ಬೆಂಗಳೂರು:ಗೂಗಲ್​ ಬಳಿಕ ಇದೀಗ ಮತ್ತೊಂದು ದೈತ್ಯ ಕಂಪನಿ ಕನ್ನಡಿಗರ ಆಕ್ರೋಶಕ್ಕೆ ಮಣಿದು, ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ. ಅಮೆಜಾನ್ ಕಂಪನಿ ತನ್ನ ಇ-ಕಾಮರ್ಸ್ ವೆಬ್​ಸೈಟ್​ನಲ್ಲಿ ಕನ್ನಡ ಧ್ವಜವನ್ನು ಹೋಲುವಂಥ ಬಣ್ಣದ ಬಟ್ಟೆಯಲ್ಲಿ ಸಿದ್ಧಪಡಿಸಿದ ಒಳಉಡುಪನ್ನು ಮಾರಾಟಕ್ಕೆ ಇಟ್ಟಿತ್ತು.
ಹೀಗೆ ಕರ್ನಾಟಕದ ಧ್ವಜ ಹೋಲುವ ರೀತಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಮಹಿಳೆಯರ ಒಳಉಡುಪಿನ ಮೇಲೆ ಕರ್ನಾಟಕ ಲಾಂಛನವನ್ನೂ ಮುದ್ರಿಸಲಾಗಿದೆ. ಅಮೆಜಾನ್ ಕಂಪನಿಯ ಈ ನಡೆಗೆ ಕನ್ನಡಿಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಅದೀಗ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ. ಕನ್ನಡ ಧ್ವಜವನ್ನು ಹೋಲುವಂತಿದ್ದ ಒಳಉಡುಪಿದ್ದ ಜಾಗದಲ್ಲಿ ಬಿಕಿನಿಯ ಫೋಟೋವೊಂದನ್ನು ಹಾಕಿದೆ. ಆದರೆ ಬ್ರ್ಯಾಂಡ್ ವಿವರದಲ್ಲಿ ಫ್ಲ್ಯಾಗ್ ಆಫ್​ ಕರ್ನಾಟಕ ಒರಿಜಿನಲ್ ಡಿಸೈನ್​ ಎಂಬುದನ್ನು ಅದು ಹಾಗೇ ಇರಿಸಿರುವುರಿಂದ ಮತ್ತದೇ ಒಳಉಡುಪು ಗುಟ್ಟಾಗಿ ಮಾರಾಟ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ.
ಅಮೆಜಾನ್‌ನಿಂದಲೂ ಕನ್ನಡಕ್ಕೆ ಅಪಮಾನ! ಒಳಉಡುಪಿಗೆ ಕರುನಾಡ ಲಾಂಛನ, ಧ್ವಜ ಬಳಕೆ

ಮಹಿಳಾ ಅಧಿಕಾರಿಯಿಂದಲೇ ಮಕ್ಕಳ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ!; ಸರಿಯೇ ಇಲ್ಲ ಈ ಸರಯೂ ಚಾರಿಟಬಲ್ ಟ್ರಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
