ಬೀದರ್:ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾದಲ್ಲಿ ಹುತಾತ್ಮ ಸ್ಮಾರಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ. ಲೋಕಾರ್ಪಣೆಗೊಳಿಸಿದ್ದಾರೆ.ಗೋರ್ಟಾ ಕಾರ್ಯಕ್ರಮ ನಿಮಿತ್ತ ಅಮಿತ್ ಷಾ ಅವರು ಶನಿವಾರ ರಾತ್ರಿಯೇ ಬೀದರ್ ವಾಯುನೆಲೆ ಕೇಂದ್ರಕ್ಕೆ ಆಗಮಿಸಿ ಅಲ್ಲಿನ ಗೆಸ್ಟ್ ಹೌಸ್​​​ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಗೋರ್ಟಾ ಆಗಮಿಸಿ ಇಲ್ಲಿನ ಲಕ್ಷ್ಮಿ ದೇವಾಲಯದಲ್ಲಿ ಹಿರಿಯರೊಂದಿಗೆ ಸಂವಾದ ನಡೆಸಿ ಹುತಾತ್ಮ ಸ್ಮಾರಕ ಲೋಕಾರ್ಪಣೆ. ನಂತರ ನಡೆದ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾ.3ರಂದು ಬಸವಕಲ್ಯಾಣಕ್ಕೆ ಬಂದಿದ್ದ ಅಮಿತ್ ಷಾ ಇದೀಗ, ಗೋರ್ಟಾದಲ್ಲಿ ಸಿದ್ಧಗೊಂಡ ಹುತಾತ್ಮ ಸ್ಮಾರಕ ಲೋಕಾರ್ಪಣೆಗಾಗಿ ಆಗಮನ. ಅಮಿತ್ ಷಾ ಅವರು ತಿಂಗಳಲ್ಲೇ ಎರಡನೇ ಬಾರಿಗೆ ಗಡಿ ಜಿಲ್ಲೆ ಬೀದರ್​ಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ನಡುವಿನ ಪ್ರಮುಖ ವ್ಯತ್ಯಾಸವೇನು ಗೊತ್ತಾ?1947ರ ಆ.15 ರಂದು ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರು ಈ ಭಾಗದ ಜನ ನಿಜಾಮನ ಕಪಿಮುಷ್ಟಿಯಿಂದ ಮುಕ್ತಿ ಪಡೆಯಲಿಲ್ಲ. ರಾಷ್ಟ್ರದ ಧ್ವಜ ಹಾರಿಸಿದರು ಅಪರಾಧ ಎನ್ನವ ಸ್ಥಿತಿ ನಿರ್ಮಾಣವಾಗಿತ್ತು. ಹೈದರಾಬಾದ್ ಕರ್ನಾಟಕ ಭಾಗ 13 ತಿಂಗಳ ನಂತರ ಸ್ವಾತಂತ್ರ್ಯ ಸಿಕ್ಕಿತು. 1948 ಮೇ 9 ರಂದು ನಿಜಾಮನ ಟೋಳಿ ಗೋರ್ಟಾಗೆ ಲಗ್ಗೆ ಇಟ್ಟು 200ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿತ್ತು. ಈ ದಿನದ ನೆನಪಿಗಾಗಿ 2014ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಗೋರ್ಟಾದಲ್ಲಿ ಹುತಾತ್ಮ ಸ್ಮಾರಕ ರೂಪುರೇಷೆ ಸಿದ್ದಪಡಿಸಿ ಚಾಲನೆ ನೀಡಿತು. ಎಂಟು ವರ್ಷಗಳ ಹಿಂದೆ ಅಮಿತ್ ಷಾ ಭೂಮಿಪೂಜೆ ನೆರವೇರಿಸಿದರು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತು. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇದೀಗ ಉಳಿದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಲಾಗಿದೆ.
ಇದನ್ನೂ ಓದಿ:ತಂದೆ ಮೃತ್ಯು: 5 ವರ್ಷದ ಮಗನ ಕೈ ಹಿಡಿದ ಪೊಲೀಸ್‌ ಹುದ್ದೆ!ಈ ಕಾರ್ಯಕ್ರಮದಲ್ಲಿ ಅಮಿತ್ ಷಾ ಅವರೊಂದಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಭಗವಂತ ಖೂಬಾ, ಪ್ರಭು ಚವ್ಹಾಣ್ ಇತರರು ಭಾಗಿಯಾಗಿದ್ದಾರೆ.
ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ : ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eleven =
Remember me
