ಮಂಗಳೂರು:ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ವೈನ್‌ಶಾಪ್‌ವೊಂದರ ಮುಂಭಾಗದಲ್ಲಿ ಮದ್ಯಪ್ರಿಯರ ಸೌಲಭ್ಯಕ್ಕಾಗಿ ಶಾಮಿಯಾನ ಹಾಕಿರುವುದು ಲಾಕ್‌ಡೌನ್ ಸಡಿಲದ ಮೊದಲನೇ ದಿನದ ವಿಶೇಷ.
ತೊಕ್ಕೊಟ್ಟಿನ ಹೈಸ್ಪಿರಿಟ್ ವೈನ್‌ಶಾಪ್ ಮುಂಭಾಗ ಉದ್ದ ಸರತಿ ಸಾಲಿತ್ತು, ಬಿಸಿಲಿನ ವಾತಾವರಣ ಇದ್ದುದರಿಂದ ಕ್ಯೂ ನಿಲ್ಲುವವರ ಬವಣೆ ತಪ್ಪಿಸುವುದಕ್ಕಾಗಿ ಮಳಿಗೆಯವರು ಹಿಂದಿನ ದಿನ ಶಾಮಿಯಾನ ಹಾಕಿ ನೆರಳು ಸಿಗುವಂತೆ ಮಾಡಿದ್ದು ಎಣ್ಣೆಪ್ರಿಯರಿಗೆ ತುಸು ನೆರವಾಯಿತು.
ಇದನ್ನೂ ಓದಿVIDEO| ಅಥಣಿಯಲ್ಲಿ ಮದ್ಯದ ಅಂಗಡಿ ಮುಂದೆ ಸಾಲಿನಲ್ಲಿ ನಿಂತ ಎಮ್ಮೆ
ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಜಾನೆಯಿಂದಲೇ ಮದ್ಯದಂಗಡಿಗಳ ಮುಂಭಾಗ ಶಿಸ್ತಿನಿಂದ ಕಾದು ನಿಂತು ತಮ್ಮ ಸರದಿ ಬಂದಾಗ ಮದ್ಯ ಖರೀದಿಸಿ ತೆರಳಿದರು. ಯಾವುದೇ ರೀತಿಯ ಗೊಂದಲವಿರಲಿಲ್ಲ. ಲಾಕ್‌ಡೌನ್‌ನ ಹಲವು ಅಂಶಗಳು ಸೋಮವಾರದಿಂದ ಜಿಲ್ಲೆಯಲ್ಲಿ ಸಡಿಲಗೊಂಡಿವೆ. ಅದರಂತೆ ಮಾಲ್‌ಗಳು, ಮಾರ್ಕೆಟ್ ಕಾಂಪ್ಲೆಕ್ಸ್ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಅಗತ್ಯೇತರ ಅಂಗಡಿಗಳೂ ತೆರೆದಿವೆ. ಮೊದಲ ದಿನ ವಾಹನಗಳ ಸಂಚಾರವೂ ಹೆಚ್ಚಾಗಿತ್ತು.
https://www.instagram.com/p/B_wlPdinvtp/?igshid=1jt25nbtd1bxg
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
