‘ಏರೋ ಇಂಡಿಯಾ- 2023’ಕ್ಕೆಸೋಮವಾರ (ಫೆ. 13) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿ ದ್ದಾರೆ. ಇದಕ್ಕಾಗಿ ಅವರು ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಬೆಳಗ್ಗೆ ವಿಶೇಷ ಹೆಲಿಕಾಪ್ಟರ್​ನಲ್ಲಿ ಏರೋ ಇಂಡಿಯಾ ಪ್ರದರ್ಶನದ ಸ್ಥಳವನ್ನು ತಲುಪಲಿದ್ದಾರೆ. ರಕ್ಷಣಾ ಕ್ಷೇತ್ರದ ವಸ್ತುಪ್ರದರ್ಶನ, ಮಳಿಗೆಗಳನ್ನು ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಮಧ್ಯಾಹ್ನವೇ ದೆಹಲಿಗೆ ವಾಪಸಾಗಲಿದ್ದಾರೆ. ಇದಕ್ಕೂ ಮುನ್ನ ಶನಿವಾರ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ತಾಲೀಮು ಹೀಗಿತ್ತು.
ಪ್ರಮುಖ ರಾಷ್ಟ್ರಗಳುರಾಜಧಾನಿ ಹೊರವಲಯದ ಯಲಹಂಕ ವಾಯುನೆಲೆ ಯಲ್ಲಿ 5 ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ, ಬ್ರಿಟಲ್, ಇಟಲಿ, ಇಸ್ರೇಲ್, ಜಪಾನ್​ಸಹಿತ 20ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳಲಿವೆ. ವಿಮಾನ ಒಳಗೊಂಡಂತೆ ರಕ್ಷಣಾ ಕ್ಷೇತ್ರದಲ್ಲಿ ಬಳಕೆಯಾಗುವ ಎಲ್ಲ ಹೊಸ ಉಪಕರಣ, ಆವಿಷ್ಕಾರ, ಸಂಶೋಧನೆ ಬಗ್ಗೆ ತಜ್ಞರು ಚಿಂತನ-ಮಂಥನ ನಡೆಸಲಿದ್ದಾರೆ.
| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಬೆಂಗಳೂರಲ್ಲಿ ಫೆ.13-17ರವರೆಗೆ ನಡೆಯುವ ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲಿ ತಪಸ್-ಬಿಎಚ್201 ಮಾನವ ರಹಿತ ವಿಮಾನ ತನ್ನ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಲಿದೆ.
ಚಳ್ಳಕೆರೆ ತಾಲೂಕು ವರವು ಕಾವಲು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ವೈಮಾನಿಕ ಪರೀಕ್ಷಾ ತಾಣದಲ್ಲಿ ನಡೆದಿರುವ ಹಲವು ತಾಲೀಮು ಪರೀಕ್ಷೆಗಳಲ್ಲಿ ಹಗಲು-ರಾತ್ರಿ ಎನ್ನದೆ ಹಾರಾಟ ನಡೆಸಿ ಸೈ ಎನಿಸಿರುವ ಐಎಸ್​ಟಿಆರ್ (Intelligence Surveillance Target Acquisition and Reconnaissance) ಉದ್ದೇಶದ ಈ ಮಿಲಿಟರಿ ಹಕ್ಕಿಯಿಂದ ದೇಶದ ರಕ್ಷಣಾ ವ್ಯವಸ್ಥೆಗೆ, ದುರ್ಗದ ಕೊಡುಗೆ ದಿಗಂತದಲ್ಲೂ ಗೋಚರಿಸಲಿದೆ.
ವೈಮಾನಿಕ ಪ್ರದರ್ಶನಕ್ಕಾಗಿ, ದೇಶಿ ನಿರ್ವಿುತ 28 ಸಾವಿರ ಅಡಿ ಎತ್ತರದಲ್ಲಿ 18 ಗಂಟೆಗಳ ಕಾಲ ನಿರಂತರ ಹಾರಾಟ ಸಾಮರ್ಥ್ಯದ ಡ್ರೋನ್, ಗುರುವಾರ 12,000 ಅಡಿ ಎತ್ತರದಲ್ಲಿ ರಿಹರ್ಸಲ್ ನಡೆಸಿದೆ. ಏರೋನಾಟಿಕಲ್ ಡೆವಲಪ್​ವೆುಂಟ್ ಎಸ್ಟಾಬ್ಲಿಷ್​ವೆುಂಟ್ (ಎಡಿಇ) ಅಭಿವೃದ್ಧಿಪಡಿಸಿರುವ ಹೈ ಎಂಡ್ ಡ್ರೋನ್​ನ ಪರೀಕ್ಷಾರ್ಥ ಹಾರಾಟಗಳು ಕೋಟೆನಾಡಿನಲ್ಲಿ ಹಲವು ಬಾರಿ ನಡೆದಿವೆ.
ತಪಸ್​ನ (Tactical Advanced Plat form for Aerial Surveillance Beyond Horizon-201) 18 ತಾಸುಗಳ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ ಎಂದು ಡಿಆರ್​ಡಿಒ, ಕಳೆದ ಡಿ.7ರಂದು ಪ್ರಕಟಿಸಿತ್ತು. ತಪಸ್ ಎಂದು ಮರುನಾಮಕರಣವಾಗಿರುವ ರುಸ್ತುಂ-2 ಯುಎವಿ ಪರೀಕ್ಷಾರ್ಥ ಹಾರಾಟಗಳು 2016, 2018, 2019, 2020, 2021 ಹಾಗೂ 2022ರಲ್ಲಿ ಯಶಸ್ವಿಯಾಗಿದ್ದವು. ಅಂದು ರುಸ್ತುಂ ಎನಿಸಿದ್ದ MALE (Medium-altitude long-endurance unmanned aerial vehicle) ಡ್ರೋನ್ ಚೊಚ್ಚಲ ಹಾರಾಟ 2014 ಫೆಬ್ರವರಿಯಲ್ಲಿ ನಡೆದಿತ್ತಂತೆ.
ದಿಗಂತದಾಚೆ: ‘ದಿಗಂತದಾಚೆ’ ಎಂಬ ಟ್ಯಾಗ್​ಲೈನ್ ಇರುವ, ತಪಸ್​ನ ನಿರ್ಮಾಣ ವೆಚ್ಚ 1540-1786 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಶಕ್ತಿ ಲಭ್ಯವಾಗಲಿದೆ. ಶತ್ರುನೆಲೆಗಳನ್ನು ಗುರುತಿಸಿ ಧ್ವಂಸಗೊಳಿಸುವ ಸಾಮರ್ಥ್ಯವಿರುವ ಡ್ರೋನ್, ದೇಶದ ಭೂ, ವಾಯು ಹಾಗೂ ನೌಕಪಡೆಗಳಿಗೆ ಸಹಕಾರಿಯಾಗಲಿದೆ.
60 ಅಡಿ ವಿಂಗ್​ಸ್ಪಾನ್​ನೊಂದಿಗೆ ಗಂಟೆಗೆ 250-300 ಕಿ.ಮೀ, 1000 ಕಿ.ಮೀ. ಗರಿಷ್ಠ ದೂರದಲ್ಲಿ ಕ್ರಮಿಸುವ, ಸ್ವಯಂ ಚಾಲಿತ ಟೇಕಾಫ್ ಮತ್ತು ಲ್ಯಾಂಡಿಂಗ್ ವ್ಯವಸ್ಥೆಯ, 350 ಕೆಜಿವರೆಗೆ ಶಸ್ತ್ರಾಸ್ತ್ರಗಳನ್ನು ಹೊತ್ತು ಹಾರಾಡುವ ಈ ವಿಮಾನವನ್ನು 2023ರೊಳಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸುವ ಪ್ಲಾನ್ ಡಿಆರ್​ಡಿಒ ಮುಂದಿದೆ.
ಎಟಿಆರ್ಚಳ್ಳಕೆರೆ ತಾಲೂಕಲ್ಲಿ 4090 ಎಕರೆ, 290 ಕೋಟಿ ರೂ. ವೆಚ್ಚದಲ್ಲಿ ಡಿಆರ್​ಒ ವೈಮಾನಿಕ ಪರೀಕ್ಷಾ ತಾಣವನ್ನು (ಎಟಿಆರ್) ನಿರ್ವಿುಸಿದೆ. 2008ರಲ್ಲಿ ಇದರ ನಿರ್ವಣಕ್ಕೆ ಚಾಲನೆ ಸಿಕ್ಕಿತ್ತು. ಅಂದಿನ ರಕ್ಷಣಾ ಸಚಿವ ಅರುಣ್ ಜೇಟ್ಲಿ 2017 ಮೇ 29ರಂದು ಉದ್ಘಾಟಿಸಿದ್ದರು.
ಉನ್ನತ ಮಟ್ಟದ ಸಮಿತಿಚಳ್ಳಕೆರೆ ತಾಲೂಕಲ್ಲಿ ಡಿಆರ್​ಡಿಒ, ಐಐಎಸ್​ಸಿ, ಬಿಆರ್​ಸಿ, ಇಸ್ರೋ ಮತ್ತು ಡಿಆರ್​ಡಿಒ ಸ್ಥಾಪನೆಯಾಗಿವೆ. ಡಿಆರ್​ಡಿಒ ಹಿಂದಿನ ನಿರ್ದೇಶಕ ಡಾ.ವಿ.ಕೆ.ಸಾರಸ್ವತ್ ಅಧಿಕಾರಾವಧಿ, ಈ ನಾಲ್ಕು ಸಂಸ್ಥೆಗಳನ್ನು ಒಳಗೊಂಡ ರಾಷ್ಟ್ರಮಟ್ಟದ ಉನ್ನತ ಸಮಿತಿಗೆ, ಅಂದಿನ ಸಂಸದ ಜನಾರ್ದನಸ್ವಾಮಿ ಅಧ್ಯಕ್ಷರಾಗಿದ್ದರು. ಜನಾರ್ದನಸ್ವಾಮಿ ನೇತೃತ್ವ ಸಮಿತಿ ನಿರ್ಧಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರ್ಗಕ್ಕೆ ಖ್ಯಾತಿ ತಂದುಕೊಟ್ಟಿವೆ.
ಬೆಂಗಳೂರಿನ ವೈಮಾನಿಕ ಪ್ರದರ್ಶನದಲ್ಲಿ ತಪಸ್ ಹಾರಾಟ ದೇಶದ ರಕ್ಷಣಾ ವ್ಯವಸ್ಥೆಯ ಸದೃಢತೆಗೆ ಸಾಕ್ಷಿಯಾಗಲಿದೆ. ಚಳ್ಳಕೆರೆಯಲ್ಲಿರುವ ನಾಲ್ಕು ವಿಜ್ಞಾನ ಸಂಸ್ಥೆಗಳು, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗದ ಕೀರ್ತಿಗೂ ಕಾರಣವಾಗಿವೆ.
| ಜನಾರ್ದನಸ್ವಾಮಿ ಮಾಜಿ ಸಂಸದ ಹಾಗೂ ಉನ್ನತ ಸಮಿತಿ ಮಾಜಿ ಅಧ್ಯಕ್ಷ
ಹಲವೆಡೆ ಸಂಚಾರ ಮಾರ್ಗ ಬದಲು
ಬೆಂಗಳೂರು: ‘ಏರೋ ಇಂಡಿಯಾ-2023’ ಹಿನ್ನೆಲೆಯಲ್ಲಿ ಸೋಮವಾರ (ಫೆ.13) ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಯಲಹಂಕ ವಾಯುನೆಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ, ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಬೆಂಗಳೂರು ಪೂರ್ವ ಭಾಗದಿಂದ ಕೆಐಎ:* ಕೆ.ಆರ್. ಪುರ- ಹೆಣ್ಣೂರು ಕ್ರಾಸ್- ಬಾಗಲೂರು ಮೈಲನಹಳ್ಳಿ- ಬೇಗೂರು- ನೈಋತ್ಯ ಪ್ರವೇಶ ದ್ವಾರ. * ಎಡಿವಿಎ ರ್ಪಾಂಗ್ ಕಡೆಗೆ: ಕೆ.ಆರ್. ಪುರ- ನಾಗವಾರ ಜಂಕ್ಷನ್- ಬಲತಿರುವು ಥಣಿಸಂದ್ರ- ನಾರಾಯಣಪುರ ಕ್ರಾಸ್ ಎಡ ತಿರುವು- ಟೆಲಿಕಾಂ ಲೇಔಟ್ ಜಕ್ಕೂರು ಕ್ರಾಸ್ ಎಟಿ- ಬಲ ತಿರುವು ಪಡೆದು ಯಲಹಂಕ ಬೈಪಾಸ್- ಅಲ್ಲಾಳಸಂದ್ರ ಮೇಲ್ಸೇತುವೆ- ಯಲಹಂಕ ಸರ್ಕಲ್ ಎಡ ತಿರುವು – ಉನ್ನಿಕೃಷ್ಣನ್ ಜಂಕ್ಷನ್- ನಾಗೇನಹಳ್ಳಿ ಗೇಟ್ – ಹಾರೋಹಳ್ಳಿ, ಗಂಟಿಗಾನಹಳ್ಳಿ * ಡೊಮೆಸ್ಟಿಕ್ ರ್ಪಾಂಗ್ ಕಡೆಗೆ: ಕೆ.ಆರ್. ಪುರ- ಹೆಣ್ಣೂರು ಕ್ರಾಸ್- ಬಾಗಲೂರು- ರಜಾಕ್​ಪಾಳ್ಯ- ವಿದ್ಯಾನಗರ ಕ್ರಾಸ್- ಹುಣಸೆಮಾರನಹಳ್ಳಿ
ಪಶ್ಚಿಮ ಭಾಗದಿಂದ ಕೆಐಎ: * ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ, ಗಂಗಮ್ಮ ವೃತ್ತ- ಮದರ್ ಡೇರಿ- ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ- ಅದ್ದಿಗಾನಹಳ್ಳಿ ಎಂವಿಐಟಿ ಕ್ರಾಸ್- ವಿದ್ಯಾನಗರ ಕ್ರಾಸ್ * ಎಡಿವಿಎ ರ್ಪಾಂಗ್ ಕಡೆ: ಬಿಇಎಲ್ ವೃತ್ತ, ಗಂಗಮ್ಮ ವೃತ್ತ- ಮದರ್ ಡೇರಿ, ದೊಡ್ಡಬಳ್ಳಾಪುರ ರಸ್ತೆ, ನಾಗೇನಹಳ್ಳಿ ಗೇಟ್- ಹಾರೋಹಳ್ಳಿ, ಗಂಟಿಗಾನಹಳ್ಳಿ * ಡೊಮೆಸ್ಟಿಕ್ ರ್ಪಾಂಗ್: ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ – ಮದರ್ ಡೇರಿ, ದೊಡ್ಡಬಳ್ಳಾಪುರ ರಸ್ತೆ- ರಾಜಾನುಕುಂಟೆ-ಬಲ ತಿರುವು -ಅಡಿಗಾನಹಳ್ಳಿ, ಎಂವಿಐಟಿ ಕ್ರಾಸ್- ವಿದ್ಯಾನಗರ ಕ್ರಾಸ್ ಯೂಟರ್ನ್- ಹುಣಸೆಮಾರನಹಳ್ಳಿ.
ದಕ್ಷಿಣ ಭಾಗದಿಂದ ಏರ್​ಪೋರ್ಟ್:* ಮೈಸೂರು ರಸ್ತೆ- ನಾಯಂಡಹಳ್ಳಿ- ಚಂದ್ರಾ ಲೇಔಟ್- ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ- ಗಂಗಮ್ಮ ವೃತ್ತ- ಮದರ್ ಡೇರಿ, ರಾಜಾನುಕುಂಟೆ- ಅದ್ದಿಗಾನಹಳ್ಳಿ- ಎಂವಿಐಟಿ ಕ್ರಾಸ್- ವಿದ್ಯಾನಗರ ಕ್ರಾಸ್ * ಎಡಿವಿಎ ರ್ಪಾಂಗ್ ಕಡೆಗೆ: ಮೈಸೂರು ರಸ್ತೆ- ನಾಯಂಡಹಳ್ಳಿ- ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ, ನಾಗೇನಹಳ್ಳಿ ಗೇಟ್- ಹಾರೋಹಳ್ಳಿ ಗಂಟಿಗಾನಹಳ್ಳಿ. * ಡೊಮೆಸ್ಟಿಕ್ ರ್ಪಾಂಗ್: ನಾಯಂಡಹಳ್ಳಿ- ಗೊರಗುಂಟೆಪಾಳ್ಯ- ಬಿಇಎಲ್ ವೃತ್ತ, ಮದರ್ ಡೇರಿ, ಉನ್ನಿಕೃಷ್ಣನ್ ಜಂಕ್ಷನ್, ರಾಜಾನುಕುಂಟೆ- ಬಲ ತಿರುವು ಅಡಿಗಾನಹಳ್ಳಿ- ಎಂವಿಐಟಿ ಕ್ರಾಸ್- ವಿದ್ಯಾನಗರ ಕ್ರಾಸ್ ಯೂಟರ್ನ್- ಹುಣಸೆಮಾರನಹಳ್ಳಿ
ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ:* ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರ ಮಾರ್ಗದ ವಾಹನಗಳು ತುಮಕೂರು- ಪುಣೆ- ಎನ್​ಎಚ್ 4 * ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ- ದಾಬಸ್​ಪೇಟೆ- ನೆಲಮಂಗಲ- ಎನ್​ಎಚ್ 4- ಬೆಂಗಳೂರು * ಹೈದರಾಬಾದ್- ಚಿಕ್ಕಬಳ್ಳಾಪುರ ಮಾರ್ಗದ ವಾಹನಗಳು: ಕೆ.ಆರ್. ಪುರ- ಹೊಸೂರು- ಚೆನ್ನೈ * ದೇವನಹಳ್ಳಿಯಿಂದ ಸೂಲಿಬೆಲೆ- ಹೊಸಕೋಟೆ ಮೂಲಕ ನಗರಕ್ಕೆ * ತುಮಕೂರು ರಸ್ತೆ ಗೊರಗುಂಟೆಪಾಳ್ಯ ಮಾರ್ಗದ ವಾಹನಗಳು: ಸಿಎಂಟಿಐ ಜಂಕ್ಷನ್ ಬಲ ತಿರುವು- ರಿಂಗ್ ರಸ್ತೆಯಲ್ಲಿ ಎಫ್​ಟಿಐ ಫ್ಲೈಓವರ್ ಮೂಲಕ ಸುಮನಹಳ್ಳಿ- ನಾಯಂಡಹಳ್ಳಿ ಸರ್ಕಲ್- ನೈಸ್ ರಸ್ತೆ. * ತೋಟಗೆರೆ ಬಸವಣ್ಣ ದೇವಸ್ಥಾನ ಮಾರ್ಗದ ವಾಹನಗಳು: ದೊಡ್ಡಬಳ್ಳಾಪುರ- ಹೊಸಕೋಟೆ- ನೆಲಮಂಗಲ- ಸೊಂಡೇಕೊಪ್ಪ- ನೈಸ್ ರಸ್ತೆ.
ವರಹರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಬಂದಂತೆ ವರ್ತಿಸಿದ ವಿದ್ಯಾರ್ಥಿ!

ರಾಜಧಾನಿಯಲ್ಲಿ ಹೆಚ್ಚಿದ ನಕಲಿ ನಂಬರ್ ಪ್ಲೇಟ್ ಹಾವಳಿ: ದಂಡದಿಂದ ಪಾರಾಗಲು ಕಿಡಿಗೇಡಿಗಳ ಪ್ಲಾನ್, ಅಪರಾಧಕ್ಕೂ ಬಳಕೆ

ಯುವಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಉಗ್ರರ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದ ಶಂಕಿತ ಉಗ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 13 =
Remember me
