ಬೀದರ್:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮುಂದುವರಿಯುತ್ತಿದ್ದು, ದೊಡ್ಡ ದೊಡ್ಡವರ ಕೈವಾಡವಿರುವುದು ಬೆಳಕಿಗೆ ಬರುತ್ತಿದೆ. ಈ ನಡುವೆ ರಾಜ್ಯದ ಎಲ್ಲಾ ಇಲಾಖೆಯಲ್ಲೂ ಅಕ್ರಮ ಇರುವುದು ನನಗಷ್ಟೇ ಅಲ್ಲ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೀದರ್​ನಲ್ಲಿ ಮಾತನಾಡಿರುವ ಅವರು ಸಹಕಾರ ಕ್ಷೇತ್ರ, ಜಿಲ್ಲಾ ಹಾಲು ಉತ್ಪಾದಕರ ಸಂಘದಲ್ಲಿ 25ರಿಂದ 50 ಲಕ್ಷ ದವರೆಗೆ ಲಂಚ ಪಡೆಯಲಾಗುತ್ತಿದೆ.ಎಲ್ಲಿ ಅಕ್ರಮವಿಲ್ಲ ಹೇಳಿ, ಎಲ್ಲಾ ಇಲಾಖೆಯಲ್ಲೂ ದೊಡ್ಡ ದೊಡ್ಡ ಕರ್ಮಕಾಂಡಗಳು ನಡೆಯುತ್ತಿವೆ ಎಂದರು.
ಕೆಪಿಎಸ್​ಸಿ ಶುದ್ಧ ಮಾಡುತ್ತೇವೆ ಎಂದು ಹಿಂದಿನ ಕಾಂಗ್ರೆಸ್​ ಸರ್ಕಾರ ಶ್ಯಾಮಭಟ್ಟರನ್ನ ನೇಮಿಸಿದ್ದರು. ಅವರು ಒಂದು 1 ಕೋಟಿ ರೂ.ಹಣ ತೆಗೆದುಕೊಂಡಿದ್ದಾರೆ. ಆದರೆ ಕೆಲಸವೂ ಸಿಗದೇ ದುಡ್ಡು ಕಳೆದುಕೊಂಡವರು ಇವತ್ತಿಗೂ ಅಲೆದಾಡುತ್ತಿದ್ದಾರೆ. ನಾಡಿನ ಬಡ ಮಕ್ಕಳು ಕೆಲಸ ಸಿಗದೇ ದುಡ್ಡು ಕಳೆದುಕೊಂಡಿದ್ದಾರೆ,ಇದನ್ನ ಸರಿಪಡಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಸಿದ್ದರಿಲ್ಲ ಇವತ್ತು ಎಸ್ಐ ಒಂದು ಹೊರಗಡೆ ಬಂದಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ಈ ರೀತಿ ಅಕ್ರಮ ನಡೆಯುತ್ತಿದೆ ಎಂದರು.
ಮನೆ ಮಠ ಮಾರಿ ೨೫, ೩೦ ಲಕ್ಷ ಕೊಟ್ಟು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಲ್ಲಿ ದೊಡ್ಡವರು ಯಾರು ಸಿಕ್ಕಿಹಾಕಿಕೊಳ್ಳುವುದಿಲ್ಲ. ಇದರಲ್ಲಿ ದೊಡ್ಡ ರಾಜಕಾರಣಿಗಳು ಇದ್ದಾರೆ ಎಂದು ಹೇಳಲೂ ಆಗುವುದಿಲ್ಲ. ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 18 =
Remember me
