ಬೆಂಗಳೂರುಆಧುನಿಕ ಜಗತ್ತಿನಲ್ಲಿ ಪದವೀಧರ ವಿದ್ಯಾರ್ಥಿಗಳಲ್ಲಿ ಜ್ಞಾನವೊಂದಿದ್ದರೆ ಸಾಲದು. ಉದ್ಯಮಶೀಲತೆ ಹಾಗೂ ನಾವಿನ್ಯತಾ ಗುಣಗಳನ್ನು ಬೆಳೆಸಿಕೊಳ್ಳುವಂತೆ ವಂದೇ ಭಾರತ್ ರೂವಾರಿ ಇಂಜಿನಿಯರ್ ಸುಧಾಂಶು ಮಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗೀತಂ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಸ್ತುತ ಪ್ರವೀಣತೆ ಹೊಂದಿರುವ ಉದ್ಯೋಗಿಗಳನ್ನು ಕಂಪನಿಗಳು ಬಯಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ಕಲಿಯಲು ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಹೊಸತನದಲ್ಲಿ ನಾಚಿಕೆ ಬೇಡ:
ಕಲಿಯುವಲ್ಲಿ, ಹೊಸದನ್ನು ಕೇಳಿ ತಿಳಿದುಕೊಳ್ಳುವುದರಲ್ಲಿ ನಾಚಿಕೆ ಪಡಬೇಡಿ. ಜೀವನದಲ್ಲಿ ಮೂರ್ಖರಾಗುವುದಕ್ಕಿಂತ ತಿಳಿದುಕೊಳ್ಳುವುದು ಉತ್ತಮ. ಹೊಸದನ್ನು ಕಲಿಯುವ, ಆಲೋಚಿಸುವ ಗುಣಗಳನ್ನು ಅಳವಡಿಸಿಕೊಳ್ಳುವ ಜತೆ ಉದ್ಯೋಗದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಂಡರೆ ಯಶಸ್ಸು ನಿಮ್ಮದಾಗಲಿದೆ. ತಮ್ಮ ಜೀವನದಲ್ಲಿನ ಯಶಸ್ಸು ನಿಮ್ಮ ಕೈಯಲ್ಲಿಯೇ ಇರಲಿದೆ. ಯಾವುದೇ ಕೆಲಸವನ್ನು ಖುಷಿ ಹಾಗೂ ಬದ್ಧತೆಯಿಂದ ಮಾಡಿದಾಗ ಸಿಗುವ ಲಿತಾಂಶವೇ ಯಶಸ್ಸು ಆಗಿರುತ್ತದೆ. ಭಯದಿಂದ ವೈಲ್ಯವಾಗಬಹುದು. ಆದರೆ, ಧೈರ್ಯದಿಂದ ಮುನ್ನುಗ್ಗಿದಾಗ ಯಶಸ್ಸು ಸಿಗಲಿದೆ ಎಂದರು.
ಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಮಾತನಾಡಿ, ಇಂದಿನ ಪದವೀಧರರು ನಮ್ಮ ಬದ್ದತೆಗೆ ಸಾಕ್ಷಿಯಾಗಿದ್ದಾರೆ. ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಗೆ ನಾವು ಆದ್ಯತೆ ನೀಡುತ್ತೇವೆ. ಈ ಘಟಿಕೋತ್ಸವ ಸಮಾರಂಭವು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯದ ಬದ್ಧತೆಗೆ ಪುರಾವೆಯಾಗಿದೆ ಎಂದರು.
ಇಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ
ಹೆಸರಾಂತ ನೃತ್ಯಗಾರ್ತಿ ಲೀಲಾ ಸ್ಯಾಮ್ಸನ್ ಮತ್ತು ಜಲ ಸಂರಕ್ಷಕ ಲೇಕ್‌ಮ್ಯಾನ್ ಎಂದೇ ಪರಿಚಿತರಾಗಿರುವ ಆನಂದ್ ಮಲ್ಲಿಗವಾಡ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
1,218 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ತಂತ್ರಜ್ಞಾನ, ವಿಜ್ಞಾನ ಮತ್ತು ನಿರ್ವಹಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಶೈಕ್ಷಣಿಕ ಸಾಧನೆ ಮಾಡಿದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು. ವಿವಿಧ ಕೋರ್ಸ್‌ಗಳಲ್ಲಿ ಪದವಿ ಪೂರ್ಣಗೊಳಿಸಿದ ಒಟ್ಟು 1,218 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಗೀತಂ ವಿವಿಯು 360 ಡಿಗ್ರಿ ಕಲಿಕೆಯ ಅನುಭವವನ್ನು ಒದಗಿಸಲು ಬದ್ಧರಾಗಿದ್ದೇವೆ. ವಿದ್ಯಾರ್ಥಿಗಳ ಕಲಿಕಾ ಜೀವನಕ್ಕೆ ಸೂಕ್ತ ವಾತಾವರಣ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಸಂಶೋಧನೆ ಮೂಲಕ ಬದಲಾವಣೆ ತರಲು ಬಯಸುವ ಪ್ರತಿ ವಿದ್ಯಾರ್ಥಿಗೆ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಲು ಸಿದ್ಧರಾಗಿದ್ದೇವೆ.– ಎಂ. ಭರತ್, ಗೀತಂ ವಿವಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
