ಬೆಂಗಳೂರು:ಕರೊನಾ ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಕಷ್ಟ ಕಾಲದಲ್ಲೂ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡದಂತಾಗಿತ್ತು ಭಕ್ತರಿಗೆ. ಇದೀಗ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಎಲ್ಲ ಬಗೆಯ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ ಕೊಟ್ಟಿದೆ.
ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ತಡೆಯುವ ನಿಟ್ಟಿನಲ್ಲಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ನಡೆಯುವ ಸೇವೆ, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ, ದರ್ಶನ ಸೇರಿದಂತೆ ಎಲ್ಲ ಬಗೆಯ ಸೇವೆ ರದ್ದುಪಡಿಸಲಾಗಿತ್ತು. ಇದೀಗ ಅನ್​ಲಾಕ್​ -4 ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ದೇವಾಲಯಗಳಲ್ಲಿ ಎಲ್ಲ ಬಗೆಯ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಿದೆ. ಆದರೆ, ಕೆಲ ಷರತ್ತುಗಳನ್ನೂ ವಿಧಿಸಿದೆ.ಇದನ್ನೂ ಓದಿರಿಕರೊನಾ ಸೋಂಕು; ರಂಭಾಪುರಿ ಜಗದ್ಗುರುಗಳು ಆಸ್ಪತ್ರೆಗೆ ದಾಖಲು
ಕರೊನಾ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸುತ್ತಿರುವ ಕಾರಣ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಮತ್ತು ಅರ್ಚಕರಿಂದ ಒತ್ತಾಯ ಕೇಳಿ ಬರುತಿತ್ತು. ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ನೇತೃತ್ವದ ನಿಯೋಗವು ಮುಜರಾಯಿ ಇಲಾಖೆ ಸಚಿವರನ್ನು ಆ.27ರಂದು ಭೇಟಿ ಮಾಡಿ ಮನವಿ ಮಾಡಿತು. ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು.
ಇದೀಗ ಕೆಲ ಷರತ್ತುಗಳೊಂದಿಗೆ ಸೆ.1ರಿಂದಲೇ ಜಾರಿಗೆ ಬರುವಂತೆ ದೇವಸ್ಥಾನದಲ್ಲಿ ಎಲ್ಲ ರೀತಿಯ ಸೇವೆಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ. ಇದರೊಂದಿಗೆ ದೇವಾಲಯಗಳಲ್ಲಿ ಜಾತ್ರಾ ಉತ್ಸವಗಳು, ಬ್ರಹ್ಮ ರಥೋತ್ಸವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಉತ್ಸವಗಳನ್ನು ಕೇವಲ ದೇವಾಲಯದ ಆಗಮಿಕರು, ತಂತ್ರಿಗಳು, ಅರ್ಚಕರು, ಸಿಬ್ಬಂದಿ ಸಮ್ಮುಖದಲ್ಲಿ ದೇವಾಲಯದ ಒಳಾಂಗಣದಲ್ಲಿ ಸಾರ್ವಜನಿಕ ಜನಸಂದಣಿ ಇಲ್ಲದಂತೆ ನಡೆಸಲು ಸೂಚಿಸಲಾಗಿದೆ.
ಆಯಾಯ ದೇವಾಲಯಗಳ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದಾದ ಸೇವೆಗಳನ್ನು ಆರಂಭಿಸುವುದರ ಜತೆಗೆ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್​ ಬಳಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಲಾನುಕಾಲಕ್ಕೆ ಹೊರಡಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಭಕ್ತರಿಗೆ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ಸೂಚಿಸಿದೆ. ನಿಯಮ ಉಲ್ಲಂಘಿಸುವ ದೇವಾಲಯಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸುವಂತೆ ತಿಳಿಸಿದೆ.
video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

ರಂಗೇರೇತ್ತಿದೆ ಹಳ್ಳಿ ಫೈಟ್​, ಗ್ರಾಪಂ ಚುನಾವಣೆ ಯಾವಾಗ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nine =
Remember me
