ಬೆಂಗಳೂರು:ರಾಜ್ಯದಲ್ಲಿ ಅನ್‌ಲಾಕ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ಶೇ.100 ಬೋಧಕ-ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದ್ದು, ಸರ್ಕಾರವೂ ಈಗಾಗಲೆ, ಅನ್‌ಲಾಕ್ 3.0 ಘೋಷಣೆ ಮಾಡಿದೆ. ಸರ್ಕಾರದ ಎಲ್ಲ ಸಿಬ್ಬಂದಿ ಶೇ.100 ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಕರೊನಾ ನಿಯಮ ಪಾಲಿಸಿಕೊಂಡು, ಕಡ್ಡಾಯವಾಗಿ ಕಾಲೇಜಿಗೆ ಹಾಜರಾಗಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ:ಭಾರತೀಯ ಯೋಧರಿಂದಲೇ ಪಾಕ್​ಗೆ ಮಾಹಿತಿ!; ಸಿಕ್ಕಿಬಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು..
ಈ ಮೊದಲು ಎರಡನೇ ಅಲೆಯ ಹಿನ್ನೆಲೆಯಲ್ಲಿ ಉಪನ್ಯಾಸಕರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿತ್ತು. ಬಹುತೇಕ ಉಪನ್ಯಾಸಕರು ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್‌ಎಂಎಸ್)ಗೆ ಕಲಿಕಾ ಸಾಮಗ್ರಿಯ ಸಿದ್ಧತೆ, ಆನ್‌ಲೈನ್ ಪಾಠ ಸೇರಿದಂತೆ ಕಾಲೇಜಿನ ಬಹುತೇಕ ಕಾರ್ಯವನ್ನು ಮನೆಯಿಂದಲೇ ಮಾಡುತ್ತಿದ್ದರು. ಕೆಲವೇ ಕೆಲವು ಉಪನ್ಯಾಸಕರು ಮಾತ್ರ ಪ್ರಾಂಶುಪಾಲರ ಸೂಚನೆಯಂತೆ ಕಾಲೇಜಿಗೆ ಬರುತ್ತಿದ್ದರು. ಈಗ ರಾಜ್ಯಾದ್ಯಂತ ಅನ್‌ಲಾಕ್ ಘೋಷಣೆಯಾಗಿರುವುದರಿಂದ ಎಲ್ಲರೂ ಕಾಲೇಜಿಗೆ ಬರಲು ಸೂಚನೆ ನೀಡಲಾಗಿದೆ.
ಬೆರಳೆರಡನ್ನು ಕತ್ತರಿಸಿಕೊಂಡ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡ!; ಮೈಮೇಲಿದೆಂಥ ಆಟ ಈ ಮೈಖೇಲ್​ನದ್ದು!?

18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + six =
Remember me
