ಸತೀಶ್ ಕೆ.ಬಳ್ಳಾರಿಬೆಂಗಳೂರು: ರಾಜಧಾನಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಆಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಹೇಳುತ್ತಿವೆ. ಆದರೆ, 250ಕ್ಕೂ ಹೆಚ್ಚು ಆಂಬುಲೆನ್ಸ್​ಗಳು ನಿಂತಲ್ಲೇ ನಿಂತುಕೊಂಡಿರುವ ಕಹಿಸತ್ಯ ವಿಜಯವಾಣಿ ರಿಯಾಲಿಟಿ ಚೆಕ್​ನಲ್ಲಿ ಬಹಿರಂಗವಾಗಿದೆ.
ಆಂಬುಲೆನ್ಸ್ ಕೊರತೆ ಕಾರಣ ಹೈಕೋರ್ಟ್ ಮತ್ತು ಸರ್ಕಾರ ಛೀಮಾರಿ ಹಾಕಿದ್ದಕ್ಕೆ ಟೆಂಪೋ ಟ್ರಾವೆಲರ್​ಗಳನ್ನು ಆಂಬುಲೆನ್ಸ್ ಗಳಾಗಿ ಬಳಕೆ ಮಾಡಲು ಬಿಬಿಎಂಪಿ ಮುಂದಾಗಿದೆ. ಕೋವಿಡ್ ಸೋಂಕಿತರನ್ನು ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು ಅರೋಗ್ಯ ಇಲಾಖೆಯ 100 ಮತ್ತು ಬಿಬಿಎಂಪಿಯಿಂದ ಪ್ರತಿ ವಾರ್ಡ್​ಗೆ 2ರಂತೆ 396 ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ 140 ಆಂಬುಲೆನ್ಸ್​ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಸಲಿಯತ್ತು ಏನೆಂದರೆ 250ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ರಸ್ತೆಗೇ ಇಳಿದಿಲ್ಲ.
ನಾವು ಮೈಸೂರಿಂದ ಟೆಂಪೋ ಟ್ರಾವೆಲರ್ ತಂದು 6 ದಿನಗಳಾಗಿವೆ. ಕೆಲವು ಸೀಟ್​ಗಳನ್ನು ತೆಗೆದು, ಬೆಡ್ ಹಾಗೂ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಸೇರಿ ಕೆಲವು ಬದಲಾವಣೆ ಮಾಡಲಾಗಿದೆ. ಆದರೆ, ಈವರೆಗೂ ಕೆಲಸಕ್ಕೆ ಹೋಗಲು ಆರ್ಡರ್ ಕೊಟ್ಟಿಲ್ಲ.| ಶಿವಶಂಕರ್ಪರಿವರ್ತಿತ ಆಂಬುಲೆನ್ಸ್ ಚಾಲಕ
ನಗರದಲ್ಲಿ ಪ್ರತಿ ವಾರ್ಡ್​ಗೆ 2 ಆಂಬುಲೆನ್ಸ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಕೊರತೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಟೆಂಪೋ ಟ್ರಾವೆಲರ್​ಗಳು ಕೂಡ ರೋಗಿಗಳನ್ನು ಕರೆದೊಯ್ಯುತ್ತಿವೆ.| ಎನ್. ಮಂಜುನಾಥಪ್ರಸಾದ್ಬಿಬಿಎಂಪಿ ಆಯುಕ್ತ
ಖಾಸಗಿ ವಾಹನದಲ್ಲಿ ಬರುವ ರೋಗಿಗಳು:ಆಂಬುಲೆನ್ಸ್ ಸಕಾಲದಲ್ಲಿ ಬರುತ್ತಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಾಗುತ್ತಿಲ್ಲ ಎಂಬ ಹಲವು ದಿನಗಳಿಂದ ಕೇಳಿಬರುತ್ತಿರುವ ದೂರುಗಳಿಗೆ ಈಗಲೂ ಪರಿಹಾರ ಸಿಕ್ಕಿಲ್ಲ. ಆಂಬುಲೆನ್ಸ್ ಸಿಗದೆ ತುಂಬು ಗರ್ಭಿಣಿಯೊಬ್ಬರು ಜು.21ರಂದು ಕೆ.ಸಿ. ಜನರಲ್ ಆಸ್ಪತ್ರೆಗೆ ಆಸ್ಪತ್ರೆಗೆ ಆಟೋದಲ್ಲಿ ಬಂದಿದ್ದರು. ಆಟೋದಲ್ಲಿ ಕುಳಿತುಕೊಳ್ಳಲು ಆಗದ ಸ್ಥಿತಿಯಲ್ಲಿ ಹೆರಿಗೆಯಾಗಿದ್ದು, ಮಗು ಬದುಕುಳಿಯಲಿಲ್ಲ. ಅವರಿಗೆ ಆಂಬುಲೆನ್ಸ್ ಸಿಕ್ಕಿದ್ದರೆ ಅನಾಹುತ ಸಂಭವಿಸುತ್ತಿರಲಿಲ್ಲ.
ಇದನ್ನೂ ಓದಿ:ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?
ಆರ್ಡರ್ ಕೊಡದ ಬಿಬಿಎಂಪಿ:ಖಾಸಗಿ ಆಂಬುಲೆನ್ಸ್​ಗಳನ್ನು ಮತ್ತು ಪರಿವರ್ತಿತ ಟಿಟಿಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.ಬೆಂಗಳೂರು, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಿಂದಲೂ ಕೆಲವು ಟಿಟಿಗಳನ್ನು ತಂದು ಆಂಬುಲೆನ್ಸ್ ರೂಪಕ್ಕೆ ಪರಿವರ್ತನೆ ಮಾಡಲಾಗಿದ್ದರೂ 1 ವಾರದಿಂದ ಕೆಲಸಕ್ಕೆ ನಿಯೋಜನೆ ಮಾಡಿಲ್ಲ. ನಗರದ ಹೊರವರ್ತಲ ರಸ್ತೆಯ ವೀರಭದ್ರ ನಗರದಲ್ಲಿ 100ಕ್ಕೂ ಹೆಚ್ಚು ಆಂಬುಲೆನ್ಸ್​ಗಳು ಕೆಲಸವಿಲ್ಲದೆ ನಿಂತಿವೆ.ಚಾಮರಾಜಪೇಟೆಯ ಶಾಸಕರ ಭವನದೆದುರು ಕೆಲ ದಿನಗಳಿಂದ ಒಂದೆರಡು ಆಂಬುಲೆನ್ಸ್​ಗಳು ಇಡೀ ದಿನ ಠಿಕಾಣಿ ಹೂಡಿರುತ್ತವೆ. ರಸ್ತೆಗಿಳಿಯುತ್ತಿಲ್ಲ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಟೆಂಪೋ ಟ್ರಾವೆಲರ್​ಗಳನ್ನು (ಟಿಟಿ) ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.ಇಂಥ 200 ಟಿಟಿಗಳಲ್ಲಿ ರೋಗಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಬೆಡ್, ಆಂಬುಲೆನ್ಸ್ ಫಲಕ, ಸೈರನ್, ಆಮ್ಲಜನಕ ಸಿಲಿಂಡರ್, ಸ್ವಿಚ್ ಬೋರ್ಡ್, ವಿಶೇಷ ಡ್ರೈವರ್ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಯಾವೊಂದು ಆಂಬುಲೆನ್ಸ್ ರಸ್ತೆಗಿಳಿದು ಕಾರ್ಯನಿರ್ವಹಿಸುತ್ತಿರುವುದು ಕಾಣಿಸುತ್ತಿಲ್ಲ.
ಇದನ್ನೂ ಓದಿ:ಐಪಿಎಲ್ ಸೆಪ್ಟೆಂಬರ್ 19ರಿಂದು ಶುರು- ನವೆಂಬರ್​ನಲ್ಲಿ ಫೈನಲ್​?
ಕರೆ ಮಾಡಿದರೂ ಬರುತ್ತಿಲ್ಲ:ಕರೊನಾ ಸೋಂಕಿತರು, ಇತರೆ ಕಾಯಿಲೆಯಿಂದ ಬಳಲುವವರು, ಅಪಘಾತಕ್ಕೆ ಒಳಗಾದವರು ಹಾಗೂ ಹೆರಿಗೆಗೆ ಹೋಗುವವರು ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್​ಗೆ ಕರೆ ಮಾಡಿದರೆ ಬರಲು ಕನಿಷ್ಠ 30 ನಿಮಿಷದಿಂದ 4 ಗಂಟೆ ಸಮಯ ತೆಗೆದುಕೊಳ್ಳುತ್ತಿವೆ. ಸೋಂಕಿತ ವ್ಯಕ್ತಿ ಕರೆ ಮಾಡಿದರೆ ಯಾವ ಆಸ್ಪತ್ರೆಗೆ ಹೋಗಬೇಕು, ಕೋವಿಡ್ ಪಾಸಿಟಿವ್ ವರದಿ ಕೊಡಿ, ಹಾಸಿಗೆ ಇರುವ ಬಗ್ಗೆ ಪಾಲಿಕೆ ಮಾಹಿತಿ ನೀಡಿಲ್ಲ ಎಂದೆಲ್ಲ ಹೇಳುತ್ತ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ತುರ್ತು ಪರಿಸ್ಥಿಯಲ್ಲಿರುವ ಜನರಿಗೆ ಸೇವೆ ಸಿಗುತ್ತಿಲ್ಲ.
ಪ್ರತಿ ತಿಂಗಳಿಗೆ 95 ಸಾವಿರ ರೂ. ಬಾಡಿಗೆ!ಆಂಬುಲೆನ್ಸ್ ಆಗಿ ಪರಿವರ್ತನೆ ಮಾಡಲಾದ ಟಿಟಿಗಳಿಗೆ ಮಾಸಿಕ 95 ಸಾವಿರ ರೂ. ಬಾಡಿಗೆ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ, ವಾಹನ ಚಾಲಕರಿಗೆ ಮಾಸ್ಕ್, ಪಿಪಿಇ ಕಿಟ್ ಕೊಡಲಾಗುತ್ತದೆ. ಇನ್ನು ಖಾಸಗಿ ಸಂಸ್ಥೆಗಳ ಆಂಬುಲೆನ್ಸ್​ಗಳನ್ನು ಕೂಡ ಗುತ್ತಿಗೆ ಪಡೆಯುತ್ತಿದ್ದು, ತಿಂಗಳಿಗೆ 1.35 ಲಕ್ಷ ರೂ. ಬಾಡಿಗೆ ನೀಡಲು ಪಾಲಿಕೆ ಒಪ್ಪಂದ ಮಾಡಿಕೊಂಡಿದೆ ಎಂದು ಖಾಸಗಿ ಆಂಬುಲೆನ್ಸ್ ಸಂಸ್ಥೆ ಮಾಲೀಕ ವಿಶ್ವನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಪಾಯಕಾರಿ ಸಿಸಿಎಚ್​ಎಫ್​ ವೈರಸ್​ ಮೇಲೆ ಪಾಕ್​ನಲ್ಲಿ ಪ್ರಯೋಗ: ಚೀನಾ ಪ್ರಾಯೋಜಕತ್ವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
