ಹಾವೇರಿ:ಕಸಾಪಗೆ ಒಂದು ಬಾರಿ ಅಧ್ಯಕ್ಷರಾದವರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಜತೆಗೆ ಕಸಾಪ ಸದಸ್ಯತ್ವ ಪಡೆಯಲು ಕನ್ನಡ ಓದು-ಬರಹ ಕಡ್ಡಾಯ ಹಾಗೂ ವಿವಿಧ ಷರತ್ತುಗಳು ಸೇರಿ 37 ನಿಬಂಧನೆಗಳ ತಿದ್ದುಪಡಿಗೆ ಸರ್ವಾನುಮತದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. ಹಾವೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಗಿನೆಲೆಯ ಕನಕ ಸಭಾಭವನದಲ್ಲಿ ನಡೆದ ಕಸಾಪ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಕೈಗೊಂಡ ತೀರ್ವನಗಳ ಕುರಿತು ಮಾಹಿತಿ ನೀಡಿದರು.
ಪರಿಷತ್ ಮೂಲ ಉದ್ದೇಶಗಳಿಗೆ ಚ್ಯುತಿ ಬಾರದಂತೆ ಕೈಗೊಂಡಿದ್ದ ಹಲವು ತಿದ್ದುಪಡಿಗಳನ್ನು ಬಹುಮತದಿಂದ ಅಂಗೀಕರಿಸಲಾಯಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅಧ್ಯಕ್ಷತೆಯ 11 ಜನರ ಸಮಿತಿ ಹಲವು ಬಾರಿ ಸಭೆ ನಡೆಸಿ ಪರಿಷತ್ ನಿಯಮಗಳಲ್ಲಿ ಕೆಲವನ್ನು ಈಗಿನ ಕಾಲಮಾನಕ್ಕೆ ತಕ್ಕಂತೆ ಬದಲಿಸುವುದು ಸೂಕ್ತ ಎಂದು ತಿಳಿಸಿತ್ತು. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಅನುಷ್ಠಾನಕ್ಕೆ ತರುವುದು ನನ್ನ ಕರ್ತವ್ಯ. ಪ್ರಜಾಪ್ರಭುತ್ವ ಮಾದರಿಯಲ್ಲಿ ರ್ಚಚಿಸಿಯೇ ಅಗತ್ಯ ತಿದ್ದುಪಡಿ ತರಲಾಗಿದ್ದು, ಅವಸರದಲ್ಲಿ ಹಾಗೂ ಏಕಪಕ್ಷೀಯವಾಗಿ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದರು. ಸರ್ವ ಸದಸ್ಯರ ವಿಶೇಷ ಸಭೆ ಕರೆದ ಬಗ್ಗೆ ಮೊದಲೇ ಎಲ್ಲ ಸದಸ್ಯರಿಗೆ ಕನ್ನಡ ನುಡಿ ಪತ್ರಿಕೆ ಮೂಲಕ ತಿಳಿಸಲಾಗಿತ್ತು. ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಹನುಮೇಗೌಡ ಎಂಬುವರು ಪರಿಷತ್​ನ ಉತ್ತಮ ಉದ್ದೇಶಕ್ಕೆ ಅಡ್ಡಗಾಲು ಹಾಕುವ ಉದ್ದೇಶದಿಂದ ಕೋರ್ಟ್ ಮೆಟ್ಟಿಲೇರಿದ್ದಾರೆ. ಅವರಿಗೆ ಕನ್ನಡಪರ ಹಿತಾಸಕ್ತಿ ಇದ್ದಂತೆ ಕಾಣುತ್ತಿಲ್ಲ. ನ್ಯಾಯಾಲಯ ನೀಡುವ ಯಾವುದೇ ತೀರ್ವನಕ್ಕೆ ನಾವು ಬದ್ಧ ಎಂದರು. ಶಾಸಕ ನೆಹರು ಓಲೇಕಾರ, ನಿವೃತ್ತ ನ್ಯಾಯಾಧೀಶ ಶಿವಲಿಂಗೇಗೌಡ, ನೇ.ಬ. ರಾಮಲಿಂಗಶೆಟ್ಟಿ, ಪಟೇಲ ಪಾಂಡು, ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ವೈ.ಬಿ. ಆಲದಕಟ್ಟಿ, ಎಸ್.ಎಸ್. ಬೇವಿನಮರದ ಇದ್ದರು.
ಕಸಾಪ ಅಧ್ಯಕ್ಷರ ವಿರುದ್ಧ ಧಿಕ್ಕಾರ:ಕಾಗಿನೆಲೆಯಲ್ಲಿ ಏರ್ಪಡಿಸಿದ್ದ ಕಸಾಪ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಕೆಲವರು ಕಸಾಪ ಅಧ್ಯಕ್ಷ ಮಹೇಶ ಜೋಶಿ ಸರ್ವಾಧಿಕಾರಿ ಧೋರಣೆ ಅನು ಸರಿಸುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ಬೈಲಾ ತಿದ್ದುಪಡಿ ವಿಚಾರವಾಗಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿಶೇಷ ಸಭೆಯ ಕಾರ್ಯಸೂಚಿ ಸರ್ವ ಸದಸ್ಯರ ಸಭೆಯಲ್ಲೆ ಮಂಡಿಸಲ್ಙು ಅವಕಾಶವಿದ್ದರೂ ವಿಶೇಷ ಸಭೆ ಕರೆಯಲಾಗಿದೆ. ಇದಕ್ಕೆ ಕಾರ್ಯಕಾರಿ ಸಮಿತಿ ಅನುಮೋದನೆಯಿಲ್ಲ ಎಂದು ಆಕ್ಷೇಪಿಸಿದರು.
ಓದು, ಬರಹ ಬೇಕು:ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, 70 ವರ್ಷಗಳ ನಮ್ಮ ಸಂವಿಧಾನಕ್ಕೆ 100 ಬಾರಿ ತಿದ್ದುಪಡಿಯಾಗಿದೆ. ಅದರಂತೆ ನೂರು ವರ್ಷಗಳ ಇತಿಹಾಸವಿರುವ ಸಾಹಿತ್ಯ ಪರಿಷತ್​ಗೆ ಕೂಡ ಇಂದಿನ ಕಾಲಕ್ಕೆ ತಕ್ಕಂತೆ ಕೆಲವು ತಿದ್ದುಪಡಿ ಅಗತ್ಯವಿತ್ತು. 11 ಜನರ ಸಮಿತಿಯಲ್ಲಿ ತಿದ್ದುಪಡಿ ಮಾಡಬೇಕಾದ ವಿಷಯಗಳ ಬಗ್ಗೆ ಅನೇಕ ಬಾರಿ ರ್ಚಚಿಸಲಾಗಿದೆ. 18 ವರ್ಷ ಪೂರೈಸಿರುವ ಕನಿಷ್ಠ ಕನ್ನಡ ಓದು ಬರಹ ಬಲ್ಲವರಿಗೆ ಸದಸ್ಯತ್ವ ನೀಡಲು ತಿದ್ದುಪಡಿ ತರಲಾಗಿದೆ. ಕಲಾವಿದರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಪರಿಷತ್​ನಿಂದ ಸರಳ ಕನ್ನಡ ಪರೀಕ್ಷೆ ನಡೆಸಿ ನಂತರ ಸದಸ್ಯತ್ವ ನೀಡಲು ಉದ್ದೇಶಿಸಲಾಗಿದೆ. ಅಪರಾಧಿಕ ಹಿನ್ನೆಲೆಯುಳ್ಳವರಿಗೆ ಸದಸ್ಯತ್ವ ಪಡೆಯಲು ಅವಕಾಶವಿಲ್ಲ. ಪರಿಷತ್​ನ ಮೂಲ ಧ್ಯೇಯೋದ್ದೇಶಗಳಿಗೆ ಚ್ಯುತಿ ಬಾರದಂತೆ ಎಲ್ಲ ತಿದ್ದುಪಡಿಗಳನ್ನು ತರಲಾಗಿದೆ. ಇಲ್ಲಿ ಕೈಗೊಂಡಿರುವ ನಿರ್ಣಯಗಳು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡುತ್ತದೆ ಎಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಹೇಳಿದೆ. ಇದನ್ನೇ ಅಂಕುಶ, ಹಿನ್ನಡೆ ಎಂದು ಹೇಳುವುದು ಸೂಕ್ತವಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
