ಬೆಂಗಳೂರು:ಅಮೆರಿಕ ಪ್ರವಾಸದಲ್ಲಿ ಅಲ್ಲಿನ ಕಂಪನಿಗಳ ಜತೆಗೆ ಮಾತುಕತೆ ನಡೆಸಿದಾಗ ರಾಜ್ಯದಲ್ಲಿ ಕಂಪನಿಗಳು ಹೊಂದಿರುವ ವ್ಯವಹಾರ ವಿಸ್ತರಣೆ, ಹೊಸ ಉದ್ಯಮಗಳ ಸ್ಥಾಪನೆಗಾಗಿ ಒಟ್ಟು 25 ಸಾವಿರ ಕೋಟಿ ರೂ. (ಮೂರು ಶತಕೋಟಿ ಡಾಲರ್) ಹೂಡಿಕೆಗೆ ಆಸಕ್ತ ವ್ಯಕ್ತಪಡಿಸಿವೆ ಎಂದು ಸಚಿವರಾದ ಎಂ.ಬಿ.ಪಾಟೀಲ, ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಗುರುವಾರ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಆರೋಗ್ಯ ಸಿಟಿ, ಏರೋಸ್ಪೇಸ್, ರಕ್ಷಣೆ, ಅಪ್ಲೈಡ್ ಮೆಟೇರಿಯಲ್ಸ್, ಲ್ಯಾಮ್ ರಿಸರ್ಚ್, ಬೋಯಿಂಗ್, ಕ್ರಿಪ್ಪನ್, ಡೆಲ್, ಮೆಡ್-ಟೆಕ್, ಆರ್‌ಟಿಎಕ್ಸ್ ಮತ್ತಿತರ ಮುಂಚೂಣಿ ಕಂಪನಿಗಳ ಜತೆಗೆ ವಿಚಾರ ವಿನಿಯಮ ನಡೆಸಲಾಗಿದೆ.
ಹಾಲಿ ಘಟಕ ವಿಸ್ತರಣೆ, ಹೊಸದಾಗಿ ಕಾರ್ಯಾಚರಣೆಗೆ ಉತ್ಸುಕತೆ ತೋರಿದ ಉದ್ಯಮಿಗಳು ಮತ್ತು ಹೂಡಿಕೆದಾರರ ಜತೆಗೆ ನಿರಂತರ ಮಾತುಕತೆ, ಉಪಕ್ರಮಗಳ ಮನವರಿಕೆ ಮಾಡಿಕೊಡಲು ಇಬ್ಬರು ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ಒಪ್ಪಿಸಲಾಗಿದೆ.
ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ಈ ಹೊಣೆ ನಿಭಾಯಿಸಿ, ವ್ಯಕ್ತವಾದ ಆಸಕ್ತಿಯು ಒಡಂಬಡಿಕೆ ಹಾಗೂ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಲಿದ್ದಾರೆ ಎಂದು ಎಂ.ಬಿ.ಪಾಟೀಲ, ಪ್ರಿಯಾಂಕ್ ಖರ್ಗೆ ತಿಳಿಸಿದರು.
ಜಾಗತಿಕ, ಆಂತರಿಕ ಪೈಪೋಟಿ ಸಮರ್ಥವಾಗಿ ಎದುರಿಸಿ, ರಾಜ್ಯದಲ್ಲಿ ಸುಗಮ ವ್ಯವಹಾರಕ್ಕೆ ಅನುವು ಮಾಡಿಕೊಡಲು ಚಾಲ್ತಿ ನೀತಿಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಲಾಗುತ್ತಿದೆ. ಇದಕ್ಕಾಗಿ ಹೊಸ ಕರಡು ಪ್ರಸ್ತಾವನೆಯೂ ಸಿದ್ಧವಾಗಿದೆ.
ಅಮೆರಿಕದ ಅನೇಕ ಕಂಪನಿಗಳು, ಉದ್ಯಮಗಳ ಮುಖ್ಯಸ್ಥರು ಸುಗಮ ವ್ಯವಹಾರದ ಬಗ್ಗೆಯೂ ಗಮನಸೆಳೆದಿವೆ. ಈಗಾಗಲೇ ಬೃಹತ್ ವಿವಿಧ ರಾಜ್ಯಗಳ ಏಕಗವಾಕ್ಷಿ ವ್ಯವಸ್ಥೆಗಳ ಮಾಹಿತಿ ತರಿಸಿಕೊಂಡು ಅಧ್ಯಯನ ಮಾಡಲಾಗಿದೆ. ಅಲ್ಲದೆ, ಏರೋಸ್ಪೇಸ್, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ಆಟೋ/ಇವಿ, ಎಲೆಕ್ಟ್ರಾನಿಕ್ಸ್, ತಯಾರಿಕಾ ಕ್ಷೇತ್ರ ಒಳಗೊಂಡು ಒಂಭತ್ತು ವಿಷನ್ ಗ್ರೂಪ್‌ಗಳನ್ನು ರಚಿಸಲಾಗಿದೆ.
ಆಯಾ ಸಮೂಹದ ಭಾಗಿದಾರರು, ಪರಿಣತರಿಗೆ ಸರ್ಕಾರದಿಂದ ಏನು ನಿರೀಕ್ಷಿಸುವಿರಿ ಎಂದು ಕೇಳಿ ಮಾಹಿತಿ ಪಡೆಯುತ್ತೇವೆ. ಕಾರ್ಯಸಾಧುವೆನಿಸಿದ ಅಪೇಕ್ಷೆಗಳನ್ನು ಸೇರ್ಪಡೆ, ಆಯಾ ಇಲಾಖೆಗಳ ಅನುಮೋದನೆ ಪ್ರಕ್ರಿಯೆ ಸರಳೀಕರಣ ಮತ್ತಿತರ ಉಪಕ್ರಮಗಳು ಪರಿಷ್ಕೃತ ಸುಗಮ ವ್ಯವಹಾರದ ಕರಡು ಪ್ರಸ್ತಾವನೆಯಲ್ಲಿ ಅಡಕವಾಗಿರುತ್ತದೆ ಎಂದು ವಿವರಿಸಿದರು.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯವಸ್ಥೆಯಲ್ಲಿ ಗಮನಾರ್ಹ ಮಾರ್ಪಾಡು ಮಾಡಲಾಗುತ್ತಿದ್ದು, ಒಂದು ಬಾರಿ ಆಧಾರದಲ್ಲಿ ಹಳೆಯ ಕೈಗಾರಿಕೆಗಳ ಉನ್ನತೀಕರಣಕ್ಕೆ ತೀರ್ಮಾನಿಸಲಾಗಿದೆ. ಇದಕ್ಕಾಗಿ ಪ್ರತಿ ಉದ್ಯಮಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಹೇಳಿದರು.
ಬಂಡವಾಳ ಹೂಡಿಕೆದಾರರು, ಉದ್ಯಮಿಗಳು ಹಾಗೂ ವಿವಿಧ ಕಂಪನಿಗಳ ಮುಖ್ಯಸ್ಥರು ಇದ್ದಲ್ಲಿಗೆ ಹೋಗಿ ಮುಖಾಮುಖಿ ಚರ್ಚೆ, ಸಂವಾದ ಗೋಷ್ಠಿ ನಡೆಸುವ ಮೂಲಕ ವಿನೂತನ ಪ್ರಯತ್ನ ಮಾಡಿದ್ದೇವೆ.
ಉದ್ಯಮ-ವ್ಯವಹಾರಕ್ಕೆ ಉತ್ತೇಜನ ಭಾಗವಾಗಿ ಸೆ.25 ರಿಂದ ಅಕ್ಟೋಬರ್ 6ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಾಯಿತು. ಎರಡನೇ ಹಂತದಲ್ಲಿ ಅ.3ರಿಂದ ಪ್ರಿಯಾಂಕ್ ಖರ್ಗೆ ಜತೆಯಾದರು, ನಂತರವೂ ಹೆಚ್ಚುವರಿ ಎರಡು ದಿನ ಉಳಿದ ಸಭೆ, ಸಮಾಲೋಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎಂ.ಬಿ.ಪಾಟೀಲ ಹೇಳಿದರು.
ರಾಜ್ಯದಲ್ಲಿ ಹೂಡಿಕೆಯಾಗುವ ಬಂಡವಾಳ ಸುರಕ್ಷಿತ, ಉದ್ಯಮ-ವ್ಯವಹಾರ ವೃದ್ಧಿಗೆ ಪೂರಕವಾದ ವಾತಾವರಣ, ಪೂರಕವಾದ ನೀತಿಗಳು, ನುರಿತ ಮಾನವ ಸಂಪನ್ಮೂಲ ಲಭ್ಯತೆ ಖಚಿತಪಡಿಸುವ ಸಂದೇಶ ರವಾನಿಸುವುದು ಈ ಪ್ರವಾಸ ಮುಖ್ಯ ಉದ್ದೇಶವಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
