

ಬೆಂಗಳೂರು:ದೆಹಲಿಯಲ್ಲಿ ನಾನು ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ದು ನಿಜ. ಆದರೆ ನಾನು ಪ್ರಧಾನಿ ಆಗಲು ಅಲ್ಲ, ಪ್ರಾದೇಶಿಕ ಪಕ್ಷ ಉಳಿಸಲು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಊಹಾಪೋಹಗಳಿಗೆ ತೆರೆ ಎಳೆದರು.
ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ನಾನು ಏನೂ ಮಾತನಾಡಿಲ್ಲ. ಕುಮಾರಸ್ವಾಮಿ ಆ ಬಗ್ಗೆ ಬಿಜೆಪಿ ನಾಯಕರ ಜತೆ ಕುಳಿತು ಚರ್ಚೆ ಮಾಡುತ್ತಾರೆ ಎಂದು ಹೇಳಿ ಮೈತ್ರಿಯನ್ನು ಖಚಿತಪಡಿಸಿದರು.
ಆದರೆ, ಇದೇ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಮೈತ್ರಿಯ ಬಗ್ಗೆ ಮಾತೆತ್ತದೆ ಪಕ್ಷದ ಉಳಿವು ನನ್ನ ಗುರಿ. ಈ ಹಿನ್ನೆಲೆಯಲ್ಲಿ ಏನು ಮಾಡಬೇಕು ಎಂಬ ಕುರಿತು ಶಾಸಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಹೆಜ್ಜೆ ಇಡುವುದಾಗಿ ಹೇಳಿದ್ದು ವಿಶೇಷವಾಗಿತ್ತು.
ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಜೆಡಿಎಸ್ ರಾಜ್ಯದಲ್ಲಿ ಎಲ್ಲಿದೆ ಎಂದು ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಅನೈತಿಕ ಸಂಪರ್ಕ ಮಾಡಿದರು ಎಂಬ ಟೀಕೆ ಮಾಡುತ್ತಿದ್ದಾರೆ.
ಯಾರಿಗೆ ನೈತಿಕತೆ ಇದೆ ಎಂದು ನಾನು ವಿಶ್ಲೇಷಣೆ ಮಾಡಬಲ್ಲೆ. 91ನೇ ವಯಸ್ಸಿನಲ್ಲಿ ನಾನು ವೈಯಕ್ತಿಕ ನಿಂದನೆ ಮಾಡುವುದಿಲ್ಲ ಎಂದರು.ದೆಹಲಿಗೆ ಹೋಗಿ ನಾನು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದು, ಈ ಪಕ್ಷ ಉಳಿಸಬೇಕೆಂದು. 40 ವರ್ಷ ಈ ಪಕ್ಷ ಉಳಿಸಿದ್ದೇನೆ. ಕುಮಾರಸ್ವಾಮಿ ಬಿಜೆಪಿ ಜತೆ ಹೋದಾಗಲೂ ಈ ಪಕ್ಷ ಉಳಿಸಿದ್ದೇನೆ. ಮೋದಿ ಅವರು ಕುಮಾರಸ್ವಾಮಿ ಅವರಿಗೆ ಕೊನೆವರೆಗೂ ನಿನ್ನನ್ನು ಸಿಎಂ ಮಾಡುತ್ತೇನೆ ಬಾ ಎಂದು ಕರೆದಿದ್ದರು. ಆದರೆ ಕುಮಾರಸ್ವಾಮಿ ಆಗ ಬಿಜೆಪಿ ಜತೆ ಹೋಗಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ನನ್ನ ಮನೆ ಬಾಗಿಲಿಗೆ ಬಂದಿದ್ದರು. ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿಯವರು ಅವರಾಗಿಯೇ ಸಂಪರ್ಕ ಮಾಡಲು ಇಚ್ಚೆ ಪಟ್ಟಾಗ ಸಂಪರ್ಕ ಮಾಡಿದ್ದು ಸತ್ಯ. ನಾನು ಯಾವ ಸೀಟು ಕೇಳಿಲ್ಲ. ಪ್ರತಿಯೊಂದು ಕಡೆಗೂ ಅವರಿಗೂ ಶಕ್ತಿ ಇದೆ. ಹಾಗೆಂದು ಜೆಡಿಎಸ್ ಶಕ್ತಿ ಏನೂ ಇಲ್ಲ ಎಂದು ಬಿಜೆಪಿಯೂ ಭಾವಿಸಬಾರದು. ವಿಜಯಪುರ, ರಾಯಚೂರು, ಬೀದರ್ ಮತ್ತಿತರ ಕಡೆ ನಮ್ಮ ಶಕ್ತಿ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ ಎಂದು ಅವರಿಗೂ ಹೇಳಿದ್ದೇನೆ. ಕುಮಾರಸ್ವಾಮಿ ಬಿಜೆಪಿ ನಾಯಕರ ಜತೆ ಕುಳಿತು ಎಷ್ಟು ಸೀಟು ನಿರ್ಣಯ ಮಾಡುತ್ತಾರೆ ಎಂದು ತಿಳಿಸಿದರು.
ನನ್ನ ನೀತಿ ಪ್ರಶ್ನೆ ಮಾಡುತ್ತೀರಾ ಸಿದ್ದರಾಮಯ್ಯ ಅವರೆ? ನಾಡಿನ ಹಕ್ಕು ಬಿಟ್ಟುಕೊಟ್ಟು ರಾಜಕಾರಣ ಮಾಡುವುದಿಲ್ಲ. ನಾನು ಯಾವ ಸಮಾಜಕ್ಕೆ ದ್ರೋಹ ಮಾಡಿದ್ದೇನೆ. ಪಕ್ಷದ ಉಳಿವಿಗೆ ಹೋರಾಟ ಮಾಡಿದ್ದೇನೆ ಎಂದು ದೇವೇಗೌಡ ಗದ್ಗಧಿತರಾದರು.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 15 =
Remember me
