ಉಡುಪಿ:ಮಣಿಪಾಲದ ಡಿ.ಸಿ. ಆಫೀಸ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳ ರಂಪಾಟ ಎಲ್ಲೆಮೀರಿತ್ತು. ನಿನ್ನೆ ತಡರಾತ್ರಿ ಹೊರ ರಾಜ್ಯದ ಯುವತಿ ಕಂಠಪೂರ್ತಿ ಮದ್ಯ ಸೇವಿಸಿ ಪಿಜ್ಜಾ ಶಾಪ್​​​ಗೆ ಯುವಕನೊಬ್ಬನ ಜತೆ ಬಂದು ಗಲಾಟೆ ಮಾಡಿದ್ದಾಳೆ. ಶಾಪ್​​​​ ಸಿಬ್ಬಂದಿ ಹರಸಾಹಸ ಮಾಡಿ ಇಬ್ಬರನ್ನೂ ಹೊರಗೆ ಕಳುಹಿಸಿದ್ದಾರೆ.
ಹೊರಬಂದ ಯುವತಿಗೆ ಕಿಕ್​ ಹೆಚ್ಚಾಗಿ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಅಷ್ಟಕ್ಕೂ ಸಮಾಧಾನಗೊಳ್ಳದ ಯುವತಿ ಸಾರ್ವಜನಿಕರೊಂದಿಗೂ ಕಿರಿಕ್ ಮಾಡಿಕೊಂಡಿದ್ದಾಳೆ. ಕಡೆಗೆ, ಸಾರ್ವಜನಿಕರು ಯುವತಿಯ ತಲೆಗೆ ತಣ್ಣೀರು ಸುರಿದು ನಶೆ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ ತಣ್ಣೀರಿನ ಪ್ರಭಾವ ಬಹುಶಃ ಬೇರೆಯದೇ ರೂಪ ಪಡೆದುಕೊಂಡಿರಬಹುದು..! ಅದರ ಪರಿಣಾಮ, ಯುವತಿ ಸಾರ್ವಜನಿಕರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾಳೆ.
ನಿಲ್ಲಲೂ ತ್ರಾಣವಿಲ್ಲದ ಯುವತಿ ಪದೇ ಪದೇ ಬೀಳುತ್ತಿದ್ದಳು. ಕಡೆಗೆ ಜತೆಯಲ್ಲಿದ್ದ ಯುವಕನ ಕಡೆ ಗ್ರಹಚಾರ ತಿರುಗಿಕೊಂಡಿದೆ! ಯುವಕನಿಗೆ ಚಪ್ಪಲಿ ಏಟು ಕೊಟ್ಟಿದ್ದಾಳೆ ಯುವತಿ. ಇಷ್ಟೆಲ್ಲಾ ಡ್ರಾಮಾ ನಡೆದು, ಕಡೆಗೆ ಮಣಿಪಾಲ ಪೊಲೀಸರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಮೆಡಿಕಲ್ ಟೆಸ್ಟ್​​​​ಗೆ ಒಳಪಡಿಸಿದ ನಂತರ ಯುವತಿಯನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − three =
Remember me
