ಬೆಂಗಳೂರು:ಜುಲೈ 8ನೇ ತಾರೀಕಿನಂದು 108 ಆ್ಯಂಬುಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ಪ್ರತಿಭಟನೆ ಮಾಡುವುದಾಗಿ ನಿರ್ಧರಿಸಿದ್ದು ಈ ಕಾರಣದಿಂದಾಗಿ ಅಂದು ಸರ್ಕಾರಿ ಆ್ಯಂಬುಲೆನ್ಸ್​ಗಳು ಕಾರ್ಯವನ್ನು ನಿರ್ವಹಿಸುವುದಿಲ್ಲ.
ಎಲ್ಲಾದರೂ ಪ್ರತಿಭಟನೆ ನಡೆದಲ್ಲಿ ತುರ್ತು ಚಿಕಿತ್ಸೆ ನೀಡುವ ಆ್ಯಂಬುಲೆನ್ಸ್​ ವ್ಯವಸ್ಥೆ ಏಕಾಏಕಿಯಾಗಿ ನಿಂತಲ್ಲಿ ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಶುರುವಾಗುವ ಆತಂಕ ಎದುರಾಗಿದೆ. ಹೀಗಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ 108 ಆಂಬ್ಯೂಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ತಕ್ಕೆ ಹಜರಾಗದೇ, ಬೇಡಿಕೆ ಈಡೇರಿಸಿಕೊಳ್ಳಲು 108 ( ಆರೋಗ್ಯ ಕವಚ) ಆಂಬ್ಯೂಲೆನ್ಸ್ ಚಾಲಕರು, ಸ್ಟಾಫ್ ನರ್ಸ್ ಸಿಬ್ಬಂಧಿಗಳ ನಿರ್ಧಾರಿಸಿದ್ದು ಅದಕ್ಕೆ ಕಾರಣ ಸರ್ಕಾರ ಕಳೆದ ನಾಲ್ಕು ತಿಂಗಳ ವೇತನ ಹಾಗೂ ಮೂರು ವರ್ಷದ ಆರಿಯರ್ಸ್ ಬಾಕಿ ಇಟ್ಟುಕೊಂಡಿದ್ದು ಎನ್ನಲಾಗಿದೆ. ಹೀಗಾಗಿ ಸಿಬ್ಬಂದಿಗಳು, ರಾಜ್ಯಾದ್ಯಂತ ಸಾಮೂಹಿಕ ರಜೆ ಹಾಕಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಒಟ್ಟು 2 ಸಾವಿರ ಸ್ಟಾಫ್ ನರ್ಸ್, ಆಂಬ್ಯೂಲೆನ್ಸ್ ಚಾಲಕರಿದ್ದು ಆ್ಯಂಬುಲೆನ್ಸ್ ಸೇವೆಯನ್ನು ಖಾಸಗಿ ಸಂಸ್ಥೆಯಾದ ಜಿವಿಕೆ ಟೆಂಡರ್ ಮೂಲಕ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಕೆಲ ಆರೋಗ್ಯ ಇಲಾಖೆಯ ಅಧಿಕಾರಿಗಳು, “ಸರ್ಕಾರ ಅನುದಾನ ನೀಡಿದೆ. ಆದ್ರೆ ಬೇರೆ ಕೆಲಸಕ್ಕೆ ಜಿವಿಕೆ ಸಂಸ್ಥೆ ಬಳಸಿಕೊಂಡಿದೆ” ಎಂದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
