ಬೆಂಗಳೂರು:ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ನಿರ್ವಣಗೊಂಡಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸುವ ಮೂಲಕ ಕರೊನಾ ಸಂಕಷ್ಟದ ಕಾಲದಲ್ಲಿ ಸಂಪನ್ಮೂಲ ಸಂಗ್ರಹಣೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರ, ಈ ಸಂಬಂಧ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಹಾಕಲು ತೀರ್ಮಾನಿಸಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಪುಟ ಉಪ ಸಮಿತಿ ನೀಡಿದ ವರದಿಯನ್ನಾದರಿಸಿ ಸುದೀರ್ಘ ಚರ್ಚೆ ನಡೆಯಿತು. ರಾಜ್ಯದಲ್ಲಿ ಹಲವಾರು ಅನಧಿಕೃತ ಬಡಾವಣೆಗಳು, ಕಟ್ಟಡ ಗಳಿಗೆ ಸರ್ಕಾರ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿದೆ. ಆದರೆ ತೆರಿಗೆ ಬರುತ್ತಿಲ್ಲ. ಆದ್ದರಿಂದ ಅನಧಿಕೃತ ಕಟ್ಟಡ ನಿರ್ವಣವನ್ನು ಸಕ್ರಮಗೊಳಿಸಿದರೆ ರಾಜ್ಯ ಸರ್ಕಾರಕ್ಕೆ ರಾಜಸ್ವ ಬರಲಿದೆ ಎಂದು ಒಮ್ಮತಾಭಿಪ್ರಾಯ ವ್ಯಕ್ತವಾಯಿತು.
ದಂಡ ಎಷ್ಟು?ಶೇ.50 ವರೆಗಿನ ನಿಯಮ ಉಲ್ಲಂಘನೆಗೆ ಶೇ. 6ವರೆಗೆ, ಅದಕ್ಕಿಂತ ಹೆಚ್ಚಿನ ಉಲ್ಲಂಘನೆಗೆ ಮಾರುಕಟ್ಟೆ ಮೌಲ್ಯದ ಶೇ. 25ರವರೆಗೆ ದಂಡ ವಿಧಿಸಲು ಕಾನೂನಿನಡಿ ಅವಕಾಶವಿದೆ ಎಂದು ಸಭೆಗೆ ಮಾಹಿತಿ ನೀಡಲಾಗಿದೆ. ನಗರ ಯೋಜನಾ ಕಾಯ್ದೆಯ ಪ್ರಕಾರವೇ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ.
ಯಾರಿಗೆಲ್ಲ ಅನುಕೂಲ:ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲರಿಗೂ ಅಕ್ರಮ ಸಕ್ರಮ ಅನುಕೂಲವಾಗಲಿದೆ.
ಗರಿಷ್ಠ ಪ್ರಮಾಣ ಎಷ್ಟು?ಅಕ್ರಮ ಕಟ್ಟಡದ 5000 ಚದರ ಅಡಿ ತನಕ ಸಕ್ರಮ ಮಾಡಲು ಚಿಂತಿಸಲಾಗಿದೆ.
ಉದ್ದೇಶವೇನು?ಒಂದೊಂದು ಉಲ್ಲಂಘನೆಗೆ ಒಂದೊಂದು ದಂಡ ಇರುತ್ತದೆ. ಇದರಿಂದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರುವುದ ರೊಂದಿಗೆ, ಸ್ಥಳೀಯ ಸಂಸ್ಥೆಗಳಿಗೂ ಪ್ರತಿ ವರ್ಷ ತೆರಿಗೆ ಬರುತ್ತದೆ.

ಸಿಎಂ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಯೋಜನೆ ಬಗ್ಗೆ ರ್ಚಚಿಸಲಾಗಿದೆ. ಕಂದಾಯ ನಿವೇಶನಗಳಲ್ಲಿ ಮನೆ ನಿರ್ವಿುಸಿಕೊಂಡಿರು ವವರನ್ನು ಯೋಜನೆಯಡಿ ತರಬೇಕೆಂಬ ಬಗ್ಗೆ ಸಭೆಯಲ್ಲಿ ಒಮ್ಮತಾಭಿಪ್ರಾಯಕ್ಕೆ ಬರಲಾಗಿದೆ.| ಆರ್. ಅಶೋಕ್ ಕಂದಾಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + five =
Remember me
