ಮುಳಬಾಗಿಲು:“ಹಾವು” ಎಂದಾಕ್ಷಣ ಭಯಗೊಂಡು ಮಾರುದ್ದ ಓಡುವ ಜನರಿದ್ದಾರೆ. ಇನ್ನು ಹಾವು ಕಚ್ಚಿದರೆ ಮುಗಿದೇ ಹೋಯ್ತು… ಪ್ರಾಣಭೀತಿಯಲ್ಲಿ ಔಷಧೋಪಚಾರ ಮಾಡಿಸಿಕೊಂಡು ಬದುಕಿದರೆ ಮರುಜನ್ಮವೇ ಪ್ರಾಪ್ತಿಯಾಯ್ತು ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ, ಇಲ್ಲೊಬ್ಬ ಕುಡಿದ ಅಮಲಿನಲ್ಲಿ ಹಾವೊಂದನ್ನು ಕೊರಳಿಗೆ ಸುತ್ತಿಕೊಂಡು ಬೈಕ್​ ಏರಿದ್ದಾನೆ. ಸಾಲದ್ದಕ್ಕೆ ಒಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದು, ಬಾಯಲ್ಲಿ ಹಾವನ್ನು ಕಚ್ಚಿಕಚ್ಚಿ ಸಾಯಿಸಿದ್ದಾನೆ!
ಹೌದು, ಇಂತಹದ್ದೊಂದು ಅಮಾನವೀಯ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಆಂಧ್ರ ಗಡಿಗೆ ಹೊಂದಿಕೊಂಡಿರುವ ಮುಷ್ಟೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮುಷ್ಟೂರು ಗ್ರಾಮದ ಶಿವುಕುಮಾರ್​ ಎಂಬಾತ ಕಂಠಪೂರ್ತಿ ಕುಡಿದು ಈ ಅವಾಂತರ ಸೃಷ್ಟಿಸಿದ್ದಾನೆ. ಈತ ಬೈಕ್​ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಹಾವೊಂದು ಅಡ್ಡ ಬಂದಿದೆ. ಇದನ್ನು ಹಿಡಿದುಕೊಂಡ ಆತ ಬೈಕ್​ ಮೇಲೆ ಕುಳಿತು ಮನಸೋಇಚ್ಛೆ ಕಚ್ಚಿ ಕೊಂದಿದ್ದಾನೆ.
ಇದನ್ನೂ ಓದಿರಿಕೊನೆಗೂ ನೀಟ್, ಜೆಇಇ ಮೇನ್ಸ್​ ಎಕ್ಸಾಂ ಡೇಟ್​ ಫಿಕ್ಸ್
ಇಷ್ಟಕ್ಕೆ ಸುಮ್ಮನಾಗದ ಆತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಬೈಕ್​ನಲ್ಲಿ ಒಂದು ರೌಂಡ್​ ಬಂದಿದ್ದಾನೆ. ಕೊರಳಲ್ಲಿ ಹಾವು, ಒಂದು ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡೇ ಕುಣಿದು ಕುಪ್ಪಳಿಸಿದ್ದಾನೆ. ಹಾವಿನ ದೇಹವನ್ನು ಕಚ್ಚಿಕೊಂಡೂ ತಿಂದಿದ್ದಾನೆ. ಈ ಅವಾಂತರವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಅಬಕಾರಿ ಸಚಿವ ಎಚ್​.ನಾಗೇಶ್​ ಅವರ ಮತಕ್ಷೇತ್ರವಾದ ಮುಳಬಾಗಿಲುನಲ್ಲೇ ಕುಡುಕನೊಬ್ಬ ಮದ್ಯನಶೆಯಲ್ಲೇ ವನ್ಯಜೀವಿಯನ್ನು ಕೊಂದಿರುವುದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಹಾವು ಕಚ್ಚುವುದು ಸಾಮಾನ್ಯ. ಈ ಪ್ರಕರಣದಲ್ಲಿ ಮನುಷ್ಯನೇ ಹಾವನ್ನು ಕಚ್ಚಿಕಚ್ಚಿ ಕೊಂದಿರುವುದು ಆಘಾತಕಾರಿ. ಈತ ಕೊಂದ ಹಾವು ಯಾವುದು ಎಂದು ತಿಳಿದಿಲ್ಲ.
ಇದನ್ನೂ ಓದಿರಿಲಾಕ್​ಡೌನ್​ನಲ್ಲೇ ರಾಜಕುಮಾರಿ ಕಿರೀಟ ಧರಿಸಿದ ಪಿಗ್ಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 5 =
Remember me
