ಬೆಂಗಳೂರು:ಸ್ಟಾರ್ ಸುವರ್ಣ ವಾಹಿನಿಯು ಈಗಾಗಲೇ ‘ಬದಲಾವಣೆಯ ಬೆಳಕು’ ಚೆಲ್ಲುವ ದಿಟ್ಟ ಹುಡುಗಿಯರ ಕಥೆಗಳನ್ನು ಹೇಳುತ್ತಾ ಕನ್ನಡಿಗರ ಮನಗೆದ್ದಿದೆ. ‘ಇಂತಿ ನಿಮ್ಮ ಆಶಾ’, ‘ಮುದ್ದುಲಕ್ಷ್ಮೀ’, ‘ಸರಸು’, ‘ಮನಸ್ಸೆಲ್ಲಾ ನೀನೇ’ ಮುಂತಾದ ಧಾರಾವಾಹಿಗಳು ಮನೆಮಾತಾಗಿರುವ ಸಮಯದಲ್ಲೇ, ಇಂದಿನಿಂದ ಇನ್ನೊಂದು ವಿಭಿನ್ನ ಧಾರಾವಾಹಿ ಪ್ರಾರಂಭ ವಾಗುತ್ತಿದೆ. ಅದೇ ‘ಆಕಾಶ ದೀಪ’.
ಆಕಾಶ್ ಮತ್ತು ದೀಪ ಎಂಬ ಯುವಕ-ಯುವತಿಯ ಜೀವನದಲ್ಲಿ ನಡೆಯುವ ಘಟನೆಗಳೇ, ಈ ಹೊಸ ಧಾರಾವಾಹಿಯ ಕಥಾವಸ್ತು. ಅಪ್ಪನ ಮುದ್ದಿನ ಮಗಳಾದರೂ, ಚಿಕ್ಕಮ್ಮ ಮತ್ತು ಮಲಸೋದರಿಯ ಮುಷ್ಠಿಗೆ ಸಿಲುಕಿ ನರಳುವ ದೀಪ ಒಂದು ಕಡೆಯಾದರೆ, ದೃಷ್ಟಿಹೀನ ಫೋಟೋಗ್ರಾಫರ್ ಆಕಾಶ್ ಇನ್ನೊಂದು ಕಡೆ. ಮನೆಯ ಜವಾಬ್ದಾರಿಯನ್ನು ಹೊತ್ತಿರುವ ಕಾರಣದಿಂದ ದೀಪ ಮದುವೆಯಿಂದ ದೂರವಿದ್ದರೆ, ಆಕಾಶ್ ತನಗಿರುವ ಸಮಸ್ಯೆಯಿಂದ ಮದುವೆ ಬೇಡ ಎಂದು ತೀರ್ವನಿಸಿರುತ್ತಾನೆ. ಆಕಾಶ-ಭೂಮಿಯಷ್ಟು ಅಂತರವಿರುವ ಇವರಿಬ್ಬರು ಮದುವೆಯಾಗುತ್ತಾರಾ? ಎಂದು ಗೊತ್ತಾಗಬೇಕಿದ್ದರೆ, ‘ಆಕಾಶ ದೀಪಾ’ ನೋಡಬೇಕು.
‘ಎಳೆ ಚಂದ್ರನಾ ಕಿರು ಪಾದಕೆ ಆಕಾಶವೇ ಭೂಮಿಕೆ …’ ಎಂದು ಆರಂಭವಾಗುವ ‘ಆಕಾಶದೀಪ’ದ ಶೀರ್ಷಿಕೆಗೀತೆ ಈಗಾಗಲೇ ಕೇಳುಗರಿಗೆ ಇಷ್ಟವಾಗಿದ್ದು, ಇಂದಿನಿಂದ ಪ್ರತಿರಾತ್ರಿ ಎಂಟಕ್ಕೆ ಧಾರಾವಾಹಿ ಪ್ರಸಾರವಾಗಲಿದೆ.
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
