ಬೆಂಗಳೂರು: ವಿವಿಧ ವಸತಿ ಯೋಜನೆಗಳಿಗೆ ನಗರದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿ ವಶಪಡಿಸಿಕೊಂಡಿರುವ ಜಮೀನು ಅಕ್ರಮ-ಸಕ್ರಮಕ್ಕೆ ತುತ್ತಾಗುವ ಭೀತಿ ಬಿಡಿಎಗೆ ಎದುರಾಗಿದೆ. ಬಿಡಿಎ ಹೆಸರಿನಲ್ಲಿದ್ದು, ರೈತರ ಸ್ವಾಧೀನದಲ್ಲಿರುವ ಅಂದಾಜು 4,333 ಎಕರೆ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಹಾಗೂ ನರ್ಸರಿಗಳು ತಲೆ ಎತ್ತಿವೆ. ಭೂ ಮಾಲೀಕರೇ ಈ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ವಿುಸಿ ಕೊಂಡಿದ್ದಾರೆ ಎಂದು ಬಿಡಿಎ ಕಂದಾಯ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಭೂ ಮಾಲೀಕರು ಬಿಡಿಎಗೆ ಜಮೀನು ನೀಡಿ ಪರಿಹಾರ ಪಡೆದು ಮತ್ತೆ ಅದೇ ಜಮೀನಿನಲ್ಲಿ ಅಕ್ರಮ ವಾಗಿ ಕಟ್ಟಡ ನಿರ್ವಿುಸಿ ಅದನ್ನು ಸಕ್ರಮ ಮಾಡಿ ಕೊಳ್ಳಲು ಮುಂದಾಗಿದ್ದಾರೆ. ಇದು ಬಿಡಿಎಗೆ ತಲೆ ನೋವಾಗಿ ಪರಿಣಮಿಸಿದೆ. ಬಿಡಿಎ ಕಂದಾಯ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಸರ್ವೆ ಮಾಡಲು ಸೂಚನೆ ನೀಡುವು ದರಿಂದ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ತಿಳಿದು ಬಂದಿದೆ. ಜಮೀನಿನಲ್ಲಿ ಕಟ್ಟಡಗಳು ಹಾಗೂ ನರ್ಸರಿ ಇದ್ದರೆ ಆ ಜಾಗಕ್ಕೆ ವಿನಾಯಿತಿ ನೀಡುವ ಅಧಿಕಾರ ಬಿಡಿಎಗೆ ಇದೆ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಪರಿಹಾರ ಪಡೆದ ಜಮೀನಿನಲ್ಲಿ ಕಟ್ಟಡ ನಿರ್ವಿುಸಿ ಅಕ್ರಮ-ಸಕ್ರಮಕ್ಕೆ ಮುಂದಾಗುತ್ತಿದ್ದಾರೆ. ಕಟ್ಟಡ ತಲೆ ಎತ್ತುವಲ್ಲಿ ಕೆಲವು ಬಿಡಿಎ ಅಧಿಕಾರಿಗಳ ಪಾಲೂ ಇದೆ. ಭೂ ಮಾಲೀಕರ ಜತೆ ಅಧಿಕಾರಿಗಳು ಸೇರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮೆಟ್ರೋ ಡಿಪೋಗಳ ನಿರ್ಮಾಣಕ್ಕೆ ಒತ್ತು
ಪರಿಹಾರ ಮಂಜೂರು ಮಾಡಿದ ಜಮೀನನ್ನು ಮತ್ತೆ ಅಕ್ರಮ-ಸಕ್ರಮ ಯೋಜನೆ ಮೂಲಕ ಭೂ ಮಾಲೀಕರಿಗೆ ಹಿಂದಿರುಗಿಸಲು ಬಿಡಿಎ ಬೈಲಾದಲ್ಲಿ ಅವಕಾಶ ಇಲ್ಲ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಪರಿಹಾರ ನೀಡಿರುವ ಜಮೀನು ಮತ್ತೆ ಭೂ ಮಾಲೀಕರ ವಶಕ್ಕೆ ಹೋಗುತ್ತಿದೆ. ಕೆಲವು ಭೂ ಮಾಲೀಕರು ಕಟ್ಟಡ ನಿರ್ವಿುಸಿ ಕೋರ್ಟ್ ಮೆಟ್ಟಿಲೇರಿರುತ್ತಿದ್ದಾರೆ. ಜಮೀನು ಖರೀದಿಸಿದ ಜಾಗದಲ್ಲಿ ಕೆಲವರು ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬಿಡಿಎ ನಡೆಸಿದ ಲ್ಯಾಂಡ್ ಆಡಿಟ್​ನಲ್ಲಿ ಈ ಅಕ್ರಮದ ಬಗ್ಗೆ ಮಾಹಿತಿ ಇದೆ.
ಮಂಟಪ ಗ್ರಾಮದ ಸುತ್ತಮುತ್ತ ಭಾರಿ ಶಬ್ದ: ಆತಂಕ ನಿವಾರಣೆಗೆ ಮುಂದಾಗುತ್ತಿಲ್ಲ ಸರ್ಕಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
