ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೋವಿಡ್​ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ಸಿಎಂ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಜನಪ್ರತಿನಿಧಿಗಳು ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಬೆಂಗಳೂರಿನ ಸರ್ವಪಕ್ಷ ಮುಖಂಡರೊಂದಿಗೆ ಸಭೆ ನಡೆಸಿದ ಸಿಎಂ, ಕೋವಿಡ್ 19 ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಸಲಹೆ ಸೂಚನೆಯನ್ನೂ ಆಲಿಸಿದರು. ಅದರ ಡಿಟೇಲ್ಸ್​ ಇಲ್ಲಿದೆ ನೋಡಿ.ಇದನ್ನೂ ಓದಿರಿಕಿರುಕುಳಕ್ಕೆ ಬೇಸತ್ತ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಗೃಹ ಕಚೇರಿ ಮುಂದೆ ಧರಣಿ
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರವಾರು ಯಾವ್ಯಾವ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸಿಎಂ ಮಾಹಿತಿ ಪಡೆದರು. ಬೆಂಗಳೂರಿನಲ್ಲಿ ಕೋವಿಡ್​ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಮುಂದಿನ ಒಂದು ತಿಂಗಳಲ್ಲಿ ಪ್ರಕರಣಗಳ ನಿರ್ವಹಣೆಗೆ ತಾತ್ಕಾಲಿಕ ಮತ್ತು ದೂರದೃಷ್ಟಿಯ ಕ್ರಮಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳನ್ನೂ ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ಲಾಕ್​ಡೌನ್ ಬೇಕು ಎಂದು ವಿಪಕ್ಷದ ಜನಪ್ರತಿನಿಧಿಗಳು ಆಗ್ರಸಿದರೂ ಇದಕ್ಕೆ ಸಿಎಂ ಮತ್ತು ಅವರ ಸಚಿವರು ಒಪ್ಪಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ವೆಚ್ಚ ದುಬಾರಿ ಆಗ್ತಿದೆ, ಹಣ ಕಟ್ಟಲಾಗದೆ ಹೆಣ ತರಲೂ ಆಗುತ್ತಿಲ್ಲ ಎಂದು ಕಾಂಗ್ರೆಸ್​ ಶಾಸಕರೊಬ್ಬರು, ಮೂರ್ನಾಲ್ಕು ದಿನಗಳ ಹಿಂದೆ ಓರ್ವ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟಲಾಗದೆ ಅನುಭವಿಸಿದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದರು.
ರವಿಶಂಕರ್ ಗೂರೂಜಿ ಆಶ್ರಮದಲ್ಲಿ ಕೋವಿಡ್​ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು, ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವಿಚಾರದಲ್ಲಿ ಯಾವುದೇ ಜಾತಿಯ ಭೇದಭಾವ ಬೇಡ, ಮಾರ್ಕೆಟ್ ಏರಿಯಾಗಳಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರ ಹೆಚ್ಚು ನಿಗಾವಹಿಸಬೇಕು, ಬೆಂಗಳೂರಿನ ಸ್ಲಂಗಳಿಗೆ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು, ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಿಸಬೇಕು, ಬೆಡ್​ಗಳ ಮಾಹಿತಿ ಪಡೆಯಲು ವೆಬ್​ಸೈಟ್ ಓಪನ್ ಮಾಡಬೇಕು, ಬೆಂಗಳೂರನ್ನು ಸಂಪೂರ್ಣವಾಗಿ ಸ್ಯಾನಿಟೈಜರ್​ ಮಾಡಬೇಕು… ಎಂಬ ಸಲಹೆ ವಿಪಕ್ಷದ ಜನಪ್ರತಿನಿಧಿಗಳಿಂದ ಕೇಳಿಬಂತು.
ಇದನ್ನೂ ಓದಿರಿಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ
ಲಾಕ್​ಡೌನ್​ ಇಲ್ಲ. ಸೀಲ್​ಡೌನ್ ಅನ್ನು ಸ್ಟ್ರಿಕ್ಟ್ ಆಗಿ ಮಾಡುವುದಾಗಿ ಆಡಳಿತ ಪಕ್ಷ ಹೇಳಿತು. ಸಭೆ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಕರೊನಾ ರೋಗಿಗಳಿಗೆ ಊಟದ ವ್ಯವಸ್ಥೆ ಸರಿಯಿಲ್ಲ ಎಂದು ಸಭೆಯಲ್ಲಿ ಕಾಂಗ್ರೆಸ್​ನವರು ಆರೋಪ ಮಾಡಿದ್ರು. ರೋಗಿಗಳಿಗೆ ಉತ್ತಮ ಆಹಾರವನ್ನೇ ನೀಡಲಾಗುತ್ತಿದೆ. ಈ ಬಗ್ಗೆ ಸಿಎಂ ಈಗಾಗಲೇ ಖಡಕ್ ಸೂಚನೆ ನೀಡಿದ್ದಾರೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.
ಸರ್ವ ಪಕ್ಷ ಸಭೆಯಲ್ಲಿ ಶ್ರೀರಾಮುಲು, ಆರ್.ಅಶೋಕ್, ಬೈರತಿ ಬಸವರಾಜ್, ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ತೇಜಸ್ವಿ ಸೂರ್ಯ, ಎಂ.ಕೃಷ್ಣಪ್ಪ, ಹ್ಯಾರಿಸ್, ಉದಯ್ ಗರುಡಾಚಾರ್, ರಘು, ವಿಶ್ವನಾಥ್, ಜೆಡಿಎಸ್ ಎಂಎಲ್​ಸಿ ಶರವಣ, ರಮೇಶ್ ಗೌಡ, ಕಾಂಗ್ರೆಸ್​ನ ಜಮೀರ್ ಅಹ್ಮದ್, ನಾಸೀರ್ ಹುಸೇನ್, ಸಂಸದ ಡಿ.ಕೆ ಸುರೇಶ್, ಎನ್.ಎ. ಹ್ಯಾರಿಸ್, ದಿನೇಶ್​ ಗುಂಡೂರಾವ್, ರಿಜ್ವಾನ್ ಹರ್ಷದ್ ಪಾಲ್ಗೊಂಡಿದ್ದರು.
ಜನರ ಕೈಗೆ ಹಣ ಕೊಟ್ಟು ಮತ್ತೊಮ್ಮೆ ಲಾಕ್​ಡೌನ್​?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × two =
Remember me
