ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಚೊಚ್ಚಲ ಬಜೆಟ್ ಅನ್ನು ಮುಂದಿನ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವುದು ಸ್ಪಷ್ಟವಾಗುತ್ತದೆ. ಅಭಿವೃದ್ಧಿಗೆ ಒತ್ತು ನೀಡುವ ಬದಲು ಇರುವ ಸಂಪನ್ಮೂಲವನ್ನು ಹಂಚಿಕೊಂಡು ಹೋಗಿರುವುದು ಕಂಡು ಬರುತ್ತದೆ. ಅನುದಾನವನ್ನು ನಿಗದಿ ಮಾಡಿದ ನಂತರ ಸಂಪನ್ಮೂಲ ಕ್ರೋಡೀಕರಣ ಎಲ್ಲಿಂದ ಎಂಬುದನ್ನು ತೋರಿಸಬೇಕಾಗುತ್ತದೆ. ಆದರೆ ಸಿಎಂ ಎಲ್ಲಿಯೂ ಸಂಪನ್ಮೂಲದ ಬಗ್ಗೆ ಹೇಳುವುದಿಲ್ಲ.
ಸಾಲವನ್ನು ಹೆಚ್ಚು ಮಾಡಿಕೊಳ್ಳುತ್ತ ಹೋಗುವುದು ಉತ್ತಮ ಅರ್ಥವ್ಯವಸ್ಥೆಯ ನಡೆ ಅಲ್ಲ. ಕಳೆದ ಹಲವು ವರ್ಷಗಳಿಂದ ಕೃಷಿ, ಗ್ರಾಮೀಣಾಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮತ್ತೆ ಮತ್ತೆ ಅದೇ ವಿಚಾರ ಹೇಳುವುದನ್ನು ನೋಡಿದಾಗ ತಳಮಟ್ಟದಲ್ಲಿ ಯೋಜನೆಗಳು ತಲುಪಿಲ್ಲ ಎಂಬುದು ಅರ್ಥವಾಗುತ್ತದೆ. ಬೊಮ್ಮಾಯಿ ಅವರು ಯೋಜನೆಗಳನ್ನು ತಳಮಟ್ಟಕ್ಕೆ ಹೇಗೆ ತಲುಪಿಸಲಿದ್ದಾರೆ ಎಂಬುದರ ಪ್ರಸ್ತಾಪ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಲ್ಪ ಒತ್ತು ನೀಡಿದ್ದಾರೆ.
ಆದರೆ ಉಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ಕಂಡು ಬರುತ್ತಿಲ್ಲ. ಗ್ರಾಮೀಣಾಭಿವೃದ್ಧಿಯ ವಿಚಾರಕ್ಕೆ ಬಂದಾಗ ಕೃಷಿ ಕ್ಷೇತ್ರಕ್ಕೆ ಸ್ವಲ್ಪ ಪ್ರಮಾಣದ ಒತ್ತು ಸಿಕ್ಕಿದೆ. ಕೃಷಿ ವಲಯದಲ್ಲಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಸಂಗತಿ. ಕೃಷಿ ಮತ್ತು ಪೂರಕ ವಲಯಕ್ಕೆ 33,700 ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಡೈರಿ ಸೆಕ್ಟರ್​ಗೆ ನೀಡಿರುವ ಆದ್ಯತೆ ಒಳ್ಳೆಯದಾಗಿದೆ.
ರಾಯರ ಸನ್ನಿಧಿಯಲ್ಲಿ ನಟ ಸುದೀಪ್​; ಶ್ರೀಸುಬುಧೇಂದ್ರ ತೀರ್ಥರಿಂದ ಸನ್ಮಾನ..

70ಕ್ಕೂ ಹೆಚ್ಚು ದಂಪತಿಗಳಿಗೆ ಮೋಸ; ಖತರ್​ನಾಕ್​ ಗಂಡ-ಹೆಂಡ್ತಿಯ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
