ಉತ್ತರಕನ್ನಡ:ನಿನ್ನೆ ಶಿರೂರು ಟೋಲ್​ಗೇಟ್​ನಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಸಾವಿಗೀಡಾದ ನಾಲ್ವರ ಶವಸಂಸ್ಕಾರವನ್ನು ಇಂದು ಗ್ರಾಮಸ್ಥರೇ ಸಾಮೂಹಿಕವಾಗಿ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಹಾಡುಗೇರಿ ಗ್ರಾಮದಲ್ಲಿ ಈ ಅಂತ್ಯಸಂಸ್ಕಾರ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಈ ಭಯಂಕರ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್ ತೀವ್ರ ಅಸ್ವಸ್ಥರನ್ನು ಕರೆದುಕೊಂಡು ಹೊನ್ನಾವರದಿಂದ ಕುಂದಾಪುರಕ್ಕೆ ಹೊರಟಿತ್ತು. ಆದರೆ ಅತಿಯಾದ ವೇಗದಿಂದ ಬಂದ ಆ್ಯಂಬುಲೆನ್ಸ್ ಟೋಲ್ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟೋಲ್ ಕಂಬಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ತೀವ್ರ ಗಾಯಗೊಂಡಿದ್ದ ಇನ್ನೊಬ್ಬರು ಬಳಿಕ ಕೊನೆಯುಸಿರೆಳೆದಿದ್ದು, ಒಟ್ಟು ನಾಲ್ವರು ಸಾವಿಗೀಡಾಗಿದ್ದರು.
ಆ್ಯಂಬುಲೆನ್ಸ್​ನಲ್ಲಿದ್ದ ರೋಗಿ ಲೋಕೇಶ್ ನಾಯ್ಕ, ಅವರ ಪತ್ನಿ ಜ್ಯೋತಿ ನಾಯ್ಕ ಹಾಗೂ ಮಂಜುನಾಥ್ ನಾಯ್ಕ, ಗಜಾನನ ನಾಯ್ಕ ಸಾವಿಗೀಡಾದವರು. ಈ ನಾಲ್ವರೂ ಹಾಡುಗೇರಿ ಗ್ರಾಮದವರು. ಇಂದು ಈ ನಾಲ್ವರ ಅಂತಿಮ ಸಂಸ್ಕಾರವನ್ನು ಗ್ರಾಮಸ್ಥರು ಸಾಮೂಹಿಕವಾಗಿ ನಡೆಸಿದರು.
ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..ವಿವರಗಳಿಗೆhttps://t.co/YaFZZchf1Jನೋಡಿpic.twitter.com/BSfvSzHsKp— Vijayavani (@VVani4U)July 20, 2022
ಜೀವ ಉಳಿಸಲು ಹೋಗಿ ಪ್ರಾಣ ಕಳ್ಕೊಂಡ್ರು!: ಟೋಲ್​ ಗೇಟ್​ನಲ್ಲಿ ಆ್ಯಂಬುಲೆನ್ಸ್ ಪಲ್ಟಿ, ಮೂವರು ಸ್ಥಳದಲ್ಲೇ ಸಾವು..ವಿವರಗಳಿಗೆhttps://t.co/YaFZZchf1Jನೋಡಿpic.twitter.com/BSfvSzHsKp
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + seven =
Remember me
