ಚಿಕ್ಕಮಗಳೂರು:ದಟ್ಟ ಮಂಜು ಮುಸುಕಿನ ವಾತಾವರಣದ ನಡುವೆ ನಡೆದ ಬಿಂಡಿಗಾ ದೇವೀರಮ್ಮನ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆ ಪ್ರಾರ್ಥನೆ ಸಲ್ಲಿಸಿ ಕೃತಾರ್ಥರಾದರು.
ಪ್ರತಿ ವರ್ಷದಂತೆ ಭಕ್ತರು ಭಾರಿ ಸಂಖ್ಯೆಯಲ್ಲಿ ಬೆಟ್ಟಕ್ಕೆ ಜನ ಹರಿದು ಬರಬಹುದೆಂಬ ದೃಷ್ಟಿಯಿಂದ ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿ ಪೊಲೀಸ್ ಪಹರೆ ಹಾಕಲಾಗಿತ್ತು. ಈ ಸಂಬಂಧ ಸ್ಥಳೀಯ ನೂರು ಜನ ಗ್ರಾಮಸ್ಥರನ್ನು ಹೊರತುಪಡಿಸಿ ಹೊರಗಿನಿಂದ ಬರುವ ಭಕ್ತರಿಗೆ ಬೆಟ್ಟವೇರಿ ದೇವರ ದರ್ಶನ ಪಡೆಯಲು ನಿರ್ಬಂಧ ಹೇರಲಾಗಿತ್ತು.
ಬೀಸುತ್ತಿದ್ದ ಕುಳಿರುಗಾಳಿ ನಡುವೆ ನಡುರಾತ್ರಿಯಿಂದಲೆ ಕಡಿದಾದ ಹಾದಿಯಲ್ಲಿ ಸುಗಮವಾಗಿ ಶಿಖರವೇರಿದ ಭಕ್ತ ಸಮೂಹ ಶನಿವಾರ ಸಂಜೆವರೆಗೂ ಸಾಗಿ ದೇವೀರಮ್ಮನ ದರ್ಶನ ಪಡೆಯಿತು. ಮಾಣಿಕ್ಯಾಧಾರಾದ ಕಡೆಯಿಂದ ಸಹ ಬಹಳಷ್ಟು ಭಕ್ತರು ಆಗಮಿಸಿದ್ದರು.ಮಾಜಿ ಸಚಿವ, ಶಾಸಕ ಸಿ.ಟಿ.ರವಿ ಮತ್ತು ಪತ್ನಿ ಪಲ್ಲವಿ ರವಿ ಸ್ಥಳೀಯರೊಂದಿಗೆ ಮುಂಜಾನೆ ಆಗಮಿಸಿ ಆರಂಭದಲ್ಲಿ ಒಟ್ಟಿಗೆ ಮೆಟ್ಟಿಲೇರಿದರೂ ಶಾಸಕರು ಮುಂದೆ ಸಾಗಿದರು. ಬೆಟ್ಟದಲ್ಲಿದ್ದ ದೇವೀರಮ್ಮ ದರ್ಶನದ ಸಂದರ್ಭ ಪಲ್ಲವಿ ಅವರು ತಂದಿದ್ದ ಅಕ್ಕಿ, ಬಳೆ, ಕುಪ್ಪಸ, ತುಪ್ಪ, ಹೂವನ್ನು ದೇವರಿಗೆ ಅರ್ಪಿಸಿದರು. ನಂತರ ದಂಪತಿಗಳು ದೀಪದಾರತಿ ಬೆಳಗಿದಾಗ ಹಲವು ಮಹಿಳೆಯರು ಸಾಥ್ ನೀಡಿದರು. ಮಹಿಳಾ ಪೊಲೀಸ್ ಅಧಿಕಾರಿ ಸಹ ಆರತಿಗೆ ಕೈಜೋಡಿಸಿ ಕರೊನಾ ನಿವಾರಣೆಗಾಗಿ ಪ್ರಾರ್ಥಿಸಲಾಗಿದೆ ಎಂದರು.
ಹೊರ ಜಿಲ್ಲೆಗಳಿಂದಲೂ ಭಕ್ತರುಸ್ಥಳೀಯ ಗ್ರಾಮಸ್ಥರು, ನಗರ ಸುತ್ತಮುತ್ತ, ಜಿಲ್ಲೆಯ ಹಲವು ಭಾಗದ ಬಹಳಷ್ಟು ಜನ ಬೆಟ್ಟಕ್ಕೆ ಆಗಮಿದರೂ ಬೆಂಗಳೂರು, ರಾಯಚೂರು, ಸಿಂದನೂರು, ಮಂಡ್ಯ ಇತರೆ ಜಿಲ್ಲೆಗಳ 50 ಕ್ಕೂ ಹೆಚ್ಚು ಭಕ್ತರು ಸೇರಿ ಮಹಿಳೆಯರು ಮಕ್ಕಳಾದಿಯಾಗಿ ಸಾವಿರಕ್ಕೂ ಹೆಚ್ಚು ಮಂದಿ ದೇವರ ದರ್ಶನ ಪಡೆದರು. ಬೆಂಗಳೂರಿನ ದೀಪಕ್, ಇಳಕಲ್‍ನ ನವೀನ್ ದೇವರ ದರ್ಶನಕ್ಕಾಗಿ ಆಗಮಿಸಿದಾಗ ಮಲ್ಲೇನಹಳ್ಳಿ ಬಳಿ ಪೊಲೀಸರು ತಡೆದು ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ ದೂರದೂರಿನಿಂದ ದೇವರ ದರ್ಶನಕ್ಕಾಗಿ ಅಗಮಿಸಿದ್ದೇವೆ ಎಂದು ಮೂರ್ನಾಲ್ಕು ಬಾರಿ ಕೈ ಮುಗಿದು ಅವಕಾಶ ಕೊಡುವಂತೆ ಮನವಿ ಮಾಡಿದಾಗ ಸಿಬ್ಬಂದಿಯ ಮನಸ್ಸು ಕರಗಿ ಅವಕಾಶ ಕಲ್ಪಿಸಿದ್ದು ಕಂಡು ಬಂತು.
ಮೋಪುಗಳನ್ನು ಹೊತ್ತು ಹರಕೆ ತೀರಿಸಿದರು.ಭಕ್ತರು ದೇವರಿಗೆ ಒಪ್ಪಿಸಿದ್ದ ಸೀರೆ, ಕುಪ್ಪಸ, ತುಪ್ಪ, ಮೋಪುಗಳನ್ನು ಕುಂಡದಲ್ಲಿ ಹಾಕಿ ಶನಿವಾರ ರಾತ್ರಿ ಬೆಟ್ಟದ ತುದಿಯಲ್ಲಿ ದೀಪ ಹಚ್ಚುವ ಸಂಪ್ರದಾಯವಿದ್ದು ಕೆಲವು ಯುವಕರು ಸೇರಿ ದೇವರಿಗೆ ಹರಕೆ ಹೊತ್ತಿದ್ದ ಬಹಳಷ್ಟು ಭಕ್ತರು ದೊಡ್ಡ ದೊಡ್ಡ ಮೋಪುಗಳನ್ನು ಹೊತ್ತು ಬೆಟ್ಟವೇರಿ ಸಮರ್ಪಿಸಿದರು.ಡಾ.ದಯಾನಂದ ಮೂರ್ತಿಶಾಸ್ತ್ರಿ ನೇತೃತ್ವದ ತಂಡ ರಾತ್ರಿ 2 ಗಂಟೆಗೆ ಪೂಜೆ ಅರಂಭಿಸಿ ದೇವೀರಮ್ಮನಿಗೆ ರುದ್ರಾಭಿಷೇಕ, ಪುಷ್ಪಾಲಂಕಾರ, ವಿಶೇಷ ಪೂಜೆ ಸಲ್ಲಿಸಿತು. ಸಮಿತಿ ಪದಾಧಿಕಾರಿಗಳು ಬೆಟ್ಟದಲ್ಲಿ ಭಕ್ತರು ಗುಂಪು ಸೇರದಂತೆ ಎಚ್ಚರಿಕೆ ವಹಿಸಿ ಮುಂದೆ ಸಾಗುವಂತೆ ಹೇಳಿದರು. ಬಹಳಷ್ಟು ಭಕ್ತರು ದೇವರ ಗುಡಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ನಿರಾಸೆಯಿಂದ ಹಿಂತಿರುಗಿದ ಭಕ್ತರುಕೈಮರ ಹಾಗೂ ಮಲ್ಲೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಚೆಕ್‍ಪೋಸ್ಟ್ ತಪಾಸಣೆ ನಡೆಸಿ ಸ್ಥಳೀಯ ಗ್ರಾಮಸ್ಥರನ್ನು ಹೊರತುಪಡಿಸಿ ದೇವೀರಮ್ಮನ ದರ್ಶನಕ್ಕಾಗಿ ಉತ್ಸುಕತೆಯಿಂದ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಾಹನಗಳಲ್ಲಿ ಆಗಮಿಸಿದ್ದ ಸಹಸ್ರಾರು ಜನರನ್ನು ತಡೆದು ಕರೊನಾ ಕಾರಣದಿಂದ ಬೆಟ್ಟಕ್ಕೆ ತೆರಳಲು ಅವಕಾಶವಿಲ್ಲ ಎಂದು ಮಾಹಿತಿ ನೀಡಿ ನಿರ್ಬಂಧ ಹೇರಿದಾಗ ನಿರಾಸೆಯಿಂದ ಹಿಂತಿರುಗಬೇಕಾಯಿತು.ಸಂಜೆ 7 ಕ್ಕೆ ಬೆಟ್ಟದಲ್ಲಿ ಹಚ್ಚಿದ ದೀಪವನ್ನು ನಗರದ ಜನ ನೋಡಿ ಆರತಿ ಬೆಳಗುವ ಪ್ರತೀತಿ ಇದೆ. ಗ್ರಾಮಾಂತರ ಸಿಪಿಐ ಸ್ವರ್ಣ, ತಹಸೀಲ್ದಾರ್ ಡಾ.ಕಾಂತರಾಜ್ ಪತ್ನಿ ಮೇಘನಾ, ಸಿಪಿಐ ಮಂಜುನಾಥ್ ಮತ್ತು ಪತ್ನಿ, ಎಸಿ ರೇಣುಕಾ ಪ್ರಸಾದ್, ಆರ್ ಎಫ್‍ಒ ಸ್ವಾತಿ ಸೇರಿ ಕಂದಾಯ, ಅರಣ್ಯ, ಪೊಲೀಸ್ ಇಲಾಖೆಯ ಹಲವು ಅಧಿಕಾರಿ, ಸಿಬ್ಬಂದಿ ದೇವರ ದರ್ಶನ ಪಡೆದರು.
ಡಿವೈಎಸ್‍ಪಿ ಪ್ರಭು, ಪಿಎಸ್‍ಐ ಗವಿರಾಜ್, ದೇವಾಲಯ ಸಮಿತಿ ಅಧ್ಯಕ್ಷ ಕುಲಶೇಖರ್, ಗೌ.ಅಧ್ಯಕ್ಷ ಕಲ್ಲೇಗೌಡ, ಎಪಿಎಂಸಿ ಅಧ್ಯಕ್ಷ ಶಿವೇಗೌಡ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್‍ಕುಮಾರ್ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
