಹೊರ ಹೊಮ್ಮಬೇಕು. ಕಾರ್ಯಕ್ಷಮತೆಯಲ್ಲಿ ಅನುಕರಣೆಯಾಗಬೇಕು. ಆರೋಗ್ಯ ಉದ್ಯಮದ ಭಾಗವಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಯಶಸ್ಸಿನ ಹಾದಿಯಲ್ಲಿ ಸಾಗುವಂತೆ ಮನವಿ ಮಾಡಿದರು.
ಐಐಎಚ್‌ಎಂಆರ್ ಪ್ರಾಧ್ಯಾಪಕ ಪ್ರೊ. ಸಡಗೋಪನ್, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದ ಯುನಿಸ್ೆಕ್ಷೇತ್ರ ಕಚೇರಿ ಮುಖ್ಯಸ್ಥ ಡಾ. ಝೆಲಾಲೆಮ್ ಬಿ. ಟಾಫೆಸ್ಸೆ, ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನೆ ವಿಭಾಗದ ನಿರ್ದೇಶಕ ಡಾ. ರವಿ ಕಣ್ಣನ್, ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
