50ಕ್ಕೂ ಹೆಚ್ಚು ಪ್ರಶಸ್ತಿಗಳು, 10ಕ್ಕೂ ಹೆಚ್ಚು ಬಿರುದುಗಳು, ಡಾಕ್ಟರೇಟ್ ಮತ್ತು ಗೌರವ ಡಾಕ್ಟರೇಟ್ ಪಡೆದರೂ ಯಾವುದೇ ಅಹಂ ಇಲ್ಲದೆ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ ಡಾ.ಜಿ. ಅಂಬರೀಷ್. ಅವರು ಶ್ರೀ ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮತ್ತು ಎಸ್​ಡಿಎಎಸ್ ಕ್ರೆಡೀಟ್ ಕೋ-ಆಪರೇಟಿವ್​ನ ಅಧ್ಯಕ್ಷರಾಗಿದ್ದಾರೆ. ದೇವರ ಸೇವೆ ಹಾಗೂ ಜನಸೇವೆಯನ್ನು ಸಮಾನ ಗುಣಧರ್ಮದೊಂದಿಗೆ ಮಾಡುತ್ತ, ಯುವಪೀಳಿಗೆಗೆ ಮಾದರಿಯಾಗಿರುವ ಅಂಬರೀಷ್ ಈಗ ‘ವಿಜಯವಾಣಿ’ ಪತ್ರಿಕೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಗೌರವಕ್ಕೆ ಭಾಜರಾಗಿದ್ದಾರೆ.
ಪತ್ರಕರ್ತ, ಜ್ಯೋತಿಷಿ, ದೇವಸ್ಥಾನದ ಧರ್ಮದರ್ಶಿ ಹೀಗೆ ಬಹುಮುಖ ಆಯಾಮಗಳಲ್ಲಿ ಸಾಧನೆ ಮಾಡುತ್ತಿರುವ ಡಾ.ಜಿ. ಅಂಬರೀಷ್. ತಮ್ಮ ಸಮಾಜಮುಖಿ ಕೆಲಸ ಕಾರ್ಯಗಳಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಪ್ರಶಸ್ತಿಗಳು, 10ಕ್ಕೂ ಹೆಚ್ಚು ಬಿರುದುಗಳು, ಡಾಕ್ಟರೇಟ್ ಮತ್ತು ಗೌರವ ಡಾಕ್ಟರೇಟ್ ಪಡೆದರೂ ತಮ್ಮ ಸರಳತೆ ಮೂಲಕವೇ ಜನಮನದಲ್ಲಿ ನೆಲೆನಿಂತಿದ್ದಾರೆ. ಸದಾ ಹಸನ್ಮುಖಿಯಾಗಿರುವ ಅಂಬರೀಷ್, ಶ್ರೀ ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಮತ್ತು ಎಸ್​ಡಿಎಎಸ್ ಕ್ರೆಡಿಟ್ ಕೋ-ಆಪರೇಟಿವ್​ನ ಅಧ್ಯಕ್ಷರಾಗಿದ್ದಾರೆ.
ಇವರ ತಂದೆ ಗೋಂದಾಳ್ ಅನಂತಮೂರ್ತಿ, ತಾಯಿ ಗಿರಿಜಮ್ಮ. ಪತ್ನಿ ಸಂಧ್ಯಾ ಗೃಹಿಣಿಯಾಗಿದ್ದಾರೆ. ಪುತ್ರ ವಿಷ್ಣುವರ್ಧನ್ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ವಂಶಿಕಾ ಮತ್ತು ಶ್ರೇಯಾನ್ವಿ ಪುತ್ರಿಯರು. ಅತ್ತೆ ಸರಸ್ವತಿ ಶಂಕರ್ ರಾವ್. ಅಂಬರೀಷ್ ತಂದೆ-ತಾಯಿ ಮಲ್ಲೇಶ್ವರದಲ್ಲಿ ಹುಟ್ಟಿ ಬೆಳೆದಿದ್ದು, ಹೀಗಾಗಿ ಬೆಂಗಳೂರೇ ನಮ್ಮೂರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇವರಿಗೆ ಎಲ್ಲ ರಾಜಕೀಯ ಪಕ್ಷದಲ್ಲಿಯೂ ಸ್ನೇಹಿತರಿದ್ದಾರೆ. ಯಾರ ಮನಸ್ಸನ್ನು ನೋಯಿಸದ ಇವರು ಅಜಾತ ಶತ್ರು ಎಂದರೆ ತಪ್ಪಾಗಲಾರದು.
ಸೇವೆಗೆ ಮಿಡಿಯುವ ಹೃದಯ: ಪ್ರತಿದಿನ ಒಬ್ಬರಿಗಾದರೂ ಸಹಾಯ ಮಾಡಬೇಕು ಎಂಬುದು ಅಂಬರೀಷ್ ಅವರ ಒಲವು- ನಿಲುವು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾದಾಗ ಗದಗ ಜಿಲ್ಲೆ ನರಗುಂದ ತಾಲೂಕಿನ ಕೆಲ ಗ್ರಾಮಗಳಿಗೆ ಬೆಂಗಳೂರಿನಿಂದ ಟ್ರಕ್​ಗಳಲ್ಲಿ ದಿನಸಿ ಪದಾರ್ಥ, ಬಟ್ಟೆ ಸೇರಿ ಅಗತ್ಯ ವಸ್ತುಗಳನ್ನು ಕೊಂಡೊಯ್ದು ಸಂತ್ರಸ್ತರಿಗೆ ಹಂಚಿಕೆ ಮಾಡಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು ಎರಡು ಲಾರಿ ಧವಸ-ಧಾನ್ಯ ಮತ್ತು ದಿನ ಬಳಕೆಯ ವಸ್ತುಗಳನ್ನು ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡಿದ್ದಾರೆ. ‘ಬಿ. ಕ್ಲಿಪ್’ ಸಂಸ್ಥೆಯ ಮೂಲಕ ಬಿಬಿಎಂಪಿ ವಾರ್ಡ್​ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ದೊಡ್ಡ ಮಟ್ಟದಲ್ಲಿ ಅಭಿಯಾನ ಮಾಡಿದ್ದರು. ಅದರ ಪ್ರತಿಫಲವಾಗಿ ಸರ್ಕಾರ ಇಂದು ವಾರ್ಡ್​ಗಳ ಸಂಖ್ಯೆ 225ಕ್ಕೆ ಏರಿಕೆ ಮಾಡಲು ಮುಂದಾಗಿದೆ. ಅಂಬರೀಷ್ ಬಿ.ಕ್ಲಿಪ್ ಕಮಿಟಿಯ ಸದಸ್ಯರಾಗಿದ್ದಾರೆ.

ಡಾ.ಸಿಎನ್​ಎ ಬೆಂಬಲ:ಬೆಂಗಳೂರಿನಾದ್ಯಂತ ‘ಮೊಳೆಮುಕ್ತ ಮರ’ ಎಂಬ ಅಭಿಯಾನ ಮಾಡಿದ ಹೆಗ್ಗಳಿಕೆ ಅಂಬರೀಷ್ ಅವರದು. ಶ್ರೀ ದಾರಿ ಆಂಜನೇಯ ಚಾರಿಟೇಬಲ್ ಟ್ರಸ್ಟ್ ಮೂಲಕ ರಕ್ತದಾನ ಶಿಬಿರ ಮಾಡಿದ್ದಾರೆ. ಸಂತೃಪ್ತಿ ಪ್ರತಿಷ್ಠಾನ ಎನ್​ಜಿಒ ಸಂಸ್ಥೆಯ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಮಾಡಿ ಉಚಿತ ಔಷಧ ಮತ್ತು ಕನ್ನಡಕಗಳನ್ನು ವಿತರಿಸಿದ್ದಾರೆ. ವೃದ್ಧಾಶ್ರಮಕ್ಕೆ ತೆರಳಿ ಸಂಗೀತ ಕಾರ್ಯಕ್ರಮ ಮಾಡಿ ಅವರನ್ನು ರಂಜಿಸಿ, ಬಳಿಕ ಕಿವಿ ಸಮಸ್ಯೆ ಇದ್ದವರಿಗೆ ಶ್ರವಣ ಸಾಧನಗಳನ್ನು ಕೊಟ್ಟಿದ್ದಾರೆ. ಶಾಲಾಮಕ್ಕಳಿಗೆ ಸಮವಸ್ತ್ರ ವಿತರಿಸಿದ್ದಾರೆ. ‘ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಪಾಲಿಕೆ ಮಾಜಿ ಸದಸ್ಯ ಎನ್. ಜಯಪಾಲ್ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇವೆ. ಇಂತಹ ಮಹತ್ಕಾರ್ಯದಲ್ಲಿ ತೊಡಗಿರುವ ನಮಗೆ ಅವರು ಸದಾ ಬೆಂಬಲವಾಗಿದ್ದಾರೆ’ ಎನ್ನುತ್ತಾರೆ ಡಾ. ಅಂಬರೀಷ್.
ಮಾನವೀಯತೆ ಮೆರೆದ ಅಂಬರೀಷ್:ಅಂಬರೀಷ್ ಓರ್ವ ಮಾನವತಾವಾದಿ, ಪರಿಸರಪ್ರೇಮಿ, ವನ್ಯಜೀವಿ ಸಂರಕ್ಷಕರಾಗಿದ್ದು, ಲಾಕ್​ಡೌನ್ ವೇಳೆ ನಗರದಲ್ಲಿ ಆಹಾರವಿಲ್ಲದೆ ಒದ್ದಾಡುತ್ತಿದ್ದ ಪ್ರಾಣಿ- ಪಕ್ಷಿಗಳಿಗೆ ಆಹಾರ ಒದಗಿಸಿ ತಮ್ಮನಿಸ್ವಾರ್ಥ ಸೇವೆಯಿಂದ ಮೆಚ್ಚುಗೆ ಗಳಿಸಿದ್ದಾರೆ. ಕರೊನಾದಿಂದಾಗಿ ಎಲ್ಲವೂ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರಿಂದ ತಪಾಸಣೆಗೊಳಗಾಗಲು ಸಾಧ್ಯವಾಗದೇ ಒದ್ದಾಡುತ್ತಿದ್ದ ಬಡ ಕುಟುಂಬಗಳಿಗೆ, ಅನಾಥ ಮಕ್ಕಳಿಗೆ, ಕಟ್ಟಡ ಕಾರ್ವಿುಕರಿಗೆ, ನಿರ್ಗತಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಿ, ಜನಮಾನಸದಲ್ಲಿ ಸದಾ ಅಚ್ಚಳಿಯದೇ ಉಳಿದಿದ್ದಾರೆ. ಕರೊನಾ ವಾರಿಯರ್ಸ್​ಗಳಿಗೆ ಡಾ. ಅಂಬರೀಷ್ ಅವರು ವಾಹನ ತಪಾಸಣೆ, ಊಟದ ಪ್ಯಾಕಿಂಗ್, ವಲಸೆ ಕಾರ್ವಿುಕರಿಗೆ ರೈಲ್ವೆ ನಿಲ್ದಾಣದವರೆಗೆ ಹೋಗಿ ಊಟದ ಪ್ಯಾಕೆಟ್ ನೀಡಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಊಟಕ್ಕಾಗಿ ಪರದಾಡುತ್ತಿದ್ದ ಮಂಗಳಮುಖಿಯರನ್ನು ಗುರುತಿಸಿ ಅವರಿಗೂ ಪ್ರತಿದಿನ ಊಟ ವಿತರಿಸಿದ್ದರು. ಅಭಿವೃದ್ಧಿಯ ಹರಿಕಾರ, ಜನಸೇವಕ, ಜನಾನುರಾಗಿ ಹಾಗೂ ಸ್ನೇಹಜೀವಿಯಾದ ಇವರು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಹಸಿದವರಿಗೆ ಅನ್ನ ನೀಡುವುದೇ ಮನುಷ್ಯ ಧರ್ಮ. ಅದೇ ನಮ್ಮನ್ನು ಸದಾ ಕಾಪಾಡುತ್ತದೆ’ ಎಂಬುದನ್ನು ಬಲವಾಗಿ ಅಂಬರೀಷ್ ನಂಬಿದ್ದಾರೆ
ಹಲವು ಹೊಣೆಗಾರಿಕೆಗಳು:ಸುಮಾರು 150 ವರ್ಷಗಳ ಇತಿಹಾಸವಿರುವ ಯಶವಂತಪುರದ ಸಂವಿಧಾನ ವೃತ್ತದ ಬಳಿಯ ಶ್ರೀ ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದೇವಾಲಯದಲ್ಲಿರುವ ಉದ್ಭವ ಮೂರ್ತಿಯನ್ನು ಇವರ ಪೂರ್ವಿಕರು ಮರು ಪ್ರತಿಷ್ಠಾಪನೆ ಮಾಡಿದ್ದಾರೆ. ಅಂಬರೀಷ್ ಯಶವಂತಪುರದ ಎಸ್​ಡಿಎಎಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಬೆಂಗಳೂರು ಸಂತೃಪ್ತಿ ಪ್ರತಿಷ್ಠಾನ ಹಂಸ ಜ್ಯೋತಿಷ ವಿದ್ಯಾ ಕೇಂದ್ರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಲಯನ್ಸ್ ಕ್ಲಬ್​ನ ಉಪಾಧ್ಯಕ್ಷರಾಗಿದ್ದು, ‘ಆಪ್ತ ಬಂಧು’ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ನಾಡಿ ಜ್ಯೋತಿಷ ಪರಿಷತ್, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ, ಬಿ. ಕ್ಲಿಪ್ (ಸಿವಿಕ್ ಲೀಡರ್), ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಕಾರ್ಯದರ್ಶಿ, ಟ್ರಸ್ಟಿಗಳಾಗಿ ಹಾಗೂ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.

ಡಾ.ಜಿ. ಅಂಬರೀಷ್ ಬಿಡುವಿನ ಸಮಯದಲ್ಲಿ ತಮ್ಮನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದೇವನಹಳ್ಳಿ ಸಮೀಪದದಲ್ಲಿರುವ ತಮ್ಮ ಜಮೀನಿನಲ್ಲಿ ದ್ರಾಕ್ಷಿ ಮತ್ತು ರಾಗಿಯನ್ನು ಬೆಳೆಯುತ್ತಾರೆ. ಅಲ್ಲಿನ ಜನರಿಗೆ ಅಂಬರೀಷ್ ಎಂದರೆ ಎಲ್ಲಿಲ್ಲದ ಪ್ರೀತಿ. ಅಲ್ಲಿಯೂ ಹಲವರಿಗೆ ಸಹಾಯ ಮಾಡಿದ್ದಾರೆ.
ಹನುಮ ಸೇನೆ:ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಹನುಮ ಸೇನೆಯಲ್ಲಿ ಲಕ್ಷಾಂತರ ಯುವಕರಿದ್ದಾರೆ. ಯುವ ಪೀಳಿಗೆಗೆ ಈ ಹನುಮ ಸೇನೆ ಸ್ಪೂರ್ತಿಯಾಗಿದೆ. ಶಿವರುದ್ರಪ್ಪ, ಹನುಮಂತರಾಯ, ಕಿರಣ್​ಕುಮಾರ್, ಎಂ.ಉಮೇಶ್, ಎನ್.ಯೋಗೀಶ್, ಅನಿಲ್, ಜೆ. ದಿನೇಶ್ ಕುಮಾರ್, ಮನೋಜ್, ಬೆಳ್ಳಂದೂರು ಮುರಳಿ, ಎಂ.ಶಶಿದರ್ ಸಿಂಗ್ ಹನುಮ ಸೇನೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಪ್ರಶಸ್ತಿಗಳು:ಭಾರತ ಜ್ಯೋತಿ-ರಾಷ್ಟ್ರಪ್ರಶಸ್ತಿ, ಲೋಕನಾಯಕ ಜಯಪ್ರಕಾಶ್- ರಾಷ್ಟ್ರೀಯ ಪ್ರಶಸ್ತಿ, ಭಾರತ ವಿಕಾಸ ರತ್ನ- ರಾಜ್ಯ ಪ್ರಶಸ್ತಿ,ಕರುನಾಡ ಕಣ್ಮಣಿ- ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಹಕಾರ ರತ್ನ- ರಾಜ್ಯ ಪ್ರಶಸ್ತಿ, ಸಮಾಜ ಸೇವಾ ರತ್ನ, ಕರುನಾಡ ತಿಲಕ, ಜ್ಞಾನ ಸೂರ್ಯ, ಜ್ಯೋತಿಷ ಋಷಿ, ನಕ್ಷತ್ರ ನಾಡಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಸ್ಪೂರ್ತಿ ಸೇವಾರತ್ನ, ಕಲಾಪೋಷಕ ರತ್ನ, ಡಾ.ವಿಷ್ಣು ಕಲಾಜೀವಿ, ಕರ್ನಾಟಕ ಚೇತನ, ಸಮಾಜಸೇವಾ, ಸುವರ್ಣ ಕರ್ನಾಟಕ ಚೈತನ್ಯ ಹೊಂಬೆಳಕು, ಮಹಾತ್ಮ ಗಾಂಧಿ ಸೃಜನಶೀಲ, ಮಾನಸ ಸೇವಾ, ಜವಹರಲಾಲ್ ನೆಹರು ಸದ್ಭಾವನಾ, ಮಧುರ ಸಂಗಮ, ಬೆಂಗಳೂರು ತಾರೆ, ಅಜಂತಾ ಕರುನಾಡಸಿರಿ, ಕರ್ನಾಟಕ ತಿಲಕ, ಇಂದಿರಾ ಪ್ರಿಯದರ್ಶಿನಿ, ಸರ್ ಎಂ. ವಿಶ್ವೇಶ್ವರಯ್ಯ, ಶಂಕರ್​ನಾಗ್, ರಮನಾಥ್ ಗೊಯಂಕಾ ಪೀಸ್ ಸೇರಿ ಹಲವು ಪ್ರಶಸ್ತಿಗಳಿಗೆ ಡಾ. ಜಿ. ಅಂಬರೀಷ್ ಪಾತ್ರರಾಗಿದ್ದಾರೆ.
ತಂದೆ-ತಾಯಿ, ಹಿರಿಯರ ಆಶೀರ್ವಾದ:ಹಕ್ಕಿ ಕೂರದ ಮರವಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ- ಎನ್ನುವಂತೆ ಡಾ. ಅಂಬರೀಷ್ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಉನ್ನತ ಶಿಕ್ಷಣದ ನಂತರ ಯುಎಸ್​ಎ ಯೂನಿವರ್ಸಿಟಿಯಲ್ಲಿ ಜ್ಯೋತಿಷದಲ್ಲಿ ಪಿಎಚ್.ಡಿ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ‘ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್’ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಭಾರತ ವಿಕಾಸರತ್ನ ಪ್ರಶಸ್ತಿ, ಭಾರತ ಜ್ಯೋತಿ ಪ್ರಶಸ್ತಿ, ರಾಷ್ಟ್ರೀಯ ವಿಭೂಷಣಾ ಪ್ರಶಸ್ತಿ, ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಹೀಗೆ ನೂರಾರು ಗೌರವಗಳಿಗೆ ಭಾಜನರಾಗಿದ್ದಾರೆ. ಕರುನಾಡ ರತ್ನ ಜ್ಯೋತಿಷಿ ಋಷಿ, ಕರುನಾಡ ತಿಲಕ ಹೀಗೆ 10ಕ್ಕೂ ಹೆಚ್ಚು ಬಿರುದುಗಳು, ನೂರಾರು ಸನ್ಮಾನಗಳನ್ನು ಹತ್ತು-ಹಲವು ಸಂಘ ಸಂಸ್ಥೆಗಳಿಂದ ಪಡೆದಿದ್ದಾರೆ.
ಜನರ ಸೇವೆ ಮಾಡಬೇಕೆಂಬ ಬಯಕೆ:ಇಷ್ಟು ದಿನ ಸಮಾಜಸೇವೆ ಮೂಲಕ ಮಲ್ಲೇಶ್ವರದಲ್ಲಿ ಜನಪ್ರಿಯತೆ ಗಳಿಸಿರುವ ಅಂಬರೀಷ್ ಅವರಿಗೆ ಸ್ನೇಹಿತರು-ಬಂಧು ಬಳಗ, ರಾಜಕೀಯಕ್ಕೆ ಬಂದು ಜನಸೇವೆ ಮಾಡುವಂತೆ ಸಲಹೆ ನೀಡಿದ್ದಾರೆ. ರಾಜಕೀಯಕ್ಕೆ ಬಂದರೆ ಹೆಚ್ಚಿನ ಜನರ ಸೇವೆ ಮಾಡಬಹುದು ಎಂಬ ಅವರ ಸಲಹೆಗಳನ್ನು ಸ್ವಾಗತಿಸಿರುವ ಅಂಬರೀಷ್, ಸದ್ಯ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಬಿಬಿಎಂಪಿ ಚುನಾವಣೆಗೆ ಟಿಕೆಟ್ ನೀಡುವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆಯನ್ನು ಹೊಂದಿದ್ದಾರೆ.

ಸಮಾಜಸೇವೆಗೆ ಸುರೇಶ್ ಗೌಡ್ರು ಸ್ಪೂರ್ತಿ
ಅಂಬರೀಷ್ ಅವರ ಈ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ಡಿ. ಸುರೇಶ್ ಗೌಡರು ಸ್ಪೂರ್ತಿಯಾಗಿದ್ದಾರೆ. ಜನತೆಯ ಕಷ್ಟ- ನಷ್ಟಗಳಿಗೆ ಮಿಡಿಯುವ ಅಂಬರೀಷ್ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಸೂಕ್ತ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ತಾವೇ ಖುದ್ದು, ಮನೆಮೆನೆಗೆ ಭೇಟಿ ನೀಡಿ ಕಷ್ಟಗಳನ್ನು ಆಲಿಸುತ್ತಾರೆ. ಸೆಕ್ಯೂರಿಟಿ ಗಾರ್ಡ್​ಗಳ ಕಷ್ಟಕ್ಕೂ ಸ್ಪಂದಿಸಿರುವ ಅಂಬರೀಷ್ ಇದುವರೆಗೆ 450 ಕುಟುಂಬಕ್ಕೆ ತಲಾ 25 ಕೆ.ಜಿ. ಅಕ್ಕಿ ವಿತರಿಸಿ ಮಾದರಿಯಾಗಿದ್ದಾರೆ. ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಟಿ.ಜಿ. ಸಂಗ್ರಾಮ್ ಸಿಂಗ್ ಅವರೊಂದಿಗೆ ಸೆಕ್ಯೂರಿಟಿ ಗಾರ್ಡ್​ಗಳಿಗೆ ಕಿಟ್ ವಿತರಿಸಿದ್ದಾರೆ.
ಜನರ ಮೆಚ್ಚುಗೆಗೆ ಪಾತ್ರ
ಅಂಬರೀಷ್ ಅವರು ದೀನ- ದಲಿತರ ಹೃದಯದ ಒಡನಾಡಿಯಾಗಿ ಸಮಾಜದ ವಂಚಿತ ವರ್ಗದ ಧ್ವನಿಯಾಗಿದ್ದಾರೆ. ಜನಸಾಮಾನ್ಯರ ಬಗ್ಗೆ ಸದಾ ಕಳಕಳಿ, ವಿರೋಧಿಗಳೂ ಮೆಚ್ಚುವ ವಿವಾದಾತೀತ ವ್ಯಕ್ತಿತ್ವ. ಶಿಸ್ತಿನ ಸಿಪಾಯಿ, ಹನುಮನ ಪರಮ ಭಕ್ತರೂ ಆದ ಅವರು, ಹನುಮ ಸೇನೆಯನ್ನು ಕಟ್ಟಿದ್ದಾರೆ. ಅದರ ಮೂಲಕ ಪರಿಸರದ ಬಗ್ಗೆ ಪ್ರಜ್ಞೆ ಮೂಡಿಸುವುದು, ಶಿಕ್ಷಣ, ಆರೋಗ್ಯ ನೈರ್ಮಲ್ಯ, ಅಬಲೆಯರು, ವಿಧವೆಯರು, ಅಶಕ್ತರು ಹೀಗೆ ಶೋಶಿತ ಪೀಡಿತ ವರ್ಗಕ್ಕೆ ನೆರವಾಗಿದ್ದಾರೆ. ಪರಿಶಿಷ್ಟ ಹಿಂದುಳಿದ ಅಲ್ಪ ಸಂಖ್ಯಾತರಿಗೆ ಸಾಮಾಜಿಕ ನ್ಯಾಯ, ಶಿಕ್ಷಣ ವಂಚಿತ ಮಕ್ಕಳಿಗೆ ಸಹಾಯ ಹಸ್ತ ನೀಡಿದ್ದಾರೆ.
ಸಂಪರ್ಕ-ಸೇತುವೆ
ಅಂಬರೀಷ್ ಅವರು ಜನ ಸಮುದಾಯ ಮತ್ತು ಸರ್ಕಾರದೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ದಾರಿ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಬಡವರಿಗೆ ರೇಷನ್ ಕಾರ್ಡ್, ವಿಧವೆಯವರಿಗೆ ಮಾಸಿಕ ಪಿಂಚಣಿ, ಹಿರಿಯ ನಾಗರಿಕರ ಕಾರ್ಡ್​ಗಳನ್ನು ಪಡೆಯಲು ನೆರವಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಟ್ರಸ್ಟ್ ವತಿಯಿಂದ ಸಹಾಯ ಮಾಡುತ್ತಿದ್ದಾರೆ. ಸ್ವ-ಉದ್ಯೋಗ ಮಾಡಲು ಬಯಸಿದವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕ್ರೀಡಾ ಕ್ಷೇತ್ರಗಳಾದ ಕ್ರಿಕೆಟ್, ಕಬಡ್ಡಿ, ಟೆನಿಸ್, ವಾಲಿಬಾಲ್ ಸೇರಿ ಇನ್ನಿತರ ಕ್ರೀಡೆಗಳಲ್ಲಿ ಗುರುತಿಸಿಕೊಂಡ ಯುವ ಪೀಳಿಗೆಗೆ ಉತ್ತೇಜನ ನೀಡಿ ಆರ್ಥಿಕವಾಗಿಯೂ ಸಹಕಾರಿಯಾಗಿದ್ದಾರೆ.
ಸಹಕಾರ ಕ್ಷೇತ್ರಕ್ಕೂ ಕೊಡುಗೆ
ಬಡವರಿಗೆ ಹಣಕಾಸಿನ ನೆರವು ನೀಡಲು ಶ್ರೀ ದಾರಿ ಆಂಜನೇಯ ಸ್ವಾಮಿ ಕ್ರೆಡೀಟ್ ಕೋ-ಆಪರೇಟಿವ್ ಅನ್ನು 8 ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ ಡಾ.ಅಂಬರೀಷ್. ಇದರ ಮೂಲಕ ಬೀದಿ ವ್ಯಾಪಾರಿಗಳಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ಕಡಿಮೆ ಪ್ರಮಾಣದ ಬಡ್ಡಿ ದರದಲ್ಲಿ ಅವರಿಗೆ ಸಾಲ ಸೌಲಭ್ಯವನ್ನು ಮಾಡಿಕೊಟ್ಟಿದ್ದಾರೆ. ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಕರೊನಾ ವೇಳೆ ಮಿಡಿದ ಹೃದಯ
ಡಾ. ಅಂಬರೀಷ್ ಕರೊನಾ ಭೀತಿ ನಡುವೆಯೂ ಅಶಕ್ತರಿಗೆ ಆಹಾರ ಹಾಗೂ ಹಲವು ಮೂಲಸೌಲಭ್ಯ ಕಲ್ಪಿಸುವ ಮೂಲಕ ದಾರಿದೀಪವಾಗಿದ್ದಾರೆ. ಇವರು ತಮ್ಮ ವಿಭಿನ್ನ ಕಾರ್ಯವೈಖರಿಯಿಂದಲೇ ಸಾರ್ವಜನಿಕರ ಮನಗೆದ್ದಿದ್ದಾರೆ. ಕೈಗೊಂಡ ಪ್ರತಿಯೊಂದು ಅಭಿವೃದ್ಧಿ ಯೋಜನೆಗಳು ಮತ್ತು ಸಮಾಜಮುಖಿ ಕಾರ್ಯಗಳು ಸಾವಿರಾರು ಜನರಿಗೆ ನೆರವಾಗಿದೆ. ಜನತೆಯ ಕಷ್ಟ- ನಷ್ಟಗಳಿಗೆ ಮಿಡಿಯುವ ಅಂಬರೀಷ್, ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಸರ್ವರಿಗೂ ಮೂಲಸೌಕರ್ಯ ದೊರೆಯಬೇಕೆಂಬ ಉದ್ದೇಶದೊಂದಿಗೆ ದಣಿವರಿಯದ ನಾಯಕ ಎಂಬುದು ಜನರ ಮೆಚ್ಚುಗೆಯ ಮಾತುಗಳು. ಕರೊನಾ ವೇಳೆ ಪ್ರತಿದಿನ 800ಕ್ಕೂ ಅಧಿಕ ನಿರ್ಗತಿಕರು, ಅನಾಥರು, ಬಡವರು, ಕಟ್ಟಡ ಕಾರ್ವಿುಕರಿಗೆ ಊಟದ ಪ್ಯಾಕೇಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗಲೂ ಈ ಸೇವೆಯನ್ನು ಮುಂದುವರಿಸಿದ್ದು, ಅರ್ಚಕರು ಹಾಗೂ ಅಡುಗೆಯವರಿಗೆ ದಿನಸಿ ಕಿಟ್ ವಿತರಿಸಿ ಅವರ ಮೆಚ್ಚುಗೆ ಗಳಿಸಿದ್ದಾರೆ.
ಅಂಬರೀಷ್ ಅವರು ಕಳೆದ 15 ವರ್ಷಗಳಿಂದ ನನಗೆ ಪರಿಚಿತರು. ದಾರಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿಯಾಗಿ ಧಾರ್ವಿುಕ ಕಾರ್ಯವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರ ಭವಿಷ್ಯ ಮತ್ತಷ್ಟು ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ.
| ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾಜಿ ಡಿಸಿಎಂ
ಅಂಬರೀಷ್ ನನಗೆ 2007ರಿಂದ ಪರಿಚಯ. ನಾನು ಅವರನ್ನು ಪ್ರೀತಿಯಿಂದ ‘ಗುರುಗಳೇ..’ ಎಂದು ಕರೆಯುತ್ತೇನೆ. ನಾನು ಕಷ್ಟದಲ್ಲಿದ್ದಾಗ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಈಗಲೂ ನಾನು ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಸ್ವೀಕರಿಸಿ ಮಾರ್ಗದರ್ಶನ ಮಾಡುತ್ತಾರೆ. ಅಂಬರೀಷ್ ಅವರು ನನ್ನ ಶಕ್ತಿಯಾಗಿದ್ದಾರೆ. ಕಷ್ಟದಲ್ಲಿ ಇರುವವರಿಗೆ ಜಾತಿ-ಧರ್ಮ ನೋಡದೆ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡುತ್ತಾರೆ.
| ಎನ್. ಮಧುಸೂದನ್ ಐಎಎಸ್ ಅಧಿಕಾರಿ
ಅಂಬರೀಷ್ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ. ಸಮಸ್ಯೆಯಲ್ಲಿ ಇರುವವರನ್ನು ಗುರುತಿಸಿ ಸಹಾಯ ಮಾಡುತ್ತಾರೆ. ಯಾವುದೇ ಜಾತಿ, ಧರ್ಮದ ಭೇದ-ಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಇಂತಹವರು ರಾಜಕೀಯಕ್ಕೆ ಬಂದು ಜನರ ಸೇವೆಯನ್ನು ಮಾಡಬೇಕು.
| ಅರವಿಂದ್ ಅಂಬರೀಷ್ ಸ್ನೇಹಿತ
ಅಂಬರೀಷ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಕರೊನಾ ಸಂದರ್ಭದಲ್ಲಿ ಅವರು ತಮ್ಮ ಕೈಲಾದ ಸೇವೆಯನ್ನು ಮಾಡಿದ್ದಾರೆ. ಜನರ ಸೇವೆ ಮಾಡುವ ಮನೋಭಾವನೆವುಳ್ಳವರಾಗಿದ್ದು, ಅವರಿಗೆ ರಾಜಕೀಯ ಸ್ಥಾನಮಾನ ಸಿಕ್ಕಿ ಇನ್ನೂ ಹೆಚ್ಚಿನ ಜನರ ಸೇವೆ ಮಾಡುವಂತಾಗಲಿ.
| ಡಿ. ಸುರೇಶ್ ಗೌಡ್ರು ಅಂಬರೀಷ್ ಆತ್ಮೀಯರು
ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
