ಬೆಂಗಳೂರು:ಕರೊನಾ ಕಾರಣ ದೇಶ ವಿದೇಶದಲ್ಲಿ ಕೋಟ್ಯಂತರ ಜನರು ಕರೊನಾದಿಂದಾಗಿ ಕೆಲಸ ಕಳೆದುಕೊಂಡು ಮನೆ ಸೇರುತ್ತಿರುವ ಸಂದರ್ಭದಲ್ಲೇ ಕೆಲವು ಕ್ಷೇತ್ರಗಳಲ್ಲಿ ಹೊಸ ಕೆಲಸಗಾರರಿಗೆ ಬೇಡಿಕೆಯುಂಟಾಗಿದೆ. ಅಗತ್ಯ ಸೇವೆಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನೇಮಕಾತಿ ಆರಂಭವಾಗಿದೆ.
ಶಾಲಾ-ಕಾಲೇಜುಗಳು ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಶಿಕ್ಷಣ ನೀಡಲು ಆರಂಭಿಸಿರುವುದರಿಂದಾಗಿ ಎಜುಟೆಕ್​ನಲ್ಲಿ ಸಿಬ್ಬಂದಿಗೆ ಬೇಡಿಕೆಯಿದೆ. 80 ದಿನಗಳ ಕಾಲ ಬಾಗಿಲು ಮುಚ್ಚಿದ್ದ ಇ-ಕಾಮರ್ಸ್​ಗಳು ಇದೀಗ ಅಗತ್ಯ ವಸ್ತುಗಳೊಂದಿಗೆ ಎಲ್ಲ ರೀತಿಯ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಪುನರಾರಂಭಿಸಿವೆ. ಈ ಕ್ಷೇತ್ರದಲ್ಲಿದ್ದ ಅನೇಕರು ತಮ್ಮೂರಿಗೆ ಹೋಗಿರುವುದರಿಂದ ಕೆಲಸ ಖಾಲಿ ಉಳಿದುಕೊಂಡಿವೆ. ಉಳಿದಂತೆ ಡಾಟಾ ಪ್ರೊಸೆಸಿಂಗ್, ಪೂರೈಕೆ ಸರಪಳಿ ನಿರ್ವಹಣೆ, ಬ್ಯಾಂಕಿಂಗ್, ಎಫ್​ಎಂಸಿಜಿ, ಆರೋಗ್ಯ ಸೇವೆ, ಜೀವ ವಿಮೆ, ತಂತ್ರಜ್ಞಾನ ತಜ್ಞರು, ಫಿನ್​ಟೆಕ್ ಮತ್ತು ಫಾರ್ವ ಕ್ಷೇತ್ರಗಳಲ್ಲಿ ಸಿಬ್ಬಂದಿಗೆ ಬೇಡಿಕೆ ಉಂಟಾಗಿದೆ.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಲಾಕ್​ಡೌನ್ ಸಮಯದಲ್ಲಿ ಭಾರತದ 12 ಕೋಟಿಗೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ದೇಶದ ಆರ್ಥಿಕತೆಯನ್ನು ಮೇಲ್ವಿಚಾರಣಾ ಕೇಂದ್ರ (ಸಿಎಂಐಇ) ತಿಳಿಸಿದೆ. ಕೆಲಸ ಕಳೆದುಕೊಳ್ಳುತ್ತಿರುವವರ ಜತೆಯಲ್ಲೇ ಇದೀಗ ಪದವಿ ಪಡೆದು ಬಂದಿರುವ ವಿದ್ಯಾರ್ಥಿಗಳ ನೇಮಕಾತಿಯೂ ಒಂದು ಸಮಸ್ಯೆಯಾಗಿತ್ತು. ಲಾಕ್​ಡೌನ್​ಗೂ ಮೊದಲಿಗೆ ಹೋಲಿಸಿದರೆ ಲಾಕ್​ಡೌನ್ ಸಮಯದಲ್ಲಿ ದೇಶದ ನೇಮಕಾತಿ ಪ್ರಮಾಣ ಶೇ. 80 ಕುಸಿತ ಕಂಡಿತ್ತು ಎನ್ನಲಾಗಿದೆ. ಆದರೆ, ನೇಮಕಾತಿ ಪ್ರಮಾಣ ಇದೀಗ ಶೇ. 50ಕ್ಕೆ ಚೇತರಿಕೆ ಕಂಡಿದೆ. ಕರೊನಾ ಬಿಕ್ಕಟ್ಟು ಹೆಚ್ಚಳವಾಗುತ್ತಿರುವ ಕಾರಣ ಬಹುತೇಕ ರಾಜ್ಯಗಳಲ್ಲಿ ವೈದ್ಯರು, ನರ್ಸ್​ಗಳು, ಪ್ಯಾರಾ ಮೆಡಿಕ್ಸ್ ಸೇರಿದಂತೆ ಅನೇಕ ಕೆಲಸಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (ಎಫ್​ಎಂಸಿಜಿ) ಉತ್ಪಾದಕರು, ಮಾರಾಟಗಾರರು ಮತ್ತು ಲಾಜಿಸ್ಟಿಕ್ಸ್ ವೃತ್ತಿಪರರಿಗೆ ಬೇಡಿಕೆಯಿದೆ. ಇ-ಕಾಮರ್ಸ್ ಸಂಸ್ಥೆಗಳು ಡೆಲಿವರಿ ಮಾಡುವುದಕ್ಕೆ ಜನರಿಲ್ಲವೆಂದು ಕೊರಗುತ್ತಿವೆ. ಅನೇಕ ಸ್ಥಳಗಳಲ್ಲಿ ಮನೆಕೆಲಸಗಾರರು ಬೇಕೆನ್ನುವ ಕೋರಿಕೆಯಿದೆ. ಸೈಬರ್ ಸೆಕ್ಯುರಿಟಿ ಸಿಬ್ಬಂದಿಗಳ ನೇಮಕಾತಿ ನಡೆಸಲಾಗುತ್ತಿದೆ. ಎಲ್ಲ ಕ್ಷೇತ್ರದಲ್ಲು ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿರುವುದರಿಂದಾಗಿ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಫಿನ್​ಟೆಕ್ ಮತ್ತು ಡಿಜಿಟಲ್ ಪಾತ್ರ ಮುಖ್ಯವಾಗಿದ್ದು ಉತ್ತಮ ಕೋಡಿಂಗ್ ಜ್ಞಾನ ಹೊಂದಿರುವವರಿಗೆ ಅವಕಾಶಗಳು ಒದಗಿ ಬರುತ್ತಿವೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + two =
Remember me
