ಬೆಂಗಳೂರು:ಸಮಾಜ ಕಲ್ಯಾಣ ಮಂತ್ರಿಯಾಗಿ ಕೆಲಸ ಮಾಡಿದ ನನ್ನ ಮೇಲೆ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಲಿಖಿತ ಆರೋಪ ಹಿಂಪಡೆಯಿರಿ ಅಥವಾ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ಕೊಡಿ ಎಂದು ಆಗ್ರಹಿಸಿ ಲೋಕಸಭೆ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ನನ್ನ ವಿರುದ್ಧ ಇತ್ತೀಚೆಗೆ ಸದನದ ಒಳಗೆ ಮತ್ತು ಹೊರಗೆ ತಾವು ಕೊಟ್ಟಿರುವ ಹೇಳಿಕೆ ವೈಯಕ್ತಿಕವಾಗಿ ಸಂಕಟ ಉಂಟು ಮಾಡಿದೆ. ತಮ್ಮ ಸರ್ಕಾರದ ಮೂಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಪ್ರಕರಣವನ್ನು ಸದನದಲ್ಲಿ ವಿಪಕ್ಷಗಳು ಟೀಕಿಸಿದಾಗ ನಿಮ್ಮಸರ್ಕಾರವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನನ್ನ ಮೇಲೆ ಆರೋಪ ಹೊರಿಸಿದ್ದೀರಿ.
ನನ್ನ ಅವಧಿಯಲ್ಲಿ ಬೋವಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ. ಎಂದು ನೀವು ಆಪಾದಿಸಿದ್ದೀರಿ. ಸತ್ಯ ಹೇಳಿ, ಅಂದು ಭ್ರಷ್ಟಾಚಾರ ಮಾಡಿದ ಇಬ್ಬರು ಹಿರಿಯ ಅಧಿಕಾರಿಗಳು ಹಿಂದೆ ತಮ್ಮದೇ ನೇತೃತ್ವದ ಸರ್ಕಾರ ಇದ್ದಾಗ ನೇಮಿಸಲಾಗಿತ್ತು. ನಾನು ಮಂತ್ರಿ ಆಗುತ್ತಲೇ ದಲಿತ ಸಂಘಟನೆಯ ಮುಖಂಡರು ಮತ್ತು ಜನಪ್ರತಿನಿಧಿಗಳ ದೂರು ಆಧರಿಸಿ ಅವರನ್ನು ಅಮಾನತು ಮಾಡಿ ತನಿಖೆಗೊಳಪಡಿಸಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಮುಖ ಜಾಗದಲ್ಲಿರುವ ಯಾವುದಾದರೂ ಒಬ್ಬ ಅಧಿಕಾರಿ ಆತ್ಮಸಾಕ್ಷಿಯಾಗಿ ಅಂದಿನ ಮಂತ್ರಿಯಾದ ನಾನು ಒಂದು ರೂಪಾಯಿ ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಟ್ಟಿದ್ದೇನೆಂದು ದೃಢೀಕರಿಸಿದರೂ ತಮಗೆ ಕೈಮುಗಿದು ಕ್ಷಮೆ ಕೇಳಲು ಸಿದ್ಧನಿದ್ದೇನೆ.ನನ್ನ ದೃಷ್ಟಿಯಲ್ಲಿ ಇನ್ನೂ ಕೂಡ ನೀವು ಮಾಡಿದ ಆರೋಪವನ್ನು ಹಿಂಪಡೆದುಕೊಳ್ಳುವ ಅವಕಾಶ ತಮಗಿದೆ. ಆದಾಗ್ಯೂ ನಿಮ್ಮ ನಿಲುವಿನಲ್ಲಿ ಬದಲಾವಣೆ ಆಗದಿದ್ದರೆ ಅಥವಾ ನನ್ನ ಮೇಲಿನ ಆರೋಪವನ್ನು ಸಿ.ಬಿ.ಐ ಗೆ ಕೊಡದಿದ್ದರೆ ನಾನೇ ಹೇಳಿದಂತೆ ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯೆದುರು ಧರಣಿ ಕೂತು ಸತ್ಯ, ನ್ಯಾಯಕ್ಕೆ ಆಗ್ರಹಿಸುವ ನನ್ನ ಹಕ್ಕನ್ನು ಕಾದಿರಿಸಿಕೊಂಡಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪತ್ರದಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
