ಬೆಂಗಳೂರು:ವಿಧಾನಸೌಧದ ಒಳಗಡೆ ಬಂದಿದ್ದ ವ್ಯಕ್ತಿಯೊಬ್ಬ ಹೊರಹೋಗುವಾಗ, ಆತನ ಬ್ಯಾಗ್​ನಿಂದ ಮದ್ಯದ ಬಾಟಲ್ ಬಿದ್ದು ಒಡೆದು ಹೋಗಿದೆ. ಪರಿಣಾಮ ವಿಧಾನಸೌಧ ಆವರಣದಲ್ಲಿ ಎಣ್ಣೆಯ ವಾಸನೆ ಹರಡಿಕೊಂಡಿದ್ದು, ಸ್ವಚ್ಛತಾ ಸಿಬ್ಬಂದಿ ಬಂದು ಶುಚಿಗೊಳಿಸಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಕೆಂಗಲ್ ಗೇಟ್ ಬಳಿ ಬ್ಯಾಗ್​ನಲ್ಲಿ ಮದ್ಯದ ಬಾಟಲ್ ತೆಗೆದುಕೊಂಡು ಹೋಗುತ್ತಿದ್ದ. ಹೊರಗೆ ಹೋಗುವಾಗ ಬಾಟಲ್ ಕೈ ಜಾರಿ ಬಿದ್ದಿದೆ. ಬಾಟಲ್ ಸಂಪೂರ್ಣ ಚೂರು ಚೂರಾಗಿದೆ. ಕೂಡಲೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ವಿಧಾನಸೌಧ‌ ಒಳಗಡೆ ಮದ್ಯದ ಬಾಟೆಲ್ ಕರೆತರಲು ಬಿಟ್ಟವರು ಯಾರು? ಆ ವ್ಯಕ್ತಿ ಯಾರು? ಭದ್ರತಾ ವೈಫಲ್ಯ ಆಗಿದೆಯಾ? ಆತ ವಿಧಾನಸೌಧದ ಯಾವ ಕೋಣೆಯಿಂದ ಮದ್ಯದ ಬಾಟೆಲ್ ತರುತ್ತಿದ್ದ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 9 =
Remember me
