ಬೆಂಗಳೂರು:ಸಮಷ್ಟಿ ಹಿತ, ಸಮರ್ಪಣಾ ಮನೋಭಾವ, ಅಧ್ಯಾತ್ಮ, ಜ್ಞಾನದ ಜತೆಗೆ ವಿವೇಕವನ್ನು ಬೋಧಿಸಿದ ಆದಿ ಶಂಕರಾಚಾರ್ಯರ ತತ್ತ್ವೋಪದೇಶಗಳಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಷಾ ವ್ಯಾಖ್ಯಾನಿಸಿದ್ದಾರೆ.
ಅರಮನೆ ಮೈದಾನದ ಶ್ರೀಕೃಷ್ಣ ವಿಹಾರದಲ್ಲಿ ಶನಿವಾರ ಏರ್ಪಡಿಸಿದ್ದ ವಿವೇಕ ದೀಪಿನೀ ಮಹಾ ಸಮರ್ಪಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಧರ್ಮನಿರಪೇಕ್ಷತೆಯ ಬಗ್ಗೆ ಈ ಹಿಂದೆ ತಪು್ಪ ವ್ಯಾಖ್ಯಾನ ಮಾಡಲಾಗಿತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ ಇದಕ್ಕೊಂದು ಸ್ಪಷ್ಟತೆ ನೀಡಿ ದೇಶದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಜಾಗೃತಿ ಮೂಡಿಸಿದ್ದು, ವಿಶ್ವವ್ಯಾಪಿ ಗೌರವ ದೊರಕಿಸಿಕೊಟ್ಟಿದ್ದಾರೆ ಎಂದರು.
ಭಿನ್ನಾಭಿಪ್ರಾಯಗಳಿಂದಾಗಿ ಒಡೆದು ಹೋಗಿದ್ದ ಹಿಂದು ಧರ್ಮವನ್ನು ಆದಿ ಶಂಕರಾಚಾರ್ಯರು ಪುನರುತ್ಥಾನ ಮಾಡಿದರು. ಕಾಲ್ನಡಿಗೆಯಲ್ಲೇ ದೇಶ ಸುತ್ತಿ ತಮ್ಮ ಜ್ಞಾನ, ಭಕ್ತಿ, ಅಧ್ಯಾತ್ಮ ವಿವೇಕದ ಬಲದಿಂದ ವಿವಾದಗಳನ್ನು ಬಗೆಹರಿಸಿ ಹಿಂದುಗಳನ್ನು ಒಗ್ಗೂಡಿಸಿ ಮತಾಂತರ ಆಗುವುದನ್ನು ತಡೆದಿದ್ದಾರೆ. ದೇಶದ ನಾಲ್ಕು ಕಡೆ ಮಠಗಳನ್ನು ಸ್ಥಾಪಿಸಿದ್ದರ ಹಿಂದೆ ಶಂಕರಾಚಾರ್ಯರ ದೂರದೃಷ್ಟಿಯಿದೆ. ಮಕ್ಕಳಲ್ಲಿ ಧನಾತ್ಮಕ ಮೌಲ್ಯಗಳು, ಜ್ಞಾನ ಹಾಗೂ ವಿವೇಕ ಮೂಡಿಸುವುದರಿಂದ ಸನ್ಮಾರ್ಗದಲ್ಲಿ ನಡೆಯಲು ಪ್ರೇರಕವಾಗುತ್ತದೆ ಎಂದರು.
ಸಹಕಾರದ ಭರವಸೆ:ಶಂಕರಾಚಾರ್ಯ ವಿರಚಿತ ಪ್ರಶ್ನೋತ್ತರ ರತ್ನ ಮಾಲಿಕೆಯ ಸಂಗ್ರಹವಾದ ವಿವೇಕ ದೀಪಿನೀ ಪಠಣ ಮಾಡುವುದರ ಜತೆಗೆ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಮಕ್ಕಳು ತಪು್ಪ ದಾರಿಗೆ ಹೋಗುವುದು ತಪು್ಪತ್ತದೆ. ಇಂತಹ ಅನುಕರಣೀಯ ಕೆಲಸ ಮಾಡುತ್ತಿರುವ ವೇದಾಂತಿ ಭಾರತಿ ಟ್ರಸ್ಟ್​ಗೆ ಎಲ್ಲ ಸಹಕಾರ ನೀಡುವೆ ಎಂದು ಅಮಿತ್ ಷಾ ಭರವಸೆ ನೀಡಿದರು.
ಸಂಸದ ತೇಜಸ್ವಿ ಸೂರ್ಯ, ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್​ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ಮತ್ತಿತರರಿದ್ದರು.
ಯಾವುದೋ ಕಾಲ, ವಯಸ್ಸಿಗೆ ಸೀಮಿತವಲ್ಲ
ಅದ್ವೈತ ಸಿದ್ಧಾಂತವನ್ನು ಪಸರಿಸಿದ ಶಂಕರಾಚಾರ್ಯರ ಉದಾತ್ತ ಧ್ಯೇಯ, ತತ್ತಾ್ವದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. ಜತೆಗೆ ಮಕ್ಕಳಿಗೂ ಬೋಧಿಸಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕು. ಮಕ್ಕಳಿಗೆ ವಿವೇಕ ದೀಪಿನೀ ಬೋಧಿಸಿದ ಈ ಕಾರ್ಯಕ್ರಮವು ಮನಸ್ಸಿಗೆ ಹಾಗೂ ಪ್ರಭ ಾವ ಬೀರುವುದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶಂಕರಾಚಾರ್ಯರ ಉಪದೇಶಗಳು ಯಾವುದೋ ಕಾಲ, ಗುಂಪು, ಅಥವಾ ವಯಸ್ಸಿಗೆ ಸೀಮಿತವಲ್ಲ. ಶ್ರೇಷ್ಠ ಗುಣ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯಡತೊರೆ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
24 ಭಾಷೆಗಳಿಗೆ ಅನುವಾದ
ದೇಶದ ಎಲ್ಲ ಜನರಿಗೆ ಜ್ಞಾನ, ವಿವೇಕವನ್ನು ತಲುಪಿಸುವ ಉದ್ದೇಶದಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಶ್ಲೋಕಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮೂಲಕ 24 ಭಾಷೆಗಳಿಗೆ ಅನುವಾದ ಮಾಡಲಾಗಿದೆ. ವರ್ಷದ ಹಿಂದೆ ಇದೇ ಮೈದಾನದಲ್ಲಿ ಸಾಮೂಹಿಕ ಪಠಣ ಅಭ್ಯಾಸಕ್ಕೆ ಚಾಲನೆ ನೀಡಲು ಬಂದಿದ್ದ ಪ್ರಧಾನಿ ಮೋದಿ ಪ್ರಭಾವಿತರಾಗಿ ಇಂತಹ ಮಹತ್ವದ ಕಾರ್ಯ ಮಾಡಿದ್ದಾರೆ ಎಂದು ಅಮಿತ್ ಷಾ ಹೇಳಿದರು.
ಲಕ್ಷ ವಿದ್ಯಾರ್ಥಿಗಳು ಭಾಗಿ
ಬೆಂಗಳೂರು ಆಸುಪಾಸಿನ ಜಿಲ್ಲೆಗಳ 500 ಪ್ರೌಢಶಾಲೆಗಳ ಎರಡು ಲಕ್ಷ ವಿದ್ಯಾರ್ಥಿಗಳು ವಿವೇಕ ದೀಪಿನೀ ಸಾಮೂಹಿಕ ಪಠಣ ಅಭ್ಯಾಸ ಮಾಡಿದ್ದಾರೆ. ಮಹಾ ಸಮರ್ಪಣಾ ಕಾರ್ಯಕ್ರಮದಲ್ಲಿ ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಿ ಸೌಂದರ್ಯ ಲಹರಿಯ 11 ಶ್ಲೋಕಗಳನ್ನು ಪಠಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
