ಕೋಲಾರ:ಹೆತ್ತ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾರೆನ್ನಲಾದ ಮರ್ಯಾದೆ ಹತ್ಯೆಯ ಪ್ರಕರಣ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಇಂದು ಬೆಳಕಿಗೆ ಬಂದಿದೆ.
ರಮ್ಯಾ (19) ಕೊಲೆಯಾದ ಯುವತಿ. ತಂದೆ ವೆಂಕಟೇಶಗೌಡ ಎಂಬುವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮಗಳಿಗೆ ಸಾಕಷ್ಟು ಬಾರಿ ಬುದ್ಧಿ ಮಾತು ಹೇಳಲಾಗಿತ್ತು.
ಆದರೆ, ಹೆತ್ತವರ ಮಾತು ಕೇಳದ ಮಗಳು, ಯುವಕನ ಜತೆ ತನ್ನ ಪ್ರೀತಿಯನ್ನು ಮುಂದುವರಿಸಿದ್ದಳು. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬದವರು ಆ. 25 ರಂದು ಆಕೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಕಲ್ಯಾಣ ರಥ ಐಷಾರಾಮಿ ಸ್ಲೀಪರ್ ಬಸ್ ಸೇವೆ: ಕೆಕೆಆರ್ ಟಿಸಿಗೆ ಪ್ರಥಮ ಬಾರಿಗೆ ವೋಲ್ವೋ ಸೇರ್ಪಡೆ
ಇದೀಗ ಊರಿನಲ್ಲಿ ಕೊಲೆ ‌ಮಾಡಿರುವ ಕುರಿತು ಗುಸು ಗುಸು ಶುರುವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಯುವತಿಯ ತಂದೆ ವೆಂಕಟೇಶ್​ರನ್ನು ಠಾಣೆಗೆ ಕೆರದು ವಿಚಾರಣೆ ಮಾಡಿದಾಗ ಪ್ರಕರಣ ಬಯಲಾಗಿದೆ. ಇಂದು ಬೆಳ್ಳಂಬೆಳಿಗ್ಗೆ ತಹಸೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು ಹೊರವಲಯದ ಕೆರೆಯಲ್ಲಿ ಅಪರೂಪದ ಮೀನುಗಳು ಪತ್ತೆ! ಇವುಗಳು ವಿಶೇಷತೆ ಏನು?

ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

https://www.vijayavani.net/darshan-and-sudeep-appeared-together-at-sumalatha-ambarishs-
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
