ಮಂಡ್ಯ:ರೆಬೆಲ್​ಸ್ಟಾರ್​, ಮಂಡ್ಯದ ಗಂಡು ಅಂಬರೀಷ್​ (ಮಳವಳ್ಳಿ ಹುಚ್ಚೇಗೌಡ ಅಮರನಾಥ್​) ಅವರ ಜನ್ಮದಿನವಿಂದು. ತನ್ನಿಮಿತ್ತ ಇಂದು ಅಂಬರೀಷ್ ಅವರ ಹುಟ್ಟೂರಿನಲ್ಲಿ ಪತ್ನಿ ಸುಮಲತಾ ಅಂಬಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ಮಾಡಿ ಗೌರವ ಸಲ್ಲಿಸಿದರು.
ಅಂಬಿಯ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಗೆ ಪುತ್ರ ಅಭಿಷೇಕ್​ ಜತೆ ತೆರಳಿದ ಸುಮಲತಾ ಅಲ್ಲಿ ನೆರೆದ ಅಭಿಮಾನಿಗಳೊಂದಿಗೆ ಸೇರಿ ಅಂಬರೀಷ್​ ಜನ್ಮದಿನವನ್ನು ಆಚರಣೆ ಮಾಡಿದರು.
ಕೇಕ್​ ಕತ್ತರಿಸಿದ ಸುಮಲತಾ, ಅಭಿಷೇಕ್ ಬಳಿಕ ಅದನ್ನು ಅಲ್ಲಿ ನೆರೆದಿದ್ದ ಮಕ್ಕಳಿಗೆ ತಿನಿಸಿದರು. ನೆರೆದಿದ್ದ ಅಭಿಮಾನಿಗಳು ಅಂಬರೀಷ್​ಗೆ ಜೈಕಾರ ಕೂಗಿ ಅಭಿಮಾನ ಮೆರೆದರು. ಸುಮಲತಾ, ಅಭಿಷೇಕ್​ ಜತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಮುಂತಾದವರು ಉಪಸ್ಥಿತರಿದ್ದರು.
ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

Sign in to your account
Please enter an answer in digits:thirteen − eleven =
Remember me
