ಬೆಳಗಾವಿ:ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತಾವೇ ಸ್ವತಃ ಆಂಬ್ಯುಲೆನ್ಸ್ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮದೇ ಒಡೆತನದ ಪ್ರತಿಷ್ಠಾನದಿಂದ ಮೂರು ಆಂಬ್ಯುಲೆನ್ಸ್‌ಗಳನ್ನು ಕೊಡುಗೆ ನೀಡಿದರು. ಇದಕ್ಕಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಂಬ್ಯುಲೆನ್ಸ್‌ಗಳಿಗೆ ಪೂಜೆ ನೆರವೇರಿಸಲಾಯಿತು.
ಸಮಾರಂಭ ಮುಗಿದ ಬಳಿಕ ಶಾಸಕಿ ಡ್ರೈವರ್ ಸೀಟ್ ಏರುತ್ತಿದ್ದಂತೆಯೇ ಸುತ್ತ ನೆರೆದಿದ್ದವರು ಅಚ್ಚರಿಗೊಂಡು ಚಪ್ಪಾಳೆ ತಟ್ಟಿದರು. ಅಷ್ಟೇ ಅಲ್ಲ, ಕೇವಲ ಸಮಾರಂಭ ನಡೆದ ಸ್ಥಳದಲ್ಲಿ ಮಾತ್ರವಲ್ಲದೆ ಮುಖ್ಯರಸ್ತೆಯಲ್ಲಿಯೂ ಸ್ವತಃ ಆಂಬ್ಯುಲೆನ್ಸ್ ಚಾಲನೆ ಮಾಡಿ ಶಾಸಕಿ ನಿಂಬಾಳ್ಕರ್ ಆಶ್ಚರ್ಯ ಮೂಡಿಸಿದರು. ಇತ್ತೀಚೆಗೆ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಸ್ವತಃ ಆಂಬ್ಯುಲೆನ್ಸ್ ಚಲಾಯಿಸಿ ಸೈ ಎನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಳಗಾವಿ: ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತಾವೇ ಸ್ವತಃ ಆಂಬ್ಯುಲೆನ್ಸ್ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.#Ambulance#Anjalinimbalkar#CongressMLA#Belagavipic.twitter.com/37ilWqpBqC
— Vijayavani (@VVani4U)June 11, 2021

ಟಿಎಂಸಿ ತೆಕ್ಕೆಗೆ ಮರಳಿದ ಮುಕುಲ್ ರಾಯ್; ಪಶ್ಚಿಮ ಬಂಗಾಳದಲ್ಲಿ ವಿಭಜನೆಯಾಗುವುದೇ ಬಿಜೆಪಿ?

Sign in to your account
Please enter an answer in digits:eleven + three =
Remember me
