ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಸಲ್ಲಿಸಿದ ಅರ್ಜಿ ಪ್ರಕಾರ 50:50 ಅನುಪಾತದಡಿ ಬದಲಿ 14 ನಿವೇಶನಗಳ ಹಂಚಿಕೆಗೆ ಮುಡಾ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಬಿಂಬಿಸಲಾಗುತ್ತಿದೆ. ಅಸಲಿಗೆ ಸಭೆ ಇಂತಹ ನಿರ್ಣಯವನ್ನೇ ತೆಗೆದುಕೊಂಡಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಗಂಭೀರ ಆರೋಪ ಮಾಡಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರ್​ಟಿಐನಲ್ಲಿ ಪಡೆದ ಅಧಿಕೃತ ದಾಖಲೆಗಳು, ಸಭೆಯ ನಡವಳಿ ಆಡಿಯೋ ಪುರಾವೆ ಬಿಡುಗಡೆ ಮಾಡಿ ಮಾತನಾಡಿದರು.
ಮುಡಾ 20-11-2020ರ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ. ಆದರೆ, ದಾಖಲೆಗಳ ಪ್ರಕಾರ ಸಭೆ ನಡವಳಿಯಲ್ಲಿ ಈ ವಿಷಯವೇ ಪ್ರಸ್ತಾಪವಾಗಿಲ್ಲ, ನಿರ್ಣಯವನ್ನೂ ತೆಗೆದುಕೊಂಡಿಲ್ಲ. ಆದರೆ 50:50 ಅನುಪಾತದಡಿ ನಿವೇಶನಗಳ ಹಂಚಿಕೆ ವಿಷಯ ಮಾತ್ರ ಚರ್ಚೆಯಾಗಿದೆ. ನಿರ್ದಿಷ್ಟ ಅರ್ಜಿದಾರರ ಹೆಸರು ಪ್ರಸ್ತಾಪವಾಗಿಲ್ಲ. ಸರ್ಕಾರದ ಆದೇಶ, ಕಾಯ್ದೆ ಪ್ರಕಾರ ಕೊಡಲು ಬರುವುದಿಲ್ಲ. ಅಂತಹವರು ಬೇಕಿದ್ದರೆ ಕೋರ್ಟ್​ಗೆ ಹೋಗಲಿ ಎಂದು ಸಭೆಯಲ್ಲಿ ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿರುವುದು ಆಡಿಯೋದಲ್ಲಿದೆ ಎಂದರು.
ನಕಲಿ ನಿರ್ಣಯದಡಿ ಹಂಚಿಕೆ:ಸಭೆಯ ನಡವಳಿಯಲ್ಲಿಲ್ಲದ, 50:50 ಅನುಪಾತದ ವಿಷಯದ ಚರ್ಚೆ ಮುಂದೂಡಿಕೆಯಾಗಿದೆ. ನಂತರ ನಕಲಿ ನಿರ್ಣಯಗಳನ್ನು ಸೃಷ್ಟಿಸಿ ಅಂದಿನ ಮುಡಾ ಅಧ್ಯಕ್ಷ, ಆಯುಕ್ತ ರುಜು ಹಾಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದೇ ನಿರ್ಣಯದ ಆಧಾರದಲ್ಲಿ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಕೊಟ್ಟಿಲ್ಲ. ಬೇಕಾದವರಿಗೆ 14 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿದ್ದಾರೆ. ಇದೊಂದು ವ್ಯವಸ್ಥಿತವಾದ 10 ಸಾವಿರ ಕೋಟಿ ರೂ.ಗಳಿಗೂ ಅಧಿಕೃತ ಮೊತ್ತದ ಹಗರಣವಾಗಿದೆ ಎಂದು ದೂರಿದರು.
ಸಿಎಂ ಪತ್ನಿಗಿಂತ ಮುಂಚೆ ಶಾಂತಮ್ಮ, ಗೌರಮ್ಮ ಮತ್ತಿತರರು ಬದಲಿ ನಿವೇಶನ ಕೋರಿದ್ದರೂ ಕೊಟ್ಟಿಲ್ಲ. ಪ್ರಭಾವಿಗಳಿಗೆ ಮಾತ್ರ ನಕಲಿ ನಿರ್ಣಯದ ಲಾಭ ಮಾಡಿಕೊಟ್ಟಿದ್ದಾರೆ. ಮುಡಾ ಅಂದಿನ ಅಧ್ಯಕ್ಷ, ಆಯುಕ್ತರನ್ನು ತನಿಖೆಗೆ ಒಳಪಡಿಸಿದರೆ ಯಾರ ಪ್ರಭಾವವಿತ್ತು ಎನ್ನುವುದು ಹೊರಬೀಳಲಿದೆ.
ಸಿಬಿಐ ತನಿಖೆಗೆ ಒತ್ತಾಯ:ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಅಕ್ರಮದ ಬಗ್ಗೆ ತಾಂತ್ರಿಕ ಸಮಿತಿ, ಹಿಂದಿನ ಜಿಲ್ಲಾಧಿಕಾರಿ ವರದಿಗಳನ್ನು ಸರ್ಕಾರ ನಿರ್ಲಕ್ಷಿಸಿದ್ದು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದರು. ಆರ್​ಟಿಐ ಅಡಿ ಲಭ್ಯ ದಾಖಲೆಗಳು, ಆಡಿಯೋ ಪುರಾವೆಗಳೆಲ್ಲ ಕಾನೂನು ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿವೆ. ಕಳಂಕಿತ ಅಧಿಕಾರಿ ದಿನೇಶ್​ಕುಮಾರ್ ವಿರುದ್ಧ ಶಿಸ್ತು ಕ್ರಮವಹಿಸುವ ಬದಲು ಕುಲಸಚಿವರ ಹುದ್ದೆ ಬಳವಳಿ ನೀಡಿರುವುದು ಸಿದ್ದರಾಮಯ್ಯ ನಿಜಬಣ್ಣ ಬಯಲುಗೊಳಿಸಿದೆ ಎಂದು ಟೀಕಿಸಿದರು.
ಸುಳ್ಳು ಸಿದ್ದರಾಮಯ್ಯ:ಬಿಜೆಪಿ ಆಡಳಿತದಲ್ಲೇ ಈ ನಿರ್ಣಯವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದೂ ಸುಳ್ಳು ಎಂಬುದು ದಾಖಲೆಯಿಂದ ದೃಢಪಟ್ಟಿದೆ. ಮುಡಾ ಆಡಳಿತ ಮಂಡಳಿ ಮತ್ತು ಸರ್ಕಾರದ ಗಮನಕ್ಕಿಲ್ಲದೆ ಈ ಕೃತ್ಯ ಎಸಗಲಾಗಿದೆ. ಆದರೆ ಈ ಕುರಿತು ಸಲ್ಲಿಕೆಯಾಗಿದ್ದ ದೋಷಾರೋಪದ ದೂರುಗಳನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿ, ತಪಾಸಣೆಗೆ ತಾಂತ್ರಿಕ ಸಮಿತಿ ರಚಿಸಿದ್ದರು. ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಟಿ.ವಿ.ಮುರಳಿ ಅಧ್ಯಕ್ಷತೆಯ ತಾಂತ್ರಿಕ ಸಮಿತಿ ಸಮಗ್ರವಾಗಿ ಪರಿಶೀಲಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ 2023ರ ನವೆಂಬರ್ 3ಕ್ಕೆ ವರದಿ ಸಲ್ಲಿಸಿದೆ. ಅಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅದಾಗಲೇ ಅಧಿಕಾರಕ್ಕೆ ಬಂದಿತ್ತು. ಈ ಸಮಿತಿ ವರದಿ ಪ್ರಕಾರ 50:50 ಅನುಪಾತದಡಿ ನಿವೇಶನಗಳ ಹಂಚಿಕೆ ಕಾನೂನುಬಾಹಿರವೆಂದಿದೆ. ಸಿದ್ದರಾಮಯ್ಯ ನಿಷ್ಕಳಂಕರಾಗಿದ್ದರೆ ಈ ವರದಿ ಪ್ರಕಾರ ಕ್ರಮವಹಿಸುವ ಬದಲು ಸಮರ್ಥನೆಗೆ ಇಳಿದಿದ್ದಾರೆ. ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ತಾಂತ್ರಿಕ ಸಮಿತಿ ವರದಿಯನ್ನು ಬಹಿರಂಗ ಮಾಡಲಿ ಎಂದು ಎನ್.ರವಿಕುಮಾರ್ ಸವಾಲೆಸೆದರು.
ಚನ್ನಪಟ್ಟಣ ಉಪ ಚುನಾವಣೆ: ನೀವು ನಮ್ಮ ಕೈ ಬಲಪಡಿಸಿ, ನಿಮ್ಮ ಋಣ ತೀರಿಸುತ್ತೇವೆ ಎಂದ ಡಿಕೆ ಶಿವಕುಮಾರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 9 =
Remember me
