ಬೆಂಗಳೂರು: ರಾಜಧಾನಿಯಲ್ಲಿ ಪ್ರತಿನಿತ್ಯ 70ರಿಂದ 100 ಸೋಂಕಿತರು ಸಾವನ್ನಪ್ಪುತ್ತಿದ್ದು, ಶವಗಳ ಅಂತ್ಯ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರದಲ್ಲಿ ಗಂಟೆಗಟ್ಟಲೆ ಆಂಬುಲೆನ್ಸ್ಗಳು ಸರತಿಯಲ್ಲಿ ನಿಲ್ಲುವಂತಾಗಿದೆ.
ನಗರದ 12 ಚಿತಾಗಾರಗಳಲ್ಲಿ ಮೃತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇಬ್ಬರ ಅಂತ್ಯಕ್ರಿಯೆಗೆ ಕನಿಷ್ಠ 1 ಗಂಟೆ ಸಮಯ ಅಗತ್ಯವಿದ್ದು, ಚಿತಾಗಾರವೊಂದರಲ್ಲಿ ದಿನಕ್ಕೆ 10 ದೇಹಗಳ ದಹನ ಮಾತ್ರ ಸಾಧ್ಯ. ಆದರೆ, ಸುಮನಹಳ್ಳಿ, ಹೆಬ್ಬಾಳ, ಬನಶಂಕರಿ, ಕಲ್ಪಹಳ್ಳಿ, ಕೆಂಗೇರಿ, ಪೀಣ್ಯ, ವಿಲ್ಸನ್ ಗಾರ್ಡನ್ ಚಿತಾಗಾರದ ಸಿಬ್ಬಂದಿಗೆ ಕೋವಿಡ್​ನಿಂದ ಮೃತರ ಅಂತ್ಯಕ್ರಿಯೆ ನೆರವೇರಿಸುವ ತರಬೇತಿ ನೀಡಲಾಗಿದೆ. ತರಬೇತಿ ನೀಡದ ಕೆಲವು ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡುತ್ತಿಲ್ಲ. ಹೀಗಾಗಿ ಕೆಲವೇ ಚಿತಾಗಾರಗಳಲ್ಲಿ ಹಲವು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ವಣವಾಗಿದೆ.
ರಾತ್ರಿ 10ರವರೆಗೂ ಕೆಲಸ:ಚಿತಾಗಾರಗಳು ಸಾಮಾನ್ಯ ವಾಗಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕೋವಿಡ್ ಸಾವು ಹೆಚ್ಚಾಗಿದ್ದ ರಿಂದ ರಾತ್ರಿ 8 ಗಂಟೆವರೆಗೂ ಕಾರ್ಯ ನಿರ್ವಹಿಸಬೇಕಾ ಗಿದೆ. ಕೆಲವೊಮ್ಮೆ ರಾತ್ರಿ 10 ಗಂಟೆವರೆಗೂ ಕರ್ತವ್ಯ ನಿಭಾಯಿಸಬೇಕಾಗುತ್ತದೆ.
ದೇಹ ರವಾನೆಗೆ ವಿಳಂಬ:ಕೋವಿಡ್​ನಿಂದ ಮೃತರ ದೇಹ ರವಾನೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ಆಂಬುಲೆನ್ಸ್ಗಳಿದ್ದು, ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೂ, ಚಿತಾಗಾರಗಳಲ್ಲಿ 3- 4 ಗಂಟೆ ಕಾಯಬೇಕಾದ್ದರಿಂದ ಮತ್ತೊಂದು ಮೃತದೇಹ ರವಾನಿಸಬೇಕೆಂದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆಂಬುಲೆನ್ಸ್ ಚಾಲಕ ತಿಳಿಸುತ್ತಾರೆ.
ರಕ್ಷಣಾ ಹೊದಿಕೆ ಹಾಕದ ಆಸ್ಪತ್ರೆಗಳು
ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕು ಹಾಗೂ ಶಂಕಿತ ಮೃತದೇಹಗಳಿಗೆ ಯಾವುದೇ ಪಿಪಿಇ ಕಿಟ್ ಅಥವಾ ಸುರಕ್ಷತಾ ಸಾಮಗ್ರಿ ಅಳವಡಿಸದೇ ಅಂತ್ಯಕ್ರಿಯೆಗೆ ಕಳುಹಿಸುತ್ತಾರೆ. ಆಗ, ಕೆಲವೊಮ್ಮೆ ನಾವೇ ಪಿಪಿಇ ಕಿಟ್ ಹೊದಿಸಿ ಅಂತ್ಯಕ್ರಿಯೆ ಮಾಡಿದ್ದು, ಬಹುತೇಕ ಪ್ರಕರಣಗಳಲ್ಲಿ ದೇಹವನ್ನು ವಾಪಾಸ್ ಕಳುಹಿಸಿದ್ದೇವೆ ಎಂದು ಚಿತಾಗಾರದ ಕಾರ್ವಿುಕರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
