ಬೆಂಗಳೂರು:ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶಪತ್ರಗಳನ್ನು ಆನ್​ಲೈನ್​ನಲ್ಲಿ ಬಿಡುಗಡೆ ಮಾಡಿದೆ. ಅದನ್ನು ಡೌನ್​ಲೋಡ್ ಮಾಡಿಕೊಂಡು, ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಅಪ್ಡೇಟ್ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಅಪ್​ಡೇಟ್​ಗೆ ಈಗಾಗಲೇ ನಿಗದಿಪಡಿಸಿದ್ದ ಗಡುವು ಜ.20ರವರೆಗೆ ವಿಸ್ತರಣೆಗೊಂಡಿದೆ.
ಶಾಲಾ ಮುಖ್ಯಸ್ಥರುhttp://kseeb.kar.nic.in/ವೆಬ್​ಸೈಟ್ ಮೂಲಕ ತಾತ್ಕಾಲಿಕ ಪ್ರವೇಶಪತ್ರ ಡೌನ್​ಲೋಡ್ ಮಾಡಿಕೊಳ್ಳಬೇಕಿದೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರವನ್ನು ತಿದ್ದುಪಡಿ ಮಾಡಿ ಅಪ್ಡೇಟ್ ಮಾಡಬೇಕು. ಎಸ್​ಎಟಿಎಸ್ ನಂಬರ್, ಖಾಸಗಿ ಅಭ್ಯರ್ಥಿಗಳು ರೆಫರೆನ್ಸ್ ಸಂಖ್ಯೆ, ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದು.
ಮೊದಲು ಎಸ್​ಎಟಿಎಸ್ ಡೇಟಾಬೇಸ್​ನಲ್ಲಿ ತಿದ್ದುಪಡಿ ಮಾಡಿ ನಂತರ ಮಂಡಳಿಯ ಶಾಲಾ ಲಾಗಿನ್​ನಲ್ಲಿ ಕ್ಲಿಕ್ ಮಾಡಿ ಸೇವ್ ಮಾಡಬೇಕಿದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿಯನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶ ಇದೆ. ಈ ಎಲ್ಲ ಅಂಶ ಹೊರತುಪಡಿಸಿ ವಿದ್ಯಾರ್ಥಿಯು ಮಾಧ್ಯಮ ಹಾಗೂ ಇತರೆ ವಿಷಯಗಳಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದಲ್ಲಿ, ನೋಡಲ್ ಅಧಿಕಾರಿಗಳಿಗೆ ಜ.25ರೊಳಗೆ ಲಿಖಿತ ಮನವಿ ಸಲ್ಲಿಸಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
