ಕೊಡಗು:ಮನೆಯಲ್ಲಿಯೇ ಕುಳಿತು ಬೇಸರವಾಗಿದೆ ಎಂದುಕೊಳ್ಳುತ್ತಿರುವ ಕೆಲವರು ಕರೊನಾ ವೈರಸ್‌ ನಡುವೆಯೂ ಟೂರ್‌ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಸ್ವಂತ ವಾಹನ ತೆಗೆದುಕೊಂಡು ಕೆಲವೊಂದು ಸ್ಥಳಗಳಿಗೆ ಹೋಗುತ್ತಿದ್ದಾರೆ.
ಹಾಗೇನಾದರೂ ನೀವು ಮಡಿಕೇರಿಯ ಸೌಂದರ್ಯವನ್ನು ಸವಿಯುವ ಪ್ಲ್ಯಾನ್‌ ಹಾಕಿದ್ದರೆ ಇದನ್ನೊಮ್ಮೆ ಓದಿಬಿಡಿ. ಇಲ್ಲಿದಿದ್ದರೆ ದೂರ ದೂರದ ಊರುಗಳಿಂದ ಮಡಿಕೇರಿಗೆ ಹೋಗಿ ಪೇಚಾಡುವ ಸ್ಥಿತಿ ಬರಬಹುದು.
ಇದನ್ನೂ ಓದಿ:ಕರೊನಾ ಗೆದ್ದ 96 ವರ್ಷದ ಅಜ್ಜಿ: ಆಸ್ಪತ್ರೆ ಅನ್ನ ಸ್ವಲ್ಪ ಗಟ್ಟಿ ಎಂದ ಮಗ
ಏಕೆಂದರೆ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಎಲ್ಲ ಹೋಟೆಲ್‌, ಹೋಂಸ್ಟೇ, ರೆಸಾರ್ಟ್‌, ಲಾಡ್ಜ್‌, ವಸತಿಗೃಹ ಎಲ್ಲವನ್ನೂ ಜಿಲ್ಲಾಡಳಿತ ಕ್ಲೋಸ್‌ ಮಾಡಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಜಿಲ್ಲೆಯ ಹೊರಭಾಗದ ಪ್ರವಾಸಿಗರ ಆನ್‌ಲೈನ್‌, ಆಫ್‌ಲೈನ್‌ ಯಾವುದೇ ರೂಪದ ಬುಕ್ಕಿಂಗ್‌ ಕೂಡ ಇರುವುದಿಲ್ಲ.
ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸುರಕ್ಷತಾ ಕ್ರಮಗಳ ಬಗ್ಗೆ ಇವು ಕಾಳಜಿ ವಹಿಸದೇ ಇರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆದ್ದರಿಂದ ಸದ್ಯ ಕೊಡಗು ಜಿಲ್ಲೆಯಾದ್ಯಂತ ಉಳಿದುಕೊಳ್ಳಲು ಪ್ರವಾಸಿಗರಿಗೆ ಯಾವುದೇ ಸೌಲಭ್ಯಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಈಗಾಗಲೇ ವಸತಿಗೃಹಗಳಲ್ಲಿ ಉಳಿದುಕೊಂಡಿರುವವರಿಗೆ ಸದ್ಯ ಯಾವುದೇ ತೊಂದರೆ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
