| ಕೀರ್ತಿನಾರಾಯಣ ಸಿ. ಬೆಂಗಳೂರು
ನಿಯೋಜನೆ ಮೇರೆಗೆ ಗುಪ್ತದಳದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಇಟ್ಟಿದ್ದ ಸಾಮೂಹಿಕ ಬೇಡಿಕೆಯಿಂದ ದಿಗಿಲುಗೊಂಡ ರಾಜ್ಯ ಸರ್ಕಾರ, ಭರ್ಜರಿ ವಿಶೇಷ ಭತ್ಯೆ ಘೋಷಿಸಿ ಸಮಾಧಾನಿಸಿದೆ.
ಗುಪ್ತದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಸ್ತುತ ಜಾರಿಯಲ್ಲಿರುವ ವಿಶೇಷ ಭತ್ಯೆ (ಕಾನ್​ಸ್ಟೆಬಲ್​ಗಳಿಂದ ನಾನ್ ಐಪಿಎಸ್ ಎಸ್ಪಿವರೆಗೆ) ಪ್ರಮಾಣವನ್ನು 3200 ರೂ.ನಿಂದ 5000 ರೂ.ವರೆಗೆ ಹೆಚ್ಚಿಸಿ ಸರ್ಕಾರ ಜೂ.2ರಂದು ಆದೇಶ ಹೊರಡಿಸಿದೆ. ಇನ್ನುಮುಂದೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯಷ್ಟೇ ಪ್ರಮಾಣದಲ್ಲಿ ಗುಪ್ತದಳದವರಿಗೂ ವಿಶೇಷ ಭತ್ಯೆ ಸಿಗಲಿದೆ. ಗುಪ್ತವಾರ್ತೆ ಘಟಕಕ್ಕೆ 1280 ಹುದ್ದೆಗಳು ಮಂಜೂರಾಗಿವೆ. ಆದರೆ, 400ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.
ಇದನ್ನೂ ಓದಿ:VIDEO| ಚಿರು ಲಾಸ್ಟ್ ಟಿಕ್​ಟಾಕ್​ ಇದು; ನಿಧನದ ಬಳಿಕ ಫಾಲೋವರ್ಸ್ ದ್ವಿಗುಣ!
ಪೂರ್ಣಪ್ರಮಾಣದಲ್ಲಿ ನೇರ ನೇಮಕಾತಿಗೆ ಅನುಮತಿ ಇಲ್ಲದ ಕಾರಣಕ್ಕೆ ಪೊಲೀಸ್ ಇಲಾಖೆಯ ಬೇರೆಬೇರೆ ಘಟಕಗಳಿಂದ ನಿಯೋಜನೆ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಗುಪ್ತದಳಕ್ಕೆ ನೇಮಕ ಮಾಡಿಕೊಳ್ಳುವ ಪದ್ಧತಿಯಿದೆ. ಉಗ್ರ ಚಟುವಟಿಕೆಯಂಥ ಅತಿ ಸೂಕ್ಷ್ಮ ವಿಚಾರಗಳ ಮಾಹಿತಿ ಸಂಗ್ರಹದ ಜತೆಗೆ ಗಣ್ಯ ವ್ಯಕ್ತಿಗಳ ಭದ್ರತೆ, ರಾಜಕೀಯ ವಿದ್ಯಮಾನಗಳ ಗೌಪ್ಯ ವಿವರ ಸಂಗ್ರಹಿಸುವ ಜವಾಬ್ದಾರಿ ವಹಿಸಲಾಗುತ್ತದೆ.
ಒತ್ತಡ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಗುಪ್ತದಳದವರಿಗೆ ಬೇರೆ ಘಟಕಗಳಿಗಿಂತ ಕಡಿಮೆ ವಿಶೇಷ ಭತ್ಯೆ ನೀಡಲಾಗುತ್ತದೆ. ಅಲ್ಲದೆ ಇತ್ತೀಚೆಗೆ ವಿಶೇಷ ಭತ್ಯೆ ಪಡೆಯು ವವರಿಗೆ ಕಷ್ಟ ಪರಿಹಾರ ಭತ್ಯೆ ಕಡಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದಾಗಿ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸುವ ಪೇದೆಗಳಿಗೆ ಪ್ರತಿ ತಿಂಗಳು 2200 ಹಾಗೂ ಮುಖ್ಯಪೇದೆಗಳಿಗೆ 1000 ರೂ. ವೇತನದಲ್ಲಿ ಕಡಿತಗೊಳ್ಳುತ್ತಿತ್ತು.
ಇದನ್ನೂ ಓದಿ:58 ಕಡೆ ಎಸ್​ಎಸ್​ಎಲ್​ಸಿ ಪರೀಕ್ಷೆ, ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಸೌಲಭ್ಯ
ಕಷ್ಟಪರಿಹಾರ ಭತ್ಯೆ ಕಡಿತದಿಂದ ಆಕ್ರೋಶಗೊಂಡ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮನ್ನು ಮಾತೃಘಟಕಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಒಂದು ವೇಳೆ ವಾಪಸ್ ಮಾತೃಘಟಕಕ್ಕೆ ಕಳುಹಿಸಿದರೆ ಕೆಲಸಗಳಿಗೆ ತೊಂದರೆಯುಂಟಾಗುವ ಅಪಾಯವನ್ನು ಅರಿತ ಸರ್ಕಾರ, ವಿಶೇಷ ಭತ್ಯೆ ಹೆಚ್ಚಿಸಲು ಅನುಮತಿ ಕೊಟ್ಟಿದೆ. ಬೇರೆ ರಾಜ್ಯಗಳ ಗುಪ್ತದಳ ಸಂಖ್ಯಾಬಲಕ್ಕೆ ಹೊಲಿಸಿದರೆ ರಾಜ್ಯದ ಸಂಖ್ಯಾಬಲ ತೀರಾ ಕಡಿಮೆ. ಪಂಜಾಬ್​ನಲ್ಲಿ 4,453 ಹುದ್ದೆ ಮಂಜೂರಾಗಿದ್ದು, 3,851 ಹುದ್ದೆ ಭರ್ತಿಯಾಗಿವೆ. ಆಂಧ್ರಪ್ರದೇಶದಲ್ಲಿ 2,247 ಹುದ್ದೆಗಳು ಮಂಜೂರಾಗಿವೆ. ಕರ್ನಾಟಕದಲ್ಲಿ ಇದರ ಅರ್ಧದಷ್ಟೂ ಇಲ್ಲ.
ಗುಪ್ತದಳವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ವೃಂದದ ಹುದ್ದೆಗಳನ್ನು ಇತ್ತೀಚೆಗೆ ಮರುವಿಂಗಡಣೆ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಘಟಕಗಳಲ್ಲಿ ಈ ಹಿಂದೆ ಹೆಚ್ಚುವರಿಯಾಗಿ ಮಂಜೂರಾಗಿದ್ದ ಸಿವಿಲ್ ಪೇದೆಗಳ ಹುದ್ದೆಗಳನ್ನು ರದ್ದುಪಡಿಸಿ ಆ ಹುದ್ದೆಗಳಿಗೆ ಬದಲಾಗಿ ಮುಖ್ಯಪೇದೆ ಮತ್ತು ಎಎಸ್​ಐ ಹುದ್ದೆಗಳನ್ನು ಉನ್ನತೀಕರಿಸುವುದರ ಜತೆಗೆ ಕರ್ತವ್ಯ ನಿರ್ವಹಣಾ ಜವಾಬ್ದಾರಿಯನ್ನೂ ಮರುಹಂಚಿಕೆ ಮಾಡಲಾಗಿದೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + 17 =
Remember me
