ಬೆಂಗಳೂರು :ಬೆಂಗಳೂರು ಟರ್ ಕ್ಲಬ್ (ರೇಸ್ ಕೋರ್ಸ್)ನಲ್ಲಿ ಸೂಕ್ತ ದಾಖಲೆ ಮತ್ತು ರಿಜಿಸ್ಟರ್ ನಿರ್ವಹಿಸದೆ ಅನಧಿಕೃತವಾಗಿ ಕುದುರೆ ಪಂದ್ಯಗಳಿಗೆ ಬೆಟ್ಟಿಂಗ್ ಆಯೋಜಿಸಿ ಪಂಟರ್‌ಗಳಿಂದ ಹಣ ಸಂಗ್ರಹಣೆ ಮಾಡಿದ ಆರೋಪದ ಮೇಲೆ 26 ಮಂದಿ ಹಾಗೂ ಕಂಪನಿ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ದಾಖಲಿಸಿದ ಎಫ್.ಐ.ಆರ್ ಹಾಗೂ ಅದರ ಕುರಿತು ತನಿಖೆ ರದ್ದುಪಡಿಸಲು ಕೋರಿ ‘ಸೂರ್ಯ ಅಂಡ್ ಕೋ ಬೆಂಗಳೂರು ಟರ್ ಕ್ಲಬ್ ’ಆವರಣದಲ್ಲಿ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ 26 ಎಂಟರ್ ಪ್ರೈಸಸ್ ಕಂಪೆನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠವು, ಅರ್ಜಿದಾರರು ಕೋಟ್ಯಂತರ ರೂ.ಗಳ ಅವ್ಯವಹಾರ ಮಾಡಿದ್ದು ತನಿಖೆಯ ವೇಳೆ ಈ ಅಂಶ ಬಹಿರಂಗವಾಗಿದೆ. ಇದು ಅತ್ಯಂತ ಗಂಭೀರ ಸ್ವರೂಪದ ಆರೋಪವಾಗಿದೆ. ಅಲ್ಲದೆ, ಜಿಎಸ್‌ಟಿ ಮತ್ತು ಟಿಡಿಎಸ್ ಮೊತ್ತ ಪಾವತಿಗೆ ಸಂಗ್ರಹಿಸಿರುವ ಕೊಟ್ಯಂತರ ರೂಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಅಷ್ಟೆ ಅಲ್ಲದೆ, ಪ್ರಕರಣದ ಆರೋಪ ಸಂಬಂಧ ದಾಖಲಾಗಿರುವ ಎ್.ಐ.ಆರ್ ಸಾಭೀತುಪಡಿಸುವ ಉದ್ದೇಶದಿಂದ ತನಿಖೆ ನಡೆಯುತ್ತಿದೆ. ಜತೆಗೆ ಆರೋಪ ಸಾಭೀತುಪಡಿಸಲು ಅಗತ್ಯ ಸಾಕ್ಷ್ಯಾಧಾರಗಳು ಸಂಗ್ರಹ ಮಾಡಬೇಕಾಗಿದ್ದು, ಅದಕ್ಕೆ ಮುಕ್ತ ಅವಕಾಶ ನೀಡಿ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಅವಕಾಶ ನೀಡದಿದ್ದಲ್ಲಿ ಆರೋಪಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿದೆ.ಈ ಹಿನ್ನೆಲೆ ಪೀಠ ಮಧ್ಯಪ್ರವೇಶ ಮಾಡಲಾಗದು ಎಂದು ತಿಳಿಸಿ ಅರ್ಜಿವಜಾಗೊಳಿಸಿ ಆದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
