ಗಂಗಾವತಿ:ಮಂಡ್ಯದಲ್ಲಿ ಕರೊನಾ ಸೋಂಕಿತ ಜೆಡಿಎಸ್‌ ಮುಖಂಡನೊಬ್ಬನ ಮನವೊಲಿಸಿ ಆಸ್ಪತ್ರೆಗೆ ಕರೆತರಲು ಒಂದುಗಂಟೆ ಅವರ ಮನೆ ಎದುರು ಅಂಬ್ಯುಲೆನ್ಸ್‌ ನಿಲ್ಲಿಸಿಕೊಂಡಿರುವ ಘಟನೆ ವರದಿಯಾಗಿದ್ದರೆ, ಅದೇ ಇನ್ನೊಂದೆಡೆ ಕರೊನಾ ಸೋಂಕಿತ ಮಹಿಳೆಗೆ ಅಂಬ್ಯುಲೆನ್ಸ್‌ ನಿರಾಕರಿಸಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ!
ಈ ಕಾರಣದಿಂದ ಗಂಗಾವತಿ ನಗರದ ಮುರಾರಿ ಕ್ಯಾಂಪ್‌ನಿಂದ ಸೋಂಕಿತ ಮಹಿಳೆ ಆಸ್ಪತ್ರೆಗೆ ನಡೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆ ಎರಡು ಕಿ.ಮೀವರೆಗೆ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ.
ಇದನ್ನೂ ಓದಿ:ಕರೊನಾ ಬಂದ್ರೇನು, ಆಸ್ಪತ್ರೆಗೆ ಬರಲ್ಲ ಎಂದ ಜೆಡಿಎಸ್‌ ಮುಖಂಡ- ಸುಸ್ತಾದ ಸಿಬ್ಬಂದಿ
ಮಹಿಳೆಗೆ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಇಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಮನೆಗೆ ಅಂಬ್ಯುಲೆನ್ಸ್‌ ಕಳುಹಿಸಿಕೊಡುವಂತೆ ಸೋಂಕಿತೆಯ ಪತಿ ಕೇಳಿಕೊಂಡಾಗ ಸಿಬ್ಬಂದಿ ಅದು ಸಾಧ್ಯವಿಲ್ಲ. ನೀವೇ ಬಂದು ದಾಖಲು ಮಾಡಿ. ಒಂದು ವೇಳೆ ಮನೆ ಹತ್ತಿರ ಅಂಬ್ಯುಲೆನ್ಸ್ ಕಳುಹಿಸಿದರೆ ಅಲ್ಲಿಯ ನಿವಾಸಿಗಳು ಗಲಾಟೆ ಮಾಡುತ್ತಾರೆ ಎಂಬ ನೆಪ ಒಡ್ಡಿ ಖುದ್ದು ದಾಖಲಾಗುವಂತೆ ಹೇಳಿದ್ದಾರೆ.
ಮಹಿಳೆಯ ಮನೆಯ ಎರಡು ಕಿ.ಮೀ ದೂರದಲ್ಲಿ ಆಸ್ಪತ್ರೆ ಇತ್ತು. ಹತ್ತಿರದ ಆಸ್ಪತ್ರೆಯೆಂದರೆ ಅದೇ ಆಗಿದೆ. ಆಟೋ ಅಥವಾ ಇನ್ನಾವುದೇ ವಾಹನದಲ್ಲಿ ಹೋದರೆ ಅಲ್ಲಿ ಇರುವವರೆಗೆ ತೊಂದರೆ ಆಗುವ ಕಾರಣ, ತಮ್ಮ ಪತ್ನಿ ನಡೆದೇ ಆಸ್ಪತ್ರೆಗೆ ಹೋಗಿರುವುದಾಗಿ ಪತಿ ಹೇಳಿದ್ದಾರೆ.
ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ಆಸ್ಪತ್ರೆಯ ಈ ಕ್ರಮ ಸರಿಯಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಡಿಸಿ ಸುರಳ್ಕರ್ ವಿಕಾಸ ಕಿಶೋರ್ ತಿಳಿಸಿದ್ದಾರೆ.
12 ಸಲ ಹಿಮಾಲಯ ಚಾರಣ ಕೈಗೊಂಡಿದ್ದ ಮೈಸೂರಿನ ಅನ್ನಪೂರ್ಣ ಇನ್ನಿಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − two =
Remember me
