ಬೆಂಗಳೂರು:ಬಟ್ಟೆ ಖರೀದಿಸಿದಾಗ ಅದ್ರ ಖುಷಿಯೇ ಬೇರೆ. ಹೊಸ ಬಟ್ಟೆ ಖರೀದಿ ಮಾಡಿದ ಮರುದಿನವೇ ಬಹುತೇಕರು ಬಟ್ಟೆ ಧರಿಸಿ ಸಂಭ್ರಮಿಸುತ್ತಾರೆ. ಹೊಸ ಬಟ್ಟೆಯನ್ನು ಒಗೆಯದೆ ಹಾಕಿಕೊಳ್ಳುವ ಮಜವೇ ಬೇರೆ. ಆದರೆ ಹೊಸ ಬಟ್ಟೆಯನ್ನು ತೊಳೆಯದೆ ಎರಡ ರಿಂದ ಮೂರು ಭಾರಿ ಧರಿಸುವ ಅಭ್ಯಾಸ ಹಲವರಿಗೆ ಇರುತ್ತದೆ. ಇದು ಒಳ್ಳೆಯ ಅಭ್ಯಾಸವಂತೂ ಅಲ್ಲವೇ ಅಲ್ಲ.
ಬಟ್ಟೆಯನ್ನು ಒಂದು ಭಾರಿ ಧರಿಸಿದ ನಂತರ ತೊಳೆಯದೆ ಬಳಸಿದರೆ, ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಈಗ ಮಳೆಗಾಲ. ಈ ಅವಧಿಯಲ್ಲಿ ತೊಳೆದ ಬಟ್ಟೆಗಳು ಬೇಗ ಒಣಗುವುದಿಲ್ಲ. ಅದರಲ್ಲಿ ಎರಡ್ಮೂರು ದಿನಕ್ಕೊಮ್ಮೆ ಬಳಕೆ ಮಾಡಿದ ನಂತರ ತೊಳೆಯುತ್ತಾರೆ. ಕೆಲವರು ಈಗಾಗಲೇ ಬಳಸಿದ್ದನ್ನು ಬಳಸುವುದನ್ನು ಮುಂದುವರಿಸುತ್ತಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಈ ಬಳಕೆಯಿಂದ ಅನೇಕ ಅಡ್ಡ ಪರಿಣಾಮಗಳಿವೆ.
ಇದನ್ನೂ ಓದಿ:ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..
ವಾಸನೆ:ಹೆಚ್ಚಿನವರಿಗೆ ಬೆವರಿನ ವಾಸನೆ ಕೆಟ್ಟದಾಗಿರುತ್ತದೆ. ಬೆವರು ಮತ್ತು ಕೊಳೆಯಿಂದ ಬ್ಯಾಕ್ಟೀರಿಯಾ ಉಂಟಾಗುತ್ತದೆ. ಹಾಗಾಗಿ ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೆಯೇ ತೊಳೆದ ಬಟ್ಟೆ ಧರಿಸಿದರೆ ಈ ದುರ್ವಾಸನೆ ಬರುವುದಿಲ್ಲ.
ಇದನ್ನೂ ಓದಿ:ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
ಸೋಂಕುಗಳು:ಒಮ್ಮೆ ಧರಿಸಿ ತೊಳೆಯದ ಬಟ್ಟೆಯಲ್ಲಿ ರೋಗಾಣುಗಳು ವೃದ್ಧಿಯಾಗುತ್ತವೆ. ಏಕೆಂದರೆ ನಮ್ಮ ಬೆವರು ಮತ್ತು ಮೂತ್ರದ ಕಣಗಳು ಅದಕ್ಕೆ ಅಂಟಿಕೊಳ್ಳುತ್ತವೆ. ಇದರಿಂದ ಬ್ಯಾಕ್ಟೀರಿಯಾಗಳುಬೆಳೆಯುತ್ತವೆ. ಇದು ಯೀಸ್ಟ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
ತೇವ ಇರುವ ಬಟ್ಟೆ ಧರಿಸಬೇಡಿ:ಒದ್ದೆಯಾದ ಬಟ್ಟೆಗಳನ್ನು ಬಳಸಬಾರದು. ಇದು ಸೋಂಕನ್ನು ಹೆಚ್ಚಿಸುವುದಲ್ಲದೆ ಯೀಸ್ಟ್ ಸೋಂಕುಗಳಿಗೆ ಕಾರಣವಾಗುತ್ತದೆ. ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.  ಒಣಗಿದವುಗಳನ್ನು ಮಾತ್ರ ಬಳಸಬೇಕು. ತೊಳೆದ ನಂತರ ಅವುಗಳನ್ನು ಬಿಸಿಲಿನಲ್ಲಿ ಒಣಗಿಸುವುದು ಉತ್ತಮ.
ಇದನ್ನೂ ಓದಿ:ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
ಒಮ್ಮೆ ಬಟ್ಟೆಯನ್ನು ಧರಿಸಿ ರಸ್ತೆಗಿಳಿದರೆ ಬಟ್ಟೆಯ ಮೇಳೆ ಧೂಳಿನ ಕಣಗಳು ಹಾಗೂ ಕೆಲವು ಸೂಕ್ಷ್ಮ ಜೀವಿಗಳು ಉಂಟಾಗಿರುತ್ತವೆ. ಈ ಬಟ್ಟೆಯನ್ನೇ ಮತ್ತೆ ಧರಿಸುವುದರಿಂದ ಅರ್ಜಿ ಉಂಟಾಗಿ ಮೈ ತುರಿಕೆ ಉಂಟಾಗುತ್ತದೆ.
ಹೊಸ ಬಟ್ಟೆ ಧರಿಸಿದ್ರೆ ಸೋಂಕಿನ ಅಪಾಯ :ಹೊಸ ಬಟ್ಟೆಯನ್ನು ಎಲ್ಲಿ ತಯಾರಿಸಲಾಗಿದೆ ಎಂಬುದು ನಿಮಗೆ ತಿಳಿದಿರೋದಿಲ್ಲ. ಅನೇಕ ಕೈಗಳನ್ನು ಟಚ್ ಮಾಡಿ, ಅನೇಕ ಸ್ಥಳಗಳಲ್ಲಿ ಬಿದ್ದು ಈ ಬಟ್ಟೆ ಸಿದ್ಧವಾಗಿರುತ್ತದೆ. ಆ ಎಲ್ಲ ಸ್ಥಳದಲ್ಲಿರುವ ಸೋಂಕು ನಿಮ್ಮ ದೇಹವನ್ನು ಸುಲಭವಾಗಿ ತಲುಪುತ್ತದೆ.
ಈ ಟಿಪ್ಸ್ ಪಾಲಿಸಿದರೆ ನಿಮ್ಮ ಶೂಗಳು ಹೊಸದರಂತೆ ಹೊಳೆಯುತ್ತವೆ.. ಚಿಟಿಕೆಯಲ್ಲಿ ಕೊಳೆ ಮಾಯ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + eleven =
Remember me
