ಚಿಕ್ಕಬಳ್ಳಾಪುರ:ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ಇಂದು ಮುದ್ದೇನಹಳ್ಳಿಯಲ್ಲಿ ಸತ್ಯಸಾಯಿ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ 400 ಹಾಸಿಗೆ ಸೌಲಭ್ಯವುಳ್ಳ ಉಚಿತ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರ-ರಾಜ್ಯದ ಪಾತ್ರಗಳ ಕುರಿತು ಮಾತನಾಡಿದರು.
ಇದು ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ, ಈ ಸ್ಥಳದಲ್ಲಿನ ಕಾರ್ಯಕ್ರಮದಲ್ಲಿ ಇರುವುದು ಸೌಭಾಗ್ಯ ಎಂದು ಅಮಿತ್ ಷಾ, ಸತ್ಯಸಾಯಿ ಟ್ರಸ್ಟ್ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದಿಂದ ಕೇವಲ ಏಳು ವರ್ಷಗಳಲ್ಲಿ 500ಕ್ಕೂ ಹೆಚ್ಚು ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡಿದ್ದೇವೆ, 89 ಸಾವಿರಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳು ಪ್ರತಿವರ್ಷ ಅಧ್ಯಯನ ಮಾಡುತ್ತಾರೆ. ಬಹುದೊಡ್ಡ ಮೆಡಿಕಲ್ ಎಜುಕೇಷನ್ ಸೌಕರ್ಯ ಒದಗಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ ಎಂದ ಷಾ, ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ನಿರ್ವಹಿಸಿದ್ದ ಬಗ್ಗೆಯೂ ಮಾತನಾಡಿದರು.
ಇದನ್ನೂ ಓದಿ:ಭಾರತ ಅತಿಮುಖ್ಯ ರಾಷ್ಟ್ರ; ರಷ್ಯಾದ ವಿದೇಶಾಂಗ ಸಚಿವ ಹೀಗಂದಿದ್ಯಾಕೆ?
ಕರ್ನಾಟಕ ಸರ್ಕಾರ ಕರೊನಾದ ಮೂರೂ ಅಲೆಯಲ್ಲೂ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದೆ. ಕರೊನಾ ಪರಿಸ್ಥಿತಿ ನಿರ್ವಹಣೆ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ತ್ವರಿತ ಕೆಲಸದಿಂದ ಲಸಿಕೀಕರಣದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!

ಸಿಳ್ಳೆಕ್ಯಾತ ಎಂದು ಸುಳ್ಳೇ ಹೇಳಿದ್ದ ನಗರಸಭೆ ಸದಸ್ಯೆಯ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seven =
Remember me
